ಬೆಂಗಳೂರು: ಆತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿ, ಪೊಲೀಸರಿಗೆ ನಾಲ್ಕು ವರ್ಷಗಳಿಂದ ಕೈಗೆ ಸಿಗದೇ ತಲೆ ಮರೆಸಿಕೊಂಡಿದ್ದ. ಆತನನ್ನು ಹಿಡಿಯೋದಕ್ಕೆ ಪೊಲೀಸರು ಎಷ್ಟೇ ಪ್ಲಾನ್ ಮಾಡಿದರೂ ಸಾಧ್ಯವಾಗಿರಲಿಲ್ಲ. ಆದ್ರೇ ಕೊನೆಗೆ ಆತ ಸಿಕ್ಕಿಬಿದ್ದಿದ್ದು ಮಾತ್ರ ಜಸ್ಟ್ ಪತ್ನಿಯೊಂದಿಗೆ ಜಗಳ ಮಾಡಿದ್ದಕ್ಕಾಗಿದೆ. ಅದ್ಯಾಗೆ ಎನ್ನುವ ಬಗ್ಗೆ ಮುಂದೆ ಓದಿ.

BIG NEWS: ಮಕ್ಕಳಲ್ಲಿ ಟೈಪ್ 1 ಮಧುಮೇಹದಲ್ಲಿ ಶೇ.72ರಷ್ಟು ಹೆಚ್ಚಳಕ್ಕೆ ಕೋವಿಡ್ ಕಾರಣ: ಅಧ್ಯಯನ ವರದಿ

ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಸುಲಿಗೆ, ಮನೆಗಳ್ಳತನ, ಸರಗಳ್ಳತನ ಸೇರಿದಂತೆ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಆಸೀಫ್ ಎಂಬಾತ ಪೊಲೀಸರಿಗೆ ಬೇಕಾಗಿತ್ತು. ಆತನ ಪತ್ತೆಗಾಗಿ ನಾಲ್ಕು ವರ್ಷಗಳಿಂದ ಪೊಲೀಸರು ಬಲೆ ಬೀಸಿದ್ದರು. ಆದರೂ ಸಿಕ್ಕಿರಲಿಲ್ಲ.

Mysore Dasara 2022: ಮೈಸೂರಿನಲ್ಲೇ ತಯಾರಾದ ರೇಷ್ಮೆ ಸೀರೆಯಲ್ಲಿ ಆಗಮಿಸಿ, ದಸರಾಗೆ ವಿಶೇಷ ಮೆರುಗು ತಂದ ರಾಷ್ಡ್ರಪತಿ ದ್ರೌಪದಿ ಮುರ್ಮು

ಇತ್ತೀಚಿಗೆ ಆಸೀಫ್ ತನ್ನ ಪತ್ನಿ ಜೊತೆಗೆ ಜಗಳ ಮಾಡಿಕೊಂಡು, ಮನೆಯಿಂದ ದೂರಾಗಿದ್ದನು. ಆದ್ರೇ ಮಗಳನ್ನು ಭೇಟಿಯಾಗಿ ಮಾತನಾಡುವುದನ್ನು ಮಾತ್ರ ಬಿಟ್ಟಿರಲಿಲ್ಲ. ಈ ಮಾಹಿತಿಯನ್ನು ಪೊಲೀಸರಿಗೆ ಸಿಕ್ಕಿದ್ದೇ ತಡ. ಅಶೋಕನಗರ ಠಾಣೆಯ ಪೊಲೀಸರು ಅಲರ್ಟ್ ಆಗಿದ್ದರು.

ಕರೋನ ಬೆನ್ನಲೇ ‘ಕರ್ನಾಟಕ’ ಸೇರಿದಂತೆ ಭಾರತದಲ್ಲಿ ‘ಡೆಂಗ್ಯೂ ಪ್ರಕರಣ’ಗಳ ಸಂಖ್ಯೆ ಹೆಚ್ಚಳ : ಆತಂಕದಲ್ಲಿ ಜನತೆ | Dengue cases rises in India

ಗುಟ್ಟಾಗಿ ಮಗಳನ್ನು ಶಾಲೆಯ ಬಳಿ ಬಂದು ಭೇಟಿಯಾಗುತ್ತಿದ್ದ ಮಾಹಿತಿಯನ್ನು ತಿಳಿದಂತ ಪೊಲೀಸರು, ಶಾಲಾ ವಾಹನದಲ್ಲಿ ಹೋಗಿ, ಆರೋಪಿ ಆಸೀಫ್ ನನ್ನು ಬಂಧಿಸಿದ್ದಾರೆ. ಈ ಮೂಲಕ ಜೈಲಿಗಟ್ಟಿದ್ದಾರೆ.

Share.
Exit mobile version