ಬೆಂಗಳೂರು: ಸ್ಟಾರ್‌ ಹೋಟೆಲ್‌ ನಲ್ಲಿ ಡ್ರಗ್ಸ್ ಪಾರ್ಟಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಾಂತ್ ಕಪೂರ್‌ ಗೆ ಸಂಕಷ್ಟ ಎದುರಾಗಿದೆ. ಡ್ರಗ್ಸ್ ಪೆಡ್ಲರ್ ಗಳ ಮಾಹಿತಿ ‌ಪಡೆಯಲು ಹಲಸುರು ಪೊಲೀಸ ರಿಂದ ನೋಟಿಸ್ ಜಾರಿ ಮಾಡಿದ್ದಾರೆ.

BREAKING NEWS: 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ ನವ್ಯಶ್ರೀ; ರಾಜಕುಮಾರ್ ಟಾಕಳೆ ಆರೋಪ

ವಾಟ್ಸ್ ಆಪ್ ಹಾಗೂ ರಿಜಿಸ್ಟರ್ ಪೋಸ್ಟ್ ಮೂಲಕ ‌ನೋಟಿಸ್ ಜಾರಿಗೆ ಸಿದ್ಧತೆ ನಡೆಯುತ್ತಿದೆ. ಸಿದ್ಧಾಂತ್ ಕಪೂರ್ ಒಂದು ಬಾರಿ ವಿಚಾರಣೆ ಮಾಡಿ ಪೊಲೀಸರು ಕಳುಹಿಸಿದ್ದರು. ಸದ್ಯ ಸಿದ್ಧಾಂತ್ ಕಪೂರ್ ಅನ್ನು ಮತ್ತೊಮ್ಮೆ ವಿಚಾರಣೆ ನಡೆಸಲು ಸಿದ್ಧತೆ ನಡೆಯುತ್ತಿದೆ. ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಮತ್ತೆ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ.

BREAKING NEWS: 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ರಂತೆ ನವ್ಯಶ್ರೀ; ರಾಜಕುಮಾರ್ ಟಾಕಳೆ ಆರೋಪ

ಪಾರ್ಟಿಯಲ್ಲಿ ಅಂದು ನೀರಿನಲ್ಲಿ ಯಾರೋ ಏನೋ ಬೆರೆಸಿ ಕೊಟ್ಟಿದ್ದರು ಎಂದಿದ್ದ ಸಿದ್ಧಾಂತ್ ಕಪೂರ್. ಪಾರ್ಟಿ ನಡೆದ ದಿನ ಮಾಡಿಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದು ಸಾಬೀತಾಗಿತ್ತು. ಈ ಹಿನ್ನೆಲೆ ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರು ತಯಾರು ನಡೆಸಿದ್ದಾರೆ.

Share.
Exit mobile version