ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಸ್ಟಂಟ್​ ಮಾಡಲು ಹೋಗಿ ಕಾರೊಂದು ಡಿವೈಡರ್ ಮೇಲಿಂದ ಜಿಗಿದು ರೈಲಿಂಗ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಾಲಕ ಸುರಕ್ಷಿತವಾಗಿದ್ದ, ಕಾರಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಚಾಲಕನನ್ನು ಅಮೃತಸರ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ವಾಹನ ಚಲಾಯಿಸುವಾಗ ಕೆಲವು ಸಾಹಸ ಮಾಡಲು ಪ್ರಯತ್ನಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಸೋಲನ್‌ನ ಎನ್​ಹೆಚ್​-5 ನಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.

ಅಮೃತಸರದ ನಿವಾಸಿಯೊಬ್ಬರು ದುಡುಕಿನ ಚಾಲನೆಯಲ್ಲಿ ಸಾಹಸ ಪ್ರದರ್ಶಿಸಲು ಪ್ರಯತ್ನಿಸಿದ್ದರು. ಘಟನೆಯಲ್ಲಿ ವಾಹನಕ್ಕೆ ಹಾನಿಯಾಗಿದ್ದು, ಚಾಲಕ ಸುರಕ್ಷಿತವಾಗಿದ್ದಾರೆ. ಘಟನೆ ಕುರಿತಂತೆ ಧರಂಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ 279 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸೋಲನ್ ಪೊಲೀಸರು ತಿಳಿಸಿದ್ದಾರೆ.

Share.
Exit mobile version