ದೊಡ್ಡಬಳ್ಳಾಪುರ : ಹಳೆ ವೈಷಮ್ಯ ಹಿನ್ನೆಲೆ, ಎಣ್ಣೆ ಪಾರ್ಟಿಗೆ ಕರೆದೋಯ್ದು, ಹೋಟೆಲ್ ಮಾಲೀಕನನ್ನ ಹತ್ಯೆಗೈದ ಸ್ನೇಹಿತರು!

ದೊಡ್ಡಬಳ್ಳಾಪುರ : ಮನೆಯಲ್ಲಿ ತಾಯಿಗೆ ಸ್ನೇಹಿತರ ಜೊತೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ ಯುವಕನೊಬ್ಬ ಮರುದಿನ ಹೆಣವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ. ಹಳೆ ವೈಶಮ್ಯ ಹಿನ್ನೆಲೆಯಲ್ಲಿ ಸ್ನೇಹಿತರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ದೊಡ್ಡಬಳ್ಳಾಪುರ ನಗರದ ತ್ಯಾಗರಾಜನಗರದ ನಿವಾಸಿಯಾಗಿದ್ದ ಬುಲೆಟ್ ರಘು (38) ಹತ್ಯೆಗೀಡಾಗಿರುವ ವ್ಯಕ್ತಿ. ಬೆಳಗಾವಿಯಲ್ಲಿ ಹೋಟೆಲ್​ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದ. ಬಾಶೆಟ್ಟಿಹಳ್ಳಿಯ ಯಲಹಂಕ ರಸ್ತೆಯಲ್ಲಿ ಬುಲೆಟ್ ರಘುನನ್ನು … Continue reading ದೊಡ್ಡಬಳ್ಳಾಪುರ : ಹಳೆ ವೈಷಮ್ಯ ಹಿನ್ನೆಲೆ, ಎಣ್ಣೆ ಪಾರ್ಟಿಗೆ ಕರೆದೋಯ್ದು, ಹೋಟೆಲ್ ಮಾಲೀಕನನ್ನ ಹತ್ಯೆಗೈದ ಸ್ನೇಹಿತರು!