ಸುಭಾಷಿತ :

Tuesday, April 7 , 2020 6:59 PM

ಭಯೋತ್ಪಾದನೆ ವಿಚಾರದಲ್ಲಿ ರಾಜಿಯೇ ಇಲ್ಲ : ಪಾಕ್ ಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಖಡಕ್ ಎಚ್ಚರಿಕೆ


Monday, February 24th, 2020 3:10 pm

ಅಹಮದಾಬಾದ್ : ಭಾರತದ ಜೊತೆಗಿನ ಸಂಬಂಧ ಅತ್ಯುತ್ತಮವಾಗಿದೆ. ದೇಶದ ರಕ್ಷಣಾ ಸಾಮರ್ಥ್ಯ, ತಾಂತ್ರಿಕತೆ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಉತ್ತಮ ದೇಶವೆಂಬುದಾಗಿ ಭಾರತ ಹೆಸರುಗಳಿಸಿದೆ. ಇಂತಹ ದೇಶಕ್ಕೆ ಭೇಟಿ ನೀಡಿದ್ದು ಖುಷಿ ತಂದಿದೆ. ಅಮೇರಿಕಾ ಎಂದಿಗೂ ಭಯೋತ್ಪಾದನೆಗೆ ಕುಮ್ಮಕ್ಕು, ಪ್ರೋತ್ಸಾಹ ನೀಡುವುದಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ರಾಜಿಯೇ ಇಲ್ಲ ಎಂಬುದಾಗಿ ಹೇಳುವ ಮೂಲಕ ಪಾಕ್ ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ರು.

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಹಮಾದಾಬಾದ್ ಗೆ ವಿಶೇಷ ವಿಮಾನದಲ್ಲಿ ಇಂದು ಬಂದಿಳಿದ್ರು. ಗಾಂಧಿಜೀಯವರು ಭೇಟಿ ನೀಡಿದ್ದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಅವರು, ಚರಕದ ಮೂಲಕ ನೂಲು ತೆಗೆಯುವ ಮೂಲಕ, ಅಚ್ಚರಿಯನ್ನು ವ್ಯಕ್ತ ಪಡಿಸಿದ್ರು. ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಗ್ರೇಟ್ ಫ್ರೆಂಡ್, ಭಾರತಕ್ಕೆ ಬಂದಿದ್ದು ಖುಷಿ ತಂದಿದೆ ಎಂದು ಬರೆದಿದ್ದರು. ಆಲ್ಲಿಂತ ದೇಶದ ದೊಡ್ಡ ಕ್ರೀಢಾಂಗಣ ಮೊಟೆರಾ ಕ್ರೀಢಾಂಗಣಕ್ಕೆ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಆಗಮಿಸಿದ್ರು.

ಈ ವೇಳೆ ಮಾತನಾಡಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನರೇಂದ್ರ ಮೋದಿಯವರ ಸಾಧನೆ ದಂತಕಥ. ಚಾಯ್ ವಾಲಾ ಪ್ರಧಾನಿಯಾಗಿದ್ದು ಎಲ್ಲರಿಗೂ ಪ್ರೇರಣೆ. ಮೋದಿ ಅತ್ಯದ್ಬುತ ನಾಯಕ, ಹಗಲು-ರಾತ್ರಿ ದೇಶಕ್ಕಾಗಿ ದುಡಿಯುತ್ತಿದ್ದಾರೆ. ಮೋದಿ ಭಾರತದ ಚಾಂಪಿಯನ್. ಸ್ವತಂತ್ರ ಮತ್ತು ಸಮೃದ್ಧ ದೇಶವಾದ ಭಾರತ ಬೆಳೆದಿದ್ದು ಇಡೀ ವಿಶ್ವಕ್ಕೆ ಮಾದರಿ. ಕಳೆದ 70 ವರ್ಷಗಳಲ್ಲಿ ಭಾರತದ ಆರ್ಥಿಕತೆ 6 ಪಟ್ಟು ಹೆಚ್ಚು ಬೆಳೆದಿದೆ ಎಂದು ಗುಣಗಾನ ಮಾಡಿದ್ರು.

ಒಂದೇ ದಶಕದಲ್ಲಿ 27 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಪ್ರತಿ ಹಳ್ಳಿಗೂ ವಿದ್ಯುತ್, ಶೌಚಾಲಯ, 6 ಕೋಟಿ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ಸಿಕ್ಕಿದೆ. 2 ಸಾವಿರ ಚಿತ್ರಗಳನ್ನು ನಿರ್ಮಿಸುವ ಬಾಲಿವುಡ್ ಹೊಂದಿರುವ ದೇಶವಿದು. ದಿಲ್ ವಾಲೇ ದುನಿಯಾ ಲೇಜಾಯೆಂಗ್, ಶೋಲೆ ಚಿತ್ರಗಳು ವಿಶ್ವಾದ್ಯಾಂತ ಜನಪ್ರಿಯತೆ ಗಳಿಸಿದ್ದವು ಎಂದು ಹೇಳಿದ್ರು.

ಸಚಿನ್ ತೆಂಡೂಲ್ಕರ್ ರಿಂದ ವಿರಾಟ್ ಕೊಹ್ಲಿಯಂತಹ ಆಟಗಾರರನ್ನು ಹೊಂದಿರುವ ದೇಶ. ವಿಶ್ವದ ಭಯೋತ್ವದಕತೆಗೆ ಅಮೇರಿಕಾದಿಂದ ಎಂದೆಂದಿಗೂ ವಿರೋಧವಿದೆ. ಯಾವತ್ತೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡೋದಿಲ್ಲ. ಭಯೋತ್ಪಾದನೆಯನ್ನೂ ಸಹಿಸೋದಿಲ್ಲ ಎಂಬುದಾಗಿ ಹೇಳುವ ಮೂಲಕ ಪಾಕ್ ಗೆ ಖಡಕ್ ಎಚ್ಚರಿಕೆಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions