ಕೆಎನ್‌ಎನ್‌ಸಿನಿಮಾಡೆಸ್ಕ್: ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್ ಕುಮಾರ್ ಎರಡನೇ ಮಗ ಯುವರಾಜ್ ಕುಮಾರ್ ಸಿನಿ ರಂಗಕ್ಕೆ ಪಾದಾರ್ಪಣೆ ಮಾಡ್ತಿರೋದು ಗೊತ್ತಿರೋ ಸಂಗತಿ. ಡೊಡ್ಮನೆ ಮೊಮ್ಮಗನ ಚೊಚ್ಚಲ ಸಿನೆಮಾ ಇದಾಗಿದ್ದು, ‘ಯುವ’ ಎಂಬ ಟೈಟಲ್ ಮೂಲಕವೇ ಸಿನಿರಂಗದಲ್ಲಿ ಪಯಣ ಆರಂಭಿಸಲು ಹೊರಟಿದ್ದಾರೆ. ಶುಕ್ರವಾರ ಚಿತ್ರದ ಟೈಟಲ್ ಟೀಸರ್ ಲಾಂಚ್ ಮಾಡಿದೆ ಹೊಂಬಾಳೆ ಫಿಲ್ಮ್ಸ್ . ಈ ಮೂಲಕ ಯುವ ರಾಜ್ ಕುಮಾರ್ ಸಿನಿಪ್ರಪಂಚಕ್ಕೆ ಅಧಿಕೃತ ಪ್ರವೇಶ ಪಡೆದು ಯುವ ಪರ್ವ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ
ರಿಲೀಸ್ ಆಗಿರುವ ಟೈಟಲ್ ಟೀಸರ್ ಈಗಾಗಲೇ ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಸೆಟ್ ಮಾಡಿದ್ದು, ಚಿತ್ರಿಕರಣ ಕೂಡ ಭರದಿಂದ ಸಾಗಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ , ಹೊಂಬಾಳೆ ಫಿಲ್ಮ್ ನಿರ್ಮಾಣ ಸಂಸ್ಥೆ ಯ ವಿಜಯ್ ಕಿರಗಂದೂರು‘ ಸಾರಥ್ಯದಲ್ಲಿ ಮೂಡಿ ಬರ್ತಿರೋ ಯುವ ಸಿನೆಮಾ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನ ಹುಟ್ಟುಹಾಕಿದೆ.
ದೈಹಿಕವಾಗಿ ನಮ್ಮಿಂದ ಅಗಲಿರುವ ಅಪ್ಪು ಉತ್ತರಾಧಿಕಾರಿಯಂದೇ ಬಿಂಬಿತರಾಗಿದ್ದ ಯುವ ಮೊದಲ ಸಿನಿಮಾಗಾಗಿ ಅಭಿಮಾನಿಗಳು ಕಾತುರರಾಗಿದ್ದರು. ಈಗ ರಿಲೀಸ್ ಆಗಿರುವ ಟೈಟಲ್ ಪೋಸ್ಟರ್ ನಲ್ಲಿ ಯುವರಾಜ್ ಕುಮಾರ್ ಲುಕ್ ಗೆ ಫಿದಾ ಆಗಿದ್ದಾರೆ. ಉದ್ದ ದಾಡಿ ಬಿಟ್ಟು,ಖಡಕ್ ಲುಕ್ ನಲ್ಲಿ ಬೈಕ್ ಜೊತೆ ಯುವ ಕೊಟ್ಟಿರೋ ಲುಕ್ ನೋಡಿ ‘ಯುವ’ ಸಿನೆಮಾ ಮೇಲಿನ ನಿರೀಕ್ಷೆಗಳು ಗರಿ ಗೆದರಿ ನಿಂತಿವೆ.ಈಗ ರಿಲೀಸ್ ಆಗಿರೋ ಪೊಸ್ಟರ್ ನಲ್ಲಿ ರಿಲೀಸ್ ದಿನಾಂಕ ವನ್ನೂ ಅನೌನ್ಸ್ ಮಾಡಿರೋ ಚಿತ್ರತಂಡ ಈ ವರ್ಷದ ಕೊನೆಯ ತಿಂಗಳಿನಲ್ಲಿ ಅಂದ್ರೆ 22-12-2023 ರಂದು ಥಿಯೇಟರ್ ಗೆ ಲಗ್ಗೆ ಇಡೋದಾಗಿ ಹೇಳಿಕೊಂಡಿದೆ.ಈಗಷ್ಟೇ ಚಿತ್ರಿಕರಣ ಆರಂಭಿಸಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಯುವ ಚಿತ್ರದ ಕುರಿತಂತೆ ಅಪ್ಡೇಟ್ ಕೊಡ್ತಾರೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿ ಬಳಗ.