ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀವ ವೀಡಿಯೋ ಪ್ರಕರಣದಲ್ಲಿ ಪದೇ ಪೇದ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಇದು ಸರಿಯಲ್ಲ. ಎಸ್ಐಟಿಯಿಂದ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಅವರದ್ದು ತಪ್ಪಿಲ್ಲ ಎಂದರೆ ಆಚೇ ಬರುತ್ತಾನೆ ಎಂಬುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, “ಇದು ಹೊಳೆನರಸೀಪುರಕ್ಕೆ ಸಂಬಂಧಿಸಿದ ವಿಚಾರ. ಕಾರ್ತಿಕ್, ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಅವರ ನಡುವೆ ನಡೆದ ಜಗಳದಿಂದ ಆಚೆ ಬಂದ ವಿಚಾರ. ಇಂತಹ ಸಂಧರ್ಭದಲ್ಲಿ ರೇವಣ್ಣ, ಕುಮಾರಸ್ವಾಮಿ ಅವರು ಪ್ರಜ್ವಲ್ ಗೆ ಬಂಧನಕ್ಕೆ ಒಳಗಾಗು ಎಂದು ಕಿವಿ ಮಾತು ಹೇಳಬೇಕಾಗಿತ್ತು ಎಂದರು.

ದೇವರಾಜೇಗೌಡರು ಅನೇಕ ದಿನಗಳಿಂದ ವಿಡಿಯೋ ವಿಚಾರದಲ್ಲಿ ಆರೋಪ ಮಾಡುತ್ತಲೇ ಬಂದಿದ್ದರು. ಎಸ್ ಐಟಿಯನ್ನು ಅವರು ಸಹ ಸ್ವಾಗತ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಳೆದು ತಂದರೋ ಗೊತ್ತಿಲ್ಲ ಎಂದು ಹೇಳಿದರು.

ಅಶೋಕ್ ಅವರು ಪದೇ, ಪದೇ ಸಮುದಾಯವನ್ನು ಎಳೆದು ತರುತ್ತಿರುವುದು ಸೂಲ್ತವಲ್ಲ. ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ವಿರುದ್ದ ಪ್ರತಿಭಟನೆಯನ್ನು ಏತಕ್ಕೆ ಮಾಡುತ್ತಾರೆ. ದೇಶದ ಪ್ರಧಾನಿಗಳು ಇದನ್ನು ತಿರುಚಿರುವ ವಿಡಿಯೋ ಎಂದು ಹೇಳಿಕೆಯನ್ನು ಏಕೆ ನೀಡಿದರು ಎಂಬುದೇ ಗೊತ್ತಿಲ್ಲ. ತನಿಖೆ ನಡೆಯುತ್ತಿದೆ ಪ್ರಜ್ವಲ್ ರೇವಣ್ಣ ಅವರದ್ದು ತಪ್ಪಿಲ್ಲ ಎಂದರೆ ಆಚೇ ಬರುತ್ತಾನೆ. ಆದರೆ ಪದೇ, ಪದೇ ಡಿ.ಕೆ.ಶಿವಕುಮಾರ್ ಅವರ, ಸಿದ್ದರಾಮಯ್ಯ ಅವರ ಹೆಸರನ್ನು ಎಳೆದು ತರುವುದು ಸೂಕ್ತವಲ್ಲ ಎಂದರು.

ಕಾಂಗ್ರೆಸ್ ನ ‘ಗ್ಯಾರಂಟಿ ಯೋಜನೆಗಳೇ’ ನನ್ನ ಕೈ ಹಿಡಿಯುತ್ತವೆ : ಗೀತಾ ಶಿವರಾಜ್ ಕುಮಾರ ವಿಶ್ವಾಸ

ನಾಳೆ ಬೆಳಗ್ಗೆ 10.30ಕ್ಕೆ ‘SSLC’ ಫಲಿತಾಂಶ ಪ್ರಕಟ : ಈ ರೀತಿ ‘ರಿಸಲ್ಟ್’ ಚೆಕ್ ಮಾಡಿ | Karnataka SSLC Exam results 2024

Share.
Exit mobile version