ಬೆಂಗಳೂರು: ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಸಿಎಂ ಅವರಿಗೆ ಗೌರವ ಪೂರ್ವಕವಾಗಿ ಉತ್ತರಿಸೋದಾಗಿಯೂ ತಿಳಿಸಿದ್ದಾರೆ. ಈ ನಡುವೆ ಪಠ್ಯಪುಸ್ತಕ ವಿವಾದದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಏನ್ ಹೇಳಿದ್ರು ಅಂತ ಮುಂದೆ ಓದಿ..
ಒಂದು ಮಳಿಗೆಯಲ್ಲಿ ಒಂದು ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆತಿದೆ – ಸಿಎಂ ಬೊಮ್ಮಾಯಿ
ಇಂದು ನಗರದಲ್ಲಿ ಪರಿಷ್ಕೃತ ಪಠ್ಯ ಮುಂದುವರೆಸುವಂತೆ ಒತ್ತಾಯ ವಿಚಾರವಾಗಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮಾತನಾಡಿ, ಒಂದೊಂದು ರಾಜಕೀಯ ಪಕ್ಷ ಒಂದೊಂದು ಕಡೆ ಇದೆ. ಈ ವಿಚಾರವಾಗಿ ಮಾತನ್ನಾಡೋದಿಲ್ಲ ಅಂತಾ ಸಂಘಟಕರಿಗೆ ಹೇಳಿದ್ದೆ. ಆದರೂ ನಮ್ಮ ಮನೆಗೆ ಬಂದಿದ್ದವರು ಬರಲೇಬೇಕೆಂದು ಮನವಿ ಮಾಡಿದ್ದರು. ಆಗ ಹೋರಾಟದಲ್ಲಿ ಭಾಗವಹಿಸಿದ್ದೆ. ಅದರಂತೆ ನಾನು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ಸಿಎಂ ಇದನ್ನ ಪರಿಶೀಲಿಸುವುದಾಗಿ ಹೇಳಿದ್ದಾರೆ. ಹಳೆಯ ಪಠ್ಯವನ್ನೇ ಮುಂದುವರೆಸುವಂತೆ ಕಾಂಗ್ರೆಸ್ ನಾಯಕರು ಮಾತನ್ನಾಡಿದ್ದಾರೆ. ಸಿಎಂ ಈ ಬಗ್ಗೆ ಏನು ಮಾಡುತ್ತಾರೋ ನೋಡಬೇಕು ಎಂದರು.
UPC ಪರೀಕ್ಷೆಯಲ್ಲಿ ಸಾರಿಗೆ ಬಸ್ ಚಾಲಕರ ಪುತ್ರನಿಗೆ 569ನೇ ಸ್ಥಾನ: KSRTCಯಿಂದ ತಂದೆ-ತಾಯಿಗೆ ಆತ್ಮೀಯ ಸನ್ಮಾನ
ಇನ್ನೂ ಎನ್‌ಡಿಎಯಿಂದ ರಾಷ್ಟ್ರಪತಿ ಅಭ್ಯರ್ಥಿ ಹೆಸರು ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಯಲ್ಲಿ ಸಭೆ ನಡೆದಿತ್ತು. ನಾನು ಮಮತಾ ಬ್ಯಾನರ್ಜಿ ಕರೆದಿದ್ದ ಮೊದಲ ಸಭೆಗೆ ಹಾಜರಾಗಿದ್ದೆ. ಈಗ ದ್ರೌಪದಿ ಮುರ್ಮು ಹೆಸರನ್ನ ಎನ್‌ಡಿಎ ಘೋಷಿಸಿದೆ. ಅವರು ವಿವಾದ ರಹಿತವಾಗಿರುವವರು. ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆಮೇಲೆ ಜಾರ್ಖಂಡ್ ನಲ್ಲಿ ರಾಜ್ಯಪಾಲರಾಗಿದ್ದರು ಎಂದರು.
BREAKING NEWS: ನಟ ದಿಗಂತ್ ಆರೋಗ್ಯವಾಗಿದ್ದಾರೆ, ಇಂದು ಅಥವಾ ನಾಳೆ ಡಿಸ್ಚಾರ್ ಆಗಲಿದ್ದಾರೆ – ಪತ್ನಿ ಐಂದ್ರಿತಾ ರೇ
ಅಗ್ನಿಪಥ್ ಯೋಜನೆ ವಿಚಾರ ಮಾತನಾಡಿದ ಅವರು, ಪಾಲಿಟಿಕ್ಸ್ ಮಾಡಿದರೆ ನಾನೂ ಮಾಡಬಹುದು. ಹಾಗಾಗಿ ಅದರ ಬಗ್ಗೆ ಮಾತನ್ನಾಡುವುದಿಲ್ಲ ಎಂಬುದಾಗಿ ಹೇಳಿದರು.