ಸುಭಾಷಿತ :

Wednesday, January 29 , 2020 9:34 PM

ಈ ಕಾರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ‘ಒಂದು ಲೋಟ ಬಿಸಿ ನೀರು ಕುಡಿಯಿರಿ’


Saturday, December 7th, 2019 5:34 am

ಸ್ಪೆಷಲ್ ಡೆಸ್ಕ್ : ಒಬ್ಬ ಆರೋಗ್ಯವಂತ ಮನುಷ್ಯ ಪ್ರತಿದಿನ ಕಡಿಮೆ ಎಂದರೆ ಎರಡು ಲೀಟರ್ ನೀರು ಕುಡಿಯಲೇ ಬೇಕು. ಹಾಗಂತ ನೀವು ಯಾವುದೋ ನೀರು ಕುಡಿದರೆ ಅದರಿಂದ ಸಮಸ್ಯೆಗಳೇ ಹೆಚ್ಚು. ನೀವು ಕುಡಿಯುವುದೇ ಆದರೆ ಬಿಸಿ ನೀರು ಸೇವನೆ ಮಾಡಿ. ಕಾಲ ಯಾವುದೇ ಇರಲಿ ಬಿಸಿ ನೀರು ಕುಡಿದರೆ ಆರೋಗ್ಯಕ್ಕೆ ಬಲು ಉಪಯೋಗಿ….

ಪ್ರತಿನಿತ್ಯ ಬೆಳಿಗ್ಗೆ ಬಿಸಿ ನೀರು ಕುಡಿದರೆ ದೇಹದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ದೇಹದಲ್ಲಿ ರಕ್ತ ಸಂಚಾರ ಸುಗಮಗೊಳ್ಳುತ್ತದೆ.

ಬೆಳಿಗ್ಗೆ ಬಿಸಿ ನೀರು ಸೇವನೆಯಿಂದ ದೇಹದಲ್ಲಿರುವ ಕೊಬ್ಬಿನಾಂಶ ಕಡಿಮೆಯಾಗಿ ದೇಹ ತೂಕ ಕಡಿಮೆಯಾಗುತ್ತದೆ.

ಅಜೀರ್ಣತೆಯಿಂದ ಬಳಲುತ್ತಿರುವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿದರೆ ಉತ್ತಮ.

ಬೆಳಗ್ಗೆ ಬಿಸಿ ನೀರಿಗೆ ನಿಂಬೆ ರಸ, ಜೇನು ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ನಿರುಪಯುಕ್ತ ವಸ್ತುಗಳು ಹೊರ ಹೋಗುತ್ತವೆ.

ಶೀತ ಹಾಗು ಗಂಟಲು ನೋವಿದ್ದರೆ ಒಂದು ಲೋಟ ಬಿಸಿ ನೀರಲ್ಲಿ ಒಂದೆರಡು ತುಳಸಿ ದಳಗಳನ್ನು ಹಾಕಿ ಕೆಲ ಹೊತ್ತು ನೆನೆಯಲು ಬಿಟ್ಟು ನಂತರ ಆ ನೀರು ಕುಡಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.

ಬಿಸಿ ನೀರು ಕುಡಿಯುವ ಅಭ್ಯಾಸವಿದ್ದರೆ ಕೂದಲ ಬೆಳವಣಿಗೆ ಉತ್ತಮಗೊಳ್ಳುತ್ತದೆ. ಇದರಿಂದ ನರಗಳು ಪ್ರಚೋದನೆಗೊಂಡು, ಕೂದಲುಗಳ ಬೇರುಗಳು ಬಲಿಷ್ಠಗೊಳ್ಳುತ್ತವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions