ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಹಿವಾಟುಗಳು ಹೆಚ್ಚಾಗಿದ್ದು, ಪ್ರತಿಯೊಬ್ಬರೂ ಯುಪಿಐ ಮೂಲಕ ಮೊತ್ತದ ವಹಿವಾಟು ನಡೆಸುತ್ತಿದ್ದಾರೆ. ಯುಪಿಐ ಮೂಲಕ ವಹಿವಾಟು ನಡೆಸುವಾಗ, ಅನೇಕ ಜನರು ತಿಳಿಯದೇ ಕೆಲವು ತಪ್ಪುಗಳನ್ನು ಮಾಡುತ್ತಾರೆ ಮತ್ತು ಈ ತಪ್ಪುಗಳಿಂದಾಗಿ,ಅವ್ರು ದೊಡ್ಡ ಪ್ರಮಾಣದಲ್ಲಿ ಮೋಸ ಹೋಗಬೇಕಾಗುತ್ತದೆ.
ನೀವು ಕೂಡ ಯುಪಿಐ ವ್ಯವಹಾರ ಮಾಡುತ್ತಿದ್ರೆ, ಯುಪಿಐಗಾಗಿ ನೀವು ಪಾವತಿಸುವ ನಾಲ್ಕು ಅಥವಾ ಆರು ಅಂಕಿಯ ಪಿನ್ ಸಂಖ್ಯೆಯನ್ನ ತಪ್ಪಾಗಿ ಯಾರೊಂದಿಗೂ ಹಂಚಿಕೊಳ್ಳಬಾರದು. ಹೀಗೆ ಮಾಡುವುದರಿಂದ, ನೀವು ಸಾಕಷ್ಟು ಹಣವನ್ನ ಕಳೆದುಕೊಳ್ಳುತ್ತೀರಿ. ಯುಪಿಐ ಆಧಾರಿತ ಅಪ್ಲಿಕೇಶನ್ನಲ್ಲಿ ಲಾಕ್ ಇಡುವುದು ಸಹ ಸೂಕ್ತವಾಗಿದೆ. ಯಾಕಂದ್ರೆ, ನೀವು ಅಂತಹ ಪಿನ್’ಗೆ ಯಾವುದೇ ಗಮನ ನೀಡದಿದ್ರೆ, ನಿಮ್ಮ ಸಂಪೂರ್ಣ ಖಾತೆ ಖಾಲಿಯಾಗುವ ಸಾಧ್ಯತೆಯಿದೆ.
ಸೈಬರ್ ಅಪರಾಧಿಗಳು ದೊಡ್ಡ ಪ್ರಮಾಣದ ವಂಚನೆಗಳನ್ನ ಮಾಡುತ್ತಿದ್ದು, ಆಫರ್’ಗಳಿವೆ ಎಂದು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸುತ್ತಾರೆ. ನೀವು ಅಂತಹ ಲಿಂಕ್ ತಪ್ಪಾಗಿ ಕ್ಲಿಕ್ ಮಾಡಬಾರದು. ಒಂದ್ವೇಳೆ ನೀವು ಈ ಲಿಂಕ್ ಕ್ಲಿಕ್ ಮಾಡಿದ್ರೆ, ನಿಮ್ಮ ಎಲ್ಲಾ ವೈಯಕ್ತಿಕ ಡೇಟಾ ಸೈಬರ್ ಅಪರಾಧಿಗಳ ಕೈಗೆ ಹೋಗುತ್ತದೆ. ಇದರಿಂದಾಗಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವ ಸಂದರ್ಭಗಳು ಉಂಟಾಗುತ್ತವೆ.
ಅದ್ರಂತೆ, ಪ್ರತಿಯೊಬ್ಬರೂ ಎರಡಕ್ಕಿಂತ ಹೆಚ್ಚು ಯುಪಿಐ ಅಪ್ಲಿಕೇಶನ್ಗಳನ್ನ ಬಳಸದಿರುವುದು ಉತ್ತಮ. ಯಾಕಂದ್ರೆ, ಇವುಗಳಲ್ಲಿ ಎರಡಕ್ಕಿಂತ ಹೆಚ್ಚಾಗಿರುವುದು ಕೆಲವೊಮ್ಮೆ ನೀವು ಗೊಂದಲಕ್ಕೊಳಗಾಗುವ ಮತ್ತು ತಪ್ಪುಗಳನ್ನ ಮಾಡುವ ಸಾಧ್ಯತೆಯಿದೆ.
ದೊಡ್ಮನೆ ಮೊಮ್ಮಗನ ಚೊಚ್ಚಲ ಸಿನೆಮಾ ‘ಯುವ’ಪರ್ವ ಆರಂಭ ಯವರಾಜ್ ಕುಮಾರ್ ಮೊದಲ ಸಿನೆಮಾ ‘ಯುವ’ ಟೈಟಲ್ ಲಾಂಚ್