ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಅತ್ಯಂತ ವಿನಯಶೀಲ ನಾಯಿಗಳು ಸಹ ಕೆಲವೊಮ್ಮೆ ವಿವಿಧ ಕಾರಣಗಳಿಂದಾಗಿ ಆಕ್ರಮಣಕಾರಿಯಾಗಬಹುದು. ಆ ಸಾಕು ನಾಯಿ ಅವ್ರ ಮಾಲೀಕರ ಮೇಲೆ ದಾಳಿ ಮಾಡುವ ಅನೇಕ ಘಟನೆಗಳು ನಡೆದಿವೆ. ಅದ್ರಂತೆ ರೆಡ್ಡಿಟ್ ಬಳಕೆದಾರರೊಬ್ಬರು, ಇತ್ತೀಚೆಗೆ ಗ್ರೂಮಿಂಗ್ ಸೆಷನ್ʼನಿಂದ ಹಿಂದಿರುಗಿದ ನಂತ್ರ ತನ್ನ ಸಾಕು ನಾಯಿ ಆಕ್ರಮಣಕಾರಿಯಾಗಿ ಬದಲಾಗಿರುವ ಬಗ್ಗೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

ಎಮ್ಮಾ ಎಂಬ ಹೆಸರಿನ ತನ್ನ ಮುದ್ದಿನ ನಾಯಿಯು ಗ್ರೂಮರ್ʼನಿಂದ ಮರಳಿ ಪಡೆದ ನಂತ್ರ ಏಕೆ ವಿಚಿತ್ರವಾಗಿ ವರ್ತಿಸುತ್ತಿದೆ ಎನ್ನುವ ಬಗ್ಗೆ ಮಹಿಳೆ ಗೊಂದಲಕ್ಕೊಳಗಾಗಿದ್ದು, ನಂತ್ರ ರೆಡ್ಡಿಟ್ ಪೋಸ್ಟ್ʼನಲ್ಲಿ ಇದನ್ನ ಬಹಿರಂಗಪಡಿಸಿದ್ದಾರೆ. ಎಮ್ಮಾ ಅನ್ನೋ ನಾಯಿ ನಿಜವಾಗಿಯೂ ನಾಲ್ಕು ತಿಂಗಳ ಕಾಲ ತಪ್ಪಾದ ನಾಯಿಯೊಂದಿಗೆ ವಾಸವಿದ್ದು, ಅದ್ರಂತೆ ಕಲಿತರಬೋದು ಎಂದು ಭಾವಿಸಿದ್ರು.

ದಿ ಮಿರರ್ʼನ ವರದಿಯ ಪ್ರಕಾರ, ಬೇಸಿಗೆಗೆ ಮುಂಚಿತವಾಗಿ, ಮಾಲೀಕರು ಜರ್ಮನ್ ಶೆಫರ್ಡ್ / ನ್ಯೂಫೌಂಡ್ ಲ್ಯಾಂಡ್ ಮಿಶ್ರಣವಾದ ತನ್ನ ನಾಯಿಯನ್ನ ಗ್ರೂಮರ್ ಬಳಿಗೆ ಟ್ರಿಮ್ʼಗಾಗಿ ಕರೆದೊಯ್ದರು ಮತ್ತು ನಂತ್ರ ಎಂದಿನಂತೆ ಅದನ್ನ ಎತ್ತಿಕೊಂಡರು. ಆದ್ರೆ, ಮನೆಯಿಂದ ಹೊರಹೋಗುವ ಮೊದಲೇ, ತನ್ನ ನಾಯಿ ತನ್ನಂತೆ ಏಕೆ ವರ್ತಿಸುತ್ತಿಲ್ಲ ಎಂದು ಮಹಿಳೆ ಅಚ್ಚರಿಗೊಂಡ್ರು. ಆದಾಗ್ಯೂ, ಎಮ್ಮಾ ನಾಯಿಯು ಮನೆಗೆ ಮರಳಿದ್ದು, ಪ್ರಶಾಂತ ವಾತಾವರಣದಲ್ಲಿ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಬೋದು ಎಂದು ಮಹಿಳೆ ನಂಬಿದ್ದಳು.

“ಎಮ್ಮಾ ನಿಜಕ್ಕೂ ಹೆಚ್ಚು ಆಕ್ರಮಣಕಾರಿಯಾಗಲು ಪ್ರಾರಂಭಿಸಿದ್ದು, ನಾನು ಅವಳಿಗೆ ಚೂರುಗಳನ್ನ ತಿನ್ನಿಸುವಾಗ ನನ್ನ ಕೈಯನ್ನು ಕಚ್ಚಿದಳು. ಇನ್ನು ಅವಳಿಗೆ ತಿಳಿದಿರುವ ಮತ್ತು ಪರಿಚಿತರಾಗಿದ್ದ ಜನರನ್ನು ನಿರ್ಲಕ್ಷಿಸಿದಳು. ಈ ನಾಯಿಯು ನನ್ನೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದು, ನನ್ನ ತಂದೆ, ಸಹೋದರ ಮತ್ತು ನೆರೆಹೊರೆಯವರನ್ನ ನಿರ್ಲಕ್ಷಿಸ್ತಿದೆ” ಎಂದು ರೆಡ್ಡಿಟ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಾಲ್ಕು ತಿಂಗಳ ನಂತರವಷ್ಟೇ ಗ್ರೂಮರ್ ಕರೆ ಮಾಡಿದ ನಂತ್ರ ಮತ್ತು ಇನ್ನೊಬ್ಬ ಮಾಲೀಕನು ಅದೇ ರೀತಿಯ ನಾಯಿಯೊಂದಿಗೆ ಇದೇ ರೀತಿಯ ದೂರುಗಳನ್ನ ಹೊಂದಿದ್ದರು. ನಂತ್ರ ಅಸಲಿ ವಿಷ್ಯ ಬಯಲಾಗಿದ್ದು, ಮಹಿಳೆಯ ಬಳಿಯಿದ್ದ ಆಕೆಯ ಸಾಕುನಾಯಿ ಎಮ್ಮಾ ಅಲ್ಲ ಅನ್ನೋದು ಗೊತ್ತಾಗಿದೆ. ಅಸಲಿಗೆ ಈ ನಾಯಿ ವಯಸ್ಸಾದ ದಂಪತಿಗೆ ಸೇರಿದ್ದು, ಎಮ್ಮಾಳಂತೆ ಇರುವುದ್ರಿಂದ ಮಹಿಳೆಯ ತಪ್ಪಾಗಿ ಮಹಿಳೆಗೆ ಕಳಿಸಿರುವುದು ಬಹಿರಂಗವಾಗಿದೆ.

ಆ ಮಹಿಳೆ ಸಧು ತನ್ನ ಎಮ್ಮಾ ನಾಯಿಯನ್ನ ಮರಳಿ ಪಡೆದಿದ್ದರೂ, ಏನಾಯಿತು ಎಂದು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಇನ್ನು ಘಟನೆಗೆ ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಟ್ಟ ಗ್ರೂಮರ್, ಉಡುಗೊರೆ ಬುಟ್ಟಿಗಳನ್ನ ಮತ್ತು ಮತ್ತೊಮ್ಮೆ ತನ್ನ ವಿಷಾದವನ್ನ ವ್ಯಕ್ತಪಡಿಸುವ ಟಿಪ್ಪಣಿಯೊಂದಿಗೆ ತಲುಪಿಸಿದೆ.

Share.
Exit mobile version