ಚುನಾವಣಾ ಫಲಿತಾಂಶದ ವೇಳೆ ಟ್ರಂಪ್‌ ಏನು ಮಾಡ್ತಾ ಇದ್ದರು ಗೊತ್ತಾ?

ಡಿಜಿಟಲ್‌ಡೆಸ್ಕ್‌: ಜೋ ಬಿಡೆನ್ ಅವರು 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾಗಿ ಶನಿವಾರ ಘೋಷಣೆ ಮಾಡಲಾಗಿದೆ. ಬಿಡೆನ್ ಅವರು ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾದರೆ, ಕಮಲಾ ಹ್ಯಾರಿಸ್ ಅವರು ಅಮೆರಿಕದ ಉಪ-ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವೆಲ್ಲದರ ನಡುವೆ ಆದರೆ ಅಂತಿಮ ಫಲಿತಾಂಶ ಪ್ರಕಟವಾಗುತ್ತಿರುವಾಗ ಅವರ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆಯೊಂದಕ್ಕೆ ಉತ್ತರ ಸಿಕ್ಕಿದ್ದು, ವರ್ಜೀನಿಯಾದ ಸ್ಟರ್ಲಿಂಗ್ ನಲ್ಲಿ ಟ್ರಪ್‌ ಗಾಲ್ಫ್ ಆಡುತ್ತಿದ್ದರು ಎನ್ನಲಾಗಿದೆ.