ಕೆಎನ್‌ ಎನ್‌ ಡಿಜಿಟಲ್‌ ಡೆಸ್ಕ್‌ : ಇಂದಿನ ದಿನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಹೀಗಿರುವಾಗ ಆರೋಗ್ಯ ಕಾಳಜಿ ವಹಿಸಬೇಕು. ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಪ್ರತಿ ದಿನ ಸರಿಯಾದ ಪ್ರಮಾಣದ ನೀರನ್ನು ಕುಡಿಯುವುದು ಮಾತ್ರವಲ್ಲದೆ, ಅದನ್ನು ಹೇಗೆ ಕುಡಿಯುತ್ತೇವೆ ಎಂಬುದು ತಿಳಿದುಕೊಳ್ಳಬೇಕಾಗುತ್ತೆ.
ನೀರನ್ನು ಕುಡಿಯುವಲ್ಲಿ ನಾವು ಮಾಡುವ ತಪ್ಪುಗಳಿಂದ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಆದ್ದರಿಂದ, ಸರಿಯಾದ ಪಾತ್ರೆಯಲ್ಲಿ ನೀರನ್ನು ಕುಡಿಯುವುದು ಬಹಳ ಮುಖ್ಯ. ನಿಮ್ಮ ಆರೋಗ್ಯವನ್ನುವೃದ್ಧಿಸಿಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ.
ಗಾಜು: ಸಾಮಾನ್ಯ ನೀರು ಕುಡಿಯಲು ಗಾಜಿನ ಲೋಟ ಬಳಸುತ್ತಾರೆ. ನೀರನ್ನು ಗಾಜಿನ ಬಾಟಲಿಯಲ್ಲಿ ಇರಿಸಿದಾಗ, ಅದು ನೀರಿನ ಗುಣಮಟ್ಟದಲ್ಲಿ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.
ತಾಮ್ರ: ತುಂಬಾ ಅನಾಧಿಕಾಲದಿಂದಲೂ ತಾಮ್ರದ ಪಾತ್ರಗಳು ಬಳಕೆಯಲ್ಲಿದೆ. ಅಂದು ಎಲ್ಲರ ಮನೆಯಲ್ಲೂ ತಾಮ್ರದ ಲೋಟ, ತಾಮ್ರದ ತಟ್ಟೆಗಳನ್ನು ಊಟಕ್ಕೆ ಬಳಸಲಾಗುತ್ತಿತ್ತು. ತಾಮ್ರದ ಪಾತ್ರೆಯಲ್ಲಿ ನೀರನ್ನು ದೀರ್ಘಕಾಲ ಬಿಟ್ಟಾಗ ತಾಮ್ರದ ಸಣ್ಣ ಕಣಗಳು ನೀರಿನೊಂದಿಗೆ ಸೇರಿ ನೀರು ತಾಮ್ರವಾಗುತ್ತದೆ.
ಮಣ್ಣಿನ ಮಡಿಕೆ: ಮಣ್ಣಿನ ನೀರಿನ ಬಾಟಲಿಗಳು ಯಾವುದೇ ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿರುವುದಿಲ್ಲ. ಮಣ್ಣಿನ ಬಾಟಲ್ ನೀರನ್ನು ಕುಡಿಯುವುದು ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ನೀರನ್ನು ಕುಡಿಯುವುದರಿಂದ ಆ್ಯಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೊಡೆದೋಡಿಸಲು ಸಹಾಯವಾಗುತ್ತದೆ.

 

Share.
Exit mobile version