ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಕೆಲವರು ತಾವು ತೆಗೆದುಕೊಳ್ಳುವ ಕಾಫಿ, ಟೀ, ಕೂಲ್ ಡ್ರಿಂಕ್ಸ್ ಇನ್ನಿತರ ಪಾನೀಯಗಳ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಇದೆಲ್ಲಾ ಎಷ್ಟು ಸರಿ. ನಿಜಕ್ಕೂ ಹೀಗೆಲ್ಲಾ ಔಷಧಿಗಳನ್ನು ತೆಗೆದು ಕೊಳ್ಳಬಹುದಾ? ನೋಡೋಣ ಬನ್ನಿ.

BIGG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಅನ್ನಭಾಗ್ಯ’ ಯೋಜನೆ ನಿಲ್ಲುವುದಿಲ್ಲ : ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ

ನೀವು ಯಾವುದೇ ಸಾಫ್ಟ್ ಡ್ರಿಂಕ್ಸ್ ಅಥವಾ ಕೂಲ್ ಡ್ರಿಂಕ್ಸ್ ತೆಗೆದುಕೊಂಡರೆ, ಅವುಗಳು ಕಾರ್ಬೊನೇಟೆಡ್ ಆಗಿರುತ್ತವೆ, ಅವುಗಳಲ್ಲಿ ಕೆಲವು ಆಮ್ಲಿಯತೆ ಸಹ ಹೊಂದಿರುತ್ತವೆ. ಇವುಗಳು ಸಾಧಾರಣವಾಗಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಔಷಧಿಗಳ ಪ್ರಭಾವಗಳನ್ನು ಕಡಿಮೆ ಮಾಡುತ್ತವೆ.

ಅದರಲ್ಲೂ ಕೆಲವೊಂದು ಕಾರ್ಬೊನೇಟೆಡ್ ಪಾನೀಯಗಳು ನೀವು ತೆಗೆದುಕೊಳ್ಳುವ ಔಷಧ ಮಾತ್ರೆಗಳ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಸಾಫ್ಟ್ ಡ್ರಿಂಕ್ಸ್ ಜೊತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಔಷಧಿಗಳನ್ನು ಸೇವಿಸುವುದನ್ನು ಬಿಡಬೇಕು.

ಔಷಧಿಗಳನ್ನು ತೆಗೆದುಕೊಂಡ ನಂತರವೂ ಕೂಡ ಸಾಫ್ಟ್ ಡ್ರಿಂಕ್ಸ್ ಸೇವನೆ ಬೇಡ. ಏಕೆಂದರೆ ಇವುಗಳು ದೇಹದಲ್ಲಿ ಕಬ್ಬಿಣದ ಅಂಶ ಹೀರಿಕೊಳ್ಳಲು ಬಿಡುವುದಿಲ್ಲ.

BIGG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಅನ್ನಭಾಗ್ಯ’ ಯೋಜನೆ ನಿಲ್ಲುವುದಿಲ್ಲ : ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ

ಒಂದು ವೇಳೆ ನೀವು ಕಬ್ಬಿಣದ ಪೂರಕಗಳನ್ನು ವೈದ್ಯರ ಅಣತಿ ಮೇರೆಗೆ ತೆಗೆದುಕೊಳ್ಳುತ್ತಿದ್ದೀರಾ ಎಂದಾದರೆ ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡುವುದು ಉಚಿತವಲ್ಲ.

ಜ್ಯೂಸ್ ಮತ್ತು ಇನ್ನಿತರ ಪಾನೀಯಗಳು ಸಹ ನೀವು ತೆಗೆದುಕೊಂಡಿರುವ ಔಷಧಿಗಳ ಪ್ರಭಾವಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ನೀವು ತೆಗೆದುಕೊಳ್ಳುವ ಔಷಧಿಗಳ ಪ್ರಯೋಜನವಾಗುತ್ತದೆ ಮತ್ತು ನಿಮ್ಮ ಕಾಯಿಲೆ ವಾಸಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಹಣ್ಣುಗಳ ಜ್ಯೂಸ್ ವಿಚಾರಕ್ಕೆ ಬರುವುದಾದರೆ ಯಾವುದೇ ಕಾರಣಕ್ಕೂ ದ್ರಾಕ್ಷಿ ಹಣ್ಣಿನ ಜ್ಯೂಸ್ ಔಷಧಿಗಳ ಜೊತೆ ಅಥವಾ ಹಿಂದೆ ಮುಂದೆ ಕುಡಿಯಬೇಡಿ. ಇದು ಔಷಧಿಗಳ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ.

ಕಾಫಿ ಟೀ ಜೊತೆ

ಇನ್ನು ಕಾಫಿ ಟೀ ವಿಚಾರಕ್ಕೆ ಬರುವುದಾದರೆ, ಇವುಗಳಲ್ಲಿ ಟ್ಯಾನಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದರ ಕಾರಣ ದಿಂದ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ನಿಮ್ಮ ದೇಹಕ್ಕೆ ಸಿಗುವುದರಲ್ಲಿ ಕೊರತೆ ಉಂಟಾಗುತ್ತದೆ. ಹೀಗಾಗಿ ಕೇವಲ ಹಾಲಿನ ಜೊತೆ ಔಷಧಿಗಳನ್ನು ತೆಗೆದುಕೊಳ್ಳಬಹುದು ಅಷ್ಟೇ. ಕಾಫಿ ಟೀ ಜೊತೆ ಬೇಡ.

BIGG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಅನ್ನಭಾಗ್ಯ’ ಯೋಜನೆ ನಿಲ್ಲುವುದಿಲ್ಲ : ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ

ನೀರಿನ ಜತೆ ಔಷಧಿಗಳು ಸೇವನೆ

ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರದೆ ಇರುವ ಮತ್ತು ಬಹಳ ಸುಲಭವಾಗಿ ಔಷಧಿಗಳು ನಿಮ್ಮ ದೇಹದಲ್ಲಿ ತಮ್ಮ ಒಳ್ಳೆಯ ಪ್ರಭಾವವನ್ನು ಉಂಟು ಮಾಡಲು ಅನುಕೂಲ ವಾಗುವ ಪ್ರಕ್ರಿಯೆಯಾಗಿದೆ. ಹೀಗಾಗಿ ಇದನ್ನೇ ಅನುಸರಿಸಿ.

Share.
Exit mobile version