ಬಾಗಲಕೋಟೆ: ವೃದ್ಧ ನುಂಗಿದ್ದ 187 ನಾಣ್ಯಗಳನ್ನ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು!

ಬಾಗಲಕೋಟೆ: ಬಾಗಲಕೋಟೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃದ್ಧನೊಬ್ಬ 187 ನಾಣ್ಯಗಳನ್ನು ನುಂಗಿರುವ ಘಟನೆ ನಡೆದಿದೆ. ಸತತ ಪರಿಶ್ರಮದ ಬಳಿಕ ಜಿಲ್ಲೆಯ ಎಚ್‌ಎಸ್‌ಕೆ ಆಸ್ಪತ್ರೆಯ ವೈದ್ಯರ ತಂಡ ರೋಗಿಯ ಹೊಟ್ಟೆಯಿಂದ ಈ ನಾಣ್ಯಗಳನ್ನು ಹೊರತೆಗೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ದ್ಯಾಮಪ್ಪ ಹರಿಜನ ಎಂಬ 58 ವರ್ಷದ ವೃದ್ಧ 187 ನಾಣ್ಯಗಳನ್ನು ನುಂಗಿದ್ದ. ವೃದ್ಧ ನಾಣ್ಯ ನುಂಗಿರುವ ಬಗ್ಗೆ ಕುಟುಂಬಸ್ಥರಿಗೆ ಗೊತ್ತಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಎಂಡೋಸ್ಕೋಪಿ ಮಾಡಿದಾಗ ವೃದ್ಧ ನಾಣ್ಯಗಳನ್ನು ನುಂಗಿರುವುದು ಗೊತ್ತಾಯಿತು. ಅದರ ನಂತರವೇ … Continue reading ಬಾಗಲಕೋಟೆ: ವೃದ್ಧ ನುಂಗಿದ್ದ 187 ನಾಣ್ಯಗಳನ್ನ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು!