ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾವೇಲ್ಲ ಮನೆಯ ಗೋಡೆಯ ಅಲಂಕಾರಕ್ಕಾಗಿ ಡಿಸೈನ್‌ ಸ್ಟಿಕರ್‌ ಮತ್ತು ಕೆಲ ಫೋಟೋಗಳನ್ನು ಅಂಟಿಸುತ್ತೇವೆ.ಅದರಲ್ಲೂ ಸಿಟಿಗಳಲ್ಲಿ ಹೆಚ್ಚಾಗಿ ಕುದುರೆ ಇರುವ ಫೋಟೋಗಳನ್ನು ಗೋಡೆ ಮೇಲೆ ಹಾಕಿಕೊಳ್ಳುವುದನ್ನ ನೋಡಿದ್ದೇವೆ.

BIGG NEWS: ದಯವಿಟ್ಟು ನನ್ನನ್ನು ರಕ್ಷಿಸಿ’: ಇನ್‌ಸ್ಟಾಗ್ರಾಮ್ ನಲ್ಲಿ ಸಹಾಯ ಕೋರಿದ ಊರ್ವಶಿ ರೌಟೇಲಾ..! ಯಾಕೆ ಗೊತ್ತಾ?

ಅದು ಶೋ ಅಪ್‌ ಅಂಥ ಬಹುತೇಕ ಮಂದಿ ಅಂದುಕೊಳ್ಳುತ್ತಾರೆ. ಅದರೆ ಯಾಕಗಾಗಿ ಹಾಕಿಕೊಳ್ಳುತ್ತಾರೆ ಎಂದು ಸರಿಯಾಗಿ ಮಾಹಿತಿ ಸಿಕ್ಕಿರೋದಿಲ್ಲ. ಅದು ವಾಸ್ತುಗಾಗಿ ಎಲ್ಲರ ಮನೆಯ ಗೋಡೆಯ ಮೇಲೆ ಇರುತ್ತದೆ. ಹೀಗಿರುವಾಗ ವಾಸ್ತುಶಾಸ್ತ್ರದಲ್ಲಿ ಹೇಳೋದೇನು ಎಂದು ತಿಳಿದುಕೊಳ್ಳೊಣ

ಹಿಂದೂ ಧರ್ಮದ ಪ್ರಕಾರ 7 ಸಂಖ್ಯೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಂಖ್ಯೆಯು ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುತ್ತದೆ. ಮದುವೆಯ ಸಮಯದಲ್ಲಿ ಸಪ್ತಪದಿ ತುಳಿಯಲಾಗುತ್ತದೆ. ಆಕಾಶದಲ್ಲಿ ಮೂಡುವ ಕಾಮನಬಿಲ್ಲಿನಲ್ಲಿ ಏಳು ಬಣ್ಣಗಳಿವೆ. ಭೂಮಿಯ ಮೇಲೆ ಏಳು ಸಾಗರಗಳಿವೆ. ವಿಶ್ವದಲ್ಲಿ ಏಳು ನಕ್ಷತ್ರಪುಂಜಗಳಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಸೂರ್ಯನ ರಥದಲ್ಲಿ ಏಳು ಕುದುರೆಗಳಿವೆ. ಈ ಕಾರಣದಿಂದಲೇ ಮನೆಯ ಗೋಡೆಯ ಮೇಲೆ ಏಳು ಕುದುರೆಗಳ ಫೋಟೋವನ್ನು ಇಡುವುದು ಪವಿತ್ರವೆಂದು ಹೇಳಲಾಗಿದೆ. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರುತ್ತದೆ ಎನ್ನಲಾಗಿದೆ.

BIGG NEWS: ದಯವಿಟ್ಟು ನನ್ನನ್ನು ರಕ್ಷಿಸಿ’: ಇನ್‌ಸ್ಟಾಗ್ರಾಮ್ ನಲ್ಲಿ ಸಹಾಯ ಕೋರಿದ ಊರ್ವಶಿ ರೌಟೇಲಾ..! ಯಾಕೆ ಗೊತ್ತಾ?

 

ಅದನ್ನು ಯಾವ ದಿಕ್ಕಿನಲ್ಲಿ ಇಡಬೇಕು…?

ಮನೆಯ ದಕ್ಷಿಣ ಭಾಗದ ಗೋಡೆಯ ಮೇಲೆ ಏಳು ಕುದುರೆಗಳ ಫೋಟೋ ಹಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಫೋಟೋ ಖರೀದಿಸುವಾಗ ಕುದುರೆಗಳು ಬೇರೆ ಬೇರೆ ದಿಕ್ಕುಗಳಲ್ಲಿ ಇರದೆ ಎಲ್ಲಾ ಕುದುರೆಗಳು ಒಂದೇ ದಿಕ್ಕಿನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಹಾಗೇ ಕುದುರೆಗಳ ಮುಖವು ಮನೆ ಬಾಗಿಲಿನ ಕಡೆ ಇರದಂತೆ ನೋಡಿಕೊಳ್ಳಿ. ಚಿತ್ರದಲ್ಲಿರುವ ಕುದುರೆಗಳು ಶಾಂತಿಯುತವಾಗಿರಬೇಕು, ಅವು ಕೆರಳಿದಂತೆ ಇರಬಾರದು. ಏಳು ಬಿಳಿ ಕುದುರೆಗಳ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಒಳ್ಳೆಯದು. ಅಲ್ಲದೆ ಈ ಫೋಟೋವನ್ನು ಲಿವಿಂಗ್ ರೂಮಿನಲ್ಲಿ ಇಡಬೇಕು. ಮಲಗುವ ಕೋಣೆಯಲ್ಲಿ ಏನನ್ನೂ ಇಡಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಏಳು ಕುದುರೆಗಳ ಆಕೃತಿ ಅಥವಾ ಫೋಟೋ ಇಟ್ಟರೆ ಸಂಬಂಧಗಳಲ್ಲಿ ಕಹಿ ಅನುಭವಗಳನ್ನು ಎದುರಿಸಬೇಕಾಗುತ್ತದೆ.

 

 

Share.
Exit mobile version