ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಆರೋಗ್ಯವಾಗಿರಲು ಉತ್ತಮ ಆಹಾರ ಸೇವನೆ ಮಾಡಬೇಕು ನಿಜಾ. ಹಾಗೇ ನಮ್ಮ ಜೀವನ ಶೈಲಿಯೂ ಕೂಡ ಹೆಚ್ಚಾಗಿರುತ್ತದೆ.

BREAKING NEWS : ರಾಜ್ಯದ ‘108 Ambulance’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ವಾರದೊಳಗೆ ಬಾಕಿ ವೇತನ ಬಿಡುಗಡೆಗೆ ‘ಜಿವಿಕೆ’ ಸಂಸ್ಥೆ ಗ್ರೀನ್ ಸಿಗ್ನಲ್

ಅದರ ಜೊತೆಗೆ ಆಹಾರದ ವಿಷಯದಲ್ಲಿ ಸಾಕಷ್ಟು ಶಿಸ್ತು ಪಾಲಿಸಬೇಕು. ಬೆಳಗಿನ ಉಪಾಹಾರದಿಂದ ಹಿಡಿದು ರಾತ್ರಿಯ ಊಟದವರೆಗೆ ಹೆಚ್ಚು ಜಾಗರೂಕರಾಗಿರಬೇಕು. ಒಂದು ವೇಳೆ ಆಹಾರದ ವಿಚಾರವಾಗಿ ನಿರ್ಲಕ್ಷ್ಯ ತೋರಿದರೆಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಆಹಾರದ ವಿಚಾರವಾಗಿ ಯಾವುದಾದರೂ ಗೊಂದಲವಿದ್ದರೆ, ತಜ್ಞರ ಅಭಿಪ್ರಾಯ ಕೇಳುವುದು ಉತ್ತಮ. ಊಟದ ಮೊದಲು ಮತ್ತು ನಂತರ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು. ಈ ಬಗ್ಗೆ ನಿಮಗೆ ತಿಳಿಯದಿದ್ದರೆ ಪೌಷ್ಟಿಕತಜ್ಞರು ನೀಡಿದ ಸಲಹೆ ಇಲ್ಲಿವೆ.

BREAKING NEWS : ರಾಜ್ಯದ ‘108 Ambulance’ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : ವಾರದೊಳಗೆ ಬಾಕಿ ವೇತನ ಬಿಡುಗಡೆಗೆ ‘ಜಿವಿಕೆ’ ಸಂಸ್ಥೆ ಗ್ರೀನ್ ಸಿಗ್ನಲ್

ಕೆಲವರು ತಿಂದ ತಕ್ಷಣ ಸ್ನಾನ ಮಾಡುತ್ತಾರೆ. ಮತ್ತೆ ಕೆಲವರು ಹಣ್ಣುಗಳನ್ನು ತಿನ್ನುತ್ತಾರೆ. ಹೀಗೆ ಮಾಡುವುದು ಒಳ್ಳೆಯದಾ? ಈ ಬಗ್ಗೆ ಇಲ್ಲದೆ ಮಾಹಿತಿ.
ಊಟದ ತಕ್ಷಣ ಸ್ನಾನ ಮಾಡಬೇಡಿ

ಊಟವಾದ ತಕ್ಷಣ, ಚಯಾಪಚಯ ಕ್ರಿಯೆಗೆ ಅಗತ್ಯವಿರುವಂತೆ ಹೊಟ್ಟೆಯ ಸುತ್ತಲೂ ರಕ್ತವು ಧಾವಿಸುತ್ತದೆ. ಇಂತಹ ಸಮಯದಲ್ಲಿ ಸ್ನಾನ ಮಾಡುವುದರಿಂದ ದೇಹದ ಉಷ್ಣತೆ ಬದಲಾಗುತ್ತದೆ. ತಾಪಮಾನವು ಸಾಮಾನ್ಯ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ವ್ಯಾಯಾಮ ಮಾಡಬೇಡಿ
ತಿಂದ ಬಳಿಕ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಊಟವಾದ ತಕ್ಷಣ ತೀವ್ರವಾದ ವ್ಯಾಯಾಮ ಮಾಡುವುದರಿಂದ ಜೀರ್ಣ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಇದು ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗಬಹುದು.
ಹಣ್ಣುಗಳನ್ನು ಸೇವಿಸಬೇಡಿ

ಊಟದ ನಂತರ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ. ಅಲ್ಲದೆ ಊಟದ ಜೊತೆ ಜೊತೆಗೂ ಹಣ್ಣು ಹಂಪಲುಗಳನ್ನು ತಿನ್ನಬೇಡಿ. ಏಕೆಂದರೆ ಇದು ನಾವು ತಿನ್ನುವ ಹಣ್ಣುಗಳಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಕಾಫಿ ಕುಡಿಯಬೇಡಿ
ಕಾಫಿಯಲ್ಲಿ ಫೀನಾಲಿಕ್ ಸಂಯುಕ್ತಗಳಿರುತ್ತವೆ. ಇದು ಆಹಾರದಿಂದ ಕಬ್ಬಿಣದಂತಹ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುವಂತೆ ಮಾಡುತ್ತದೆ.
ಮದ್ಯಪಾನ ಅಥವಾ ಧೂಮಪಾನ ಮಾಡಬೇಡಿ. ಇವುಗಳನ್ನು ಯಾವಾಗ ಸೇವಿಸಿದರೂ, ಆರೋಗ್ಯಕ್ಕೆ ಹಾನಿಕಾರಕ. ಊಟದ ನಂತರ ಅವುಗಳನ್ನು ಸೇವಿಸುವುದರಿಂದ ಆರೋಗ್ಯದ ಅಪಾಯ ಮತ್ತಷ್ಟು ಹೆಚ್ಚಾಗುತ್ತವೆ.

Share.
Exit mobile version