ಸುಭಾಷಿತ :

Friday, April 3 , 2020 7:44 AM

ನಿಮ್ಮ ಧೂಳಿನಿಂದಾಗುವ ‘ಅಲರ್ಜಿ’ಗೆ ಪರಿಣಾಮಕಾರಿ ಈ ‘ಮನೆಮದ್ದು’


Tuesday, December 3rd, 2019 7:30 am

ಸ್ಪೆಷಲ್ ಡೆಸ್ಕ್ : ನಿತ್ಯ ಒಂದು ಕಡೆಯಿಂದ ಮತ್ತೊಂದು ಕಡೆಗೆ, ನಗರದ ಸಿಟಿ ಜೀವನದ ಧೂಳಿನಿಂದಾಗಿ ಅನೇಕರು ಅಲರ್ಜಿಯಿಂದಾಗಿ ನೆಗಡಿ, ಉಸಿರಾಟದ ಸಮಸ್ಯೆ, ಎದೆಯ ಬಿಗಿತ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇಂತಹ ಧೂಳಿನ ಅಲರ್ಜಿಗೆ ಏನೇನೋ ಔಷಧಿಗಳ ಪ್ರಯೋಗ ಮಾಡಿದ ನೀವು, ನಾವು ಹೇಳುವಂತೆ ಮನೆ ಮದ್ದು ಮಾಡಿಕೊಂಡು ಬಳಕೆ ಮಾಡಿದ್ರೇ, ಖಂಡಿತವಾಗಿ ನಿಮಗೆ ದೀರ್ಘವಾದಂತ ಪರಿಹಾರ ದೊರೆಯುತ್ತದೆ.

ಹೌದು… ಧೂಳಿನಿಂದ ಉಂಟಾಗುವ ಅಲರ್ಜಿ ನಿಮ್ಮನ್ನು ಮತ್ತಾವುದೋ ರೋಗಕ್ಕೆ ಗುರಿ ಮಾಡಬಹುದು. ಅಂತಹ ಸಮಸ್ಯೆಯಿಂದ ಪಾರಾಗಲು, ಬೇರೆ ಯಾವುದೋ ಔಷಧಿ ಬಳಸುವ ಬದಲು, ಮನೆಯಲ್ಲಿಯೇ ನೀವು ಮನೆ ಮದ್ದು ತಯಾರಿಸುವ ಮೂಲಕ, ಪರಿಹಾರವನ್ನು ಪಡೆಯಬಹುದಾಗಿದೆ. ಆ ಮನೆಮದ್ದುಗಳು ಈ ಕೆಳಗಿನಂತಿವೆ..

ಧೂಳಿನ ಅಲರ್ಜಿಗೆ ಇಲ್ಲಿವೆ ಮನೆಮದ್ದು

ತುಪ್ಪದಿಂದ ತಯಾರಿಕೆ ಮಾಡಬಹುದಾದ ಮನೆ ಮದ್ದು

ನೀವು ನಿತ್ಯ ಧೂಳಿನಿಂದ ಅಲರ್ಜಿ ಅನುಭವಿಸುತ್ತಿರುವಾಗ, ಇಂತಹ ಸಮಸ್ಯೆಯಿಂದ ಪಾರಾಗಲು ನಿಮ್ಮ ಮನೆಯಲ್ಲಿಯೇ ಸಿಗುವಂತ ತುಪ್ಪದಿಂದ ಮನೆ ಮದ್ದನ್ನು ತಯಾರಿಸಬಹುದಾಗಿದೆ. ಅಲರ್ಜಿಯಿಂದ ಉದ್ಬವಿಸುವ ಸೀನಿಗಾಗಿ ಕಾಲು ಚಮಟ ತುಪ್ಪ, ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ತಿಂದ್ರೇ, ಸೀನುವ ಸಮಸ್ಯೆ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ.

ಪುದಿನಾ ಬಳಸಿ ತಯಾರಿಸಬಹುದಾದಂತ ಮನೆ ಮದ್ದು

ಪುದಿನಾ ಎಲೆಯಲ್ಲಿ ವೊಲಾಟೈಲ್ ಎನ್ನುವಂತ ಮೆಂತಾಲ್ ಎಂಬ ಎಣ್ಣೆಯ ಅಂಶವಿದೆ. ಇದರಿಂದಾಗಿ ಶೀತ, ಕೆಮ್ಮಿಗೂ ರಾಮಬಾಣ. ಪುದೀನಾ ಎಲೆ ಹಾಗೂ ಒಂದು ಚಮಚ ಜೇನು ತುಪ್ಪವನ್ನು ಹಾಕಿದ ಟೀ ಮಾಡಿ, ದಿನದಲ್ಲಿ ಕನಿಷ್ಠ ಮೂರು ಬಾರಿ ಸೇವಿಸಿದ್ರೇ, ಅಲರ್ಜಿಯಿಂದ ನಿಮ್ಮನ್ನು ದೂರ ಮಾಡುತ್ತದೆ.

ಅರಿಶಿನ ಬಳಸಿ ತಯಾರಿಸಬಹುದಾಂತ ಮನೆ ಮದ್ದು

ಅರಿಶಿನ ಅಂದ್ರೇ ಸಾಕು ರೋಗ ನಿರೋಧಕ ಶಕ್ತಿ ಇರುವ ಮನೆ ಮದ್ದು. ಇಂತಹ ಅರಿಶಿನವನ್ನು ಒಂದು ಲೋಟ ಹಾಲಿಗೆ ಹಾಕಿಕೊಂಡು, ಜೊತೆಗೆ ಮೆಣಸು ಬೆರೆಸೆ, ಕುದಿಸಿದ ನಂತ್ರ ಅದಕ್ಕೆ ಜೇನುತುಪ್ಪ ಸೇರಿಸಿಕೊಂಡು ತಣ್ಣಗಾದ ನಂತ್ರ ಸೇವಿಸಿದ್ರೇ, ನಿಮ್ಮ ಅಲರ್ಜಿಗೆ ಶೀಘ್ರವಾದಂತ ನಿವಾರಣೆಯನ್ನು ನೀಡಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions