ಸುಭಾಷಿತ :

Friday, April 3 , 2020 5:55 AM

ದುನಿಯಾ ‘ಬರ್ತ್ ಡೇ’ ವಿವಾದ : ಪೊಲೀಸ್ ವಿಚಾರಣೆ ಬಳಿಕ ನಟ ವಿಜಯ್ ಹೇಳಿದ್ದೇನು..?


Tuesday, January 21st, 2020 10:02 pm

ಬೆಂಗಳೂರು : ಕಳೆದ ಇತ್ತೀಚಿಗೆ ಆಚರಿಸಿಕೊಂಡಂತ ತಮ್ಮ ಹುಟ್ಟು ಹಬ್ಬದ ಆಚರಣೆಯಂದು ನಟ ದುನಿಯಾ ವಿಜಯ್ ತಲ್ವಾರ್ ನಿಂದ ಕೇಕ್ ಕತ್ತರಿಸಿ, ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಹೀಗೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಮೂಲಕ ನಟ ದುನಿಯಾ ವಿಜಯ್ ಗೆ ಸಂಕಷ್ಟ ಎದುರಾಗಿತ್ತು.

ಹೌದು, ತಲ್ವಾರ್ ನಿಂದ ಕೇಕ್ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನೋಟಿಸ್ ನೀಡಿದ್ದರು. ಈ ಹಿನ್ನೆಲೆ ದುನಿಯಾ ವಿಜಯ್ ಇಂದು ಪೊಲೀಸ್ ವಿಚಾರಣೆಗೆ ಹಾಜರಾದರು. ಸತತ 2ಗಂಟೆಗಳ ಕಾಲ ದುನಿಯಾ ವಿಜಯ್ ವಿಚಾರಣೆಗೆಗೊಳಪಟ್ಟಿದ್ದರು.

ಬಳಿಕ ಮಾತನಾಡಿದ ದುನಿಯಾ ವಿಜಯ್ ಘಟನೆ ಬಗ್ಗೆ ಎಲ್ಲಾ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದೇನೆ, ಹುಟ್ಟುಹಬ್ಬದ ವೇಳೆ ಅಭಿಮಾನಿಯೊಬ್ಬ ಕೊಟ್ಟ ತಲ್ವಾರ್ ನಿಂದ ಕೇಕ್ ಕಟ್ ಮಾಡಿದೆ, ಆದರೆ ಅದು ತಪ್ಪು ಎನ್ನುವುದು ನನಗೆ ಗೊತ್ತಾಗಿಲ್ಲ, ಇನ್ನುಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದರು.

ಇತ್ತೀಚಿಗೆ ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಆಚರಿಸಿದ್ದ ಅವರು, ಕೇಕ್ ಕತ್ತರಿಸಿದ್ದು ಮಾತ್ರ, ತಲ್ವಾರ್ ಮೂಲಕ ಆಗಿತ್ತು. ತಲ್ವಾರ್ ಹಿಡಿದು, ಅದರಿಂದಲೇ ತಮ್ಮ ಹುಟ್ಟ ಹಬ್ಬದ ಕೇಕ್ ಕತ್ತರಿಸಿದ್ದ ನಟ ದುನಿಯಾ ವಿಜಯ್ ಈ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇಂತಹ ತಲ್ವಾರ್ ನಿಂದ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ವೀಡಿಯೋ ಕೂಡ ವೈರಲ್ ಆಗಿತ್ತು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions