ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲವು ತಿಂಗಳುಗಳಿಂದ ಬ್ಯಾಟಿಂಗ್‌ ವೈಫಲ್ಯವನ್ನು ಕಾಣುತ್ತಿದ್ದು, ಟೀಕಕಾರರಿಗೆ ಆಹಾರವಾಗುತ್ತಿದ್ದಾರೆ. ಪದೇ ಪದೇ ವೈಫಲ್ಯ ಅನುಭವಿಸಿದ ನಂತರ ಕೊಹ್ಲಿ ಫಾರ್ಮ್ ಬಗ್ಗೆ ಕಳವಳಗಳು ಹೆಚ್ಚುತ್ತಿವೆ.2ನೇ ಏಕದಿನ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಇಂಗ್ಲೆಂಡ್ನ ಜೋಸ್ ಬಟ್ಲರ್ ಇಬ್ಬರೂ ಕೊಹ್ಲಿಯನ್ನು ಬೆಂಬಲಿಸಿದ್ದಾರೆ.

33ರ ಹರೆಯದ ಧೋನಿ ಅವರ ಬ್ಯಾಟಿಂಗ್ ಹೋರಾಟಗಳ ಬಗ್ಗೆ ನಿರಂತರ ಚರ್ಚೆಗಳ ನಡುವೆ, ಕೊಹ್ಲಿ ತಮ್ಮ ಅಧಿಕೃತ ಟ್ವಿಟ್ಟರ್ ಪ್ರೊಫೈಲ್ನಲ್ಲಿ ‘ಪರ್ಸ್ಪೆಕ್ಟಿವ್’ ಎಂಬ ರಹಸ್ಯವಾದ ಒಂದು ಪದವನ್ನು ಹಂಚಿಕೊಂಡಿದ್ದಾರೆ.

ಹಾಗಾದ್ರೇ ಅವರು ಟ್ವಿಟ್‌ನಲ್ಲಿ ಹೇಳಿರುವುದು ಏನು?
ನಾನು ಬಿದ್ದರೆ ಏನು? ಆದರೆ ಪ್ರಿಯತಮೆ, ನೀವು ಹಾರಿದರೆ ಏನು? ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ

Share.
Exit mobile version