ಹುಬ್ಬಳ್ಳಿ: ಇಂದು ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಹದಾಯಿ ಜಲ-ಜನ ಆಂದೋಲನ ನಡೆಸಲಾಯಿತು. ಈ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನಾಯಕರು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನೇ ನಡೆಸಿದರು. ಹಾಗಾದ್ರೇ ಯಾರು ಏನು ಮಾತನಾಡಿದರು ಅಂತ ಮುಂದೆ ಓದಿ.

ಮಹದಾಯಿ ಜಲ ಜನ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದಂತ ಕಾಂಗ್ರೆಸ್ ನ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಅವರು, ಮಹದಾಯಿ ಜಲಾಂದೋಲನದ ಅನಿವಾರ್ಯತೆ ಯಾಕೆ ಬಂತು? ದೆಹಲಿ ಹಾಗೂ ಬೆಂಗಳೂರಿನಲ್ಲಿ ಅಧಿಕಾರದಲ್ಲಿ ಕೂತಿರುವವರು ಈ ಭಾಗದ ಜನರಿಗೆ ದ್ರೋಹ ಬಗೆದಿದ್ದಾರೆ. ಇವರ ಚರಿತ್ರೆಯೋ ದ್ರೋಹದ ಮೇಲೆ ನಿಂತಿದೆ. ಕುಡಿಯುವ ನೀರಾಗಲಿ, ಕೃಷಿಗೆ ಬೇಕಾದ ನೀರಾಗಲಿ ಅದನ್ನು ಈ ಭಾಗದ ಜನರಿಗೆ ಸಿಗದಂತೆ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಇವರು ಯೋಜನೆಗೆ ಅಡ್ಡಿ ಮಾಡಿ ಸುಳ್ಳಿನ ಉತ್ಸವ ಮಾಡುತ್ತಾರೆ. ದೆಹಲಿಯಲ್ಲಿ 8 ವರ್ಷಗಳಿಂದ, ರಾಜ್ಯದಲ್ಲಿ 3 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಇವರು ನಾವು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವರೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಆರಂಭಿಸಿದ್ದು, 2010ರಲ್ಲಿ ಮಹದಾಯಿ ನ್ಯಾಯಾಧಿಕರಣ ಮಾಡಲಾಯಿತು. 2002ರಲ್ಲಿ ವಾಜಪೇಯಿ ಅವರ ಸರ್ಕಾರ ಈ ಯೋಜನೆಗೆ ಅಡ್ಡಿಪಡಿಸಿ ದ್ರೋಹಬಗೆದಿದ್ದರು. ಇದೇ ದೋಖೆಬಾಜಿಗಳು 8 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸುತ್ತಿದ್ದರೂ ಈ ಯೋಜನೆಯನ್ನು ಪೂರ್ಣಗೊಳಿಸುವುದಿರಲಿ, ಆರಂಭವನ್ನೇ ಮಾಡಿಲ್ಲ. ಬೊಮ್ಮಾಯಿ ಅವರು ಬಿಜೆಪಿ ನಾಯಕರು, ಪ್ರಹ್ಲಾದ್ ಜೋಷಿ ಅವರು ಉತ್ತರ ನೀಡುತ್ತಾರಾ? ಇವರು ಸುಳ್ಳು ಟ್ವೀಟ್ ಮಾಡುತ್ತಾರೆಯೇ ಹೊರತು ಜನರಿಗೆ ಉತ್ತರ ನೀಡುವುದಿಲ್ಲ. ಇದುವರೆಗೂ ಈ ಸರ್ಕಾರ ಅರಣ್ಯ, ಪರಿಸರ ಇಲಾಖೆಯ ಅನುಮತಿ ಪತ್ರ ಪಡೆದಿಲ್ಲ. ಯಾಕೆ? ಇಂದು ಬಿಜೆಪಿ ಸರ್ಕಾರ ಉತ್ತರಿಸಬೇಕು. ಬಿಜೆಪಿ ಸರ್ಕಾರ ಅಂತಿಮ ಗಳಿಗೆ ಬಂದಿದೆ.

ಬಿಜೆಪಿಯವರು ಈ ಯೋಜನೆಗೆ ಅನುಮತಿ ನೀಡಿ, ಅಱಣ್ಯ, ಪರಿಸರ ಇಲಾಖೆ ಅನುಮತಿ ಪಡೆದು ಈ ಯೋಜನೆ ಪೂರ್ಣಗೊಳ್ಲುವುದು ಯಾವಾಗ ಎಂದು ಬೊಮ್ಮಾಯಿ ಅವರು ಉತ್ತರ ನೀಡುವರೇ? ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಒಂದು ಪ್ರಮುಖ ಭಾಗವಾಗಿದೆ, ಇನ್ನು ಸಂರಕ್ಷಣಾ ಯೋಜನೆಯೂ ಆಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಈವರೆಗೂ ಅರ್ಜಿ ಸಲ್ಲಿಸಿಲ್ಲ ಯಾಕೆ? ಸತ್ಯ ಏನೆಂದರೆ ಇವರು ದ್ರೋಹಬಗೆಯುತ್ತಾರೆ. ಇವರಿಂದ ಮಹದಾಯಿ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ನಾವು ಹೊಸ ಸಂಕಲ್ಪದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಆ ಸಂಕಲ್ಪ ಏನೆಂದರೆ ಕಾಂಗ್ರೆಸ್ ಮುಂದಿನ ಸರ್ಕಾರ ಮೊದಲ ಸಂಪುಟದಲ್ಲಿ 500 ಕೋಟಿ ಅನುದಾನ ನೀಡಿ ಯೋಜನೆಗೆ ಚಾಲನೆ ನೀಡಲಾಗುವುದು. ಒಟ್ಟು 3 ಸಾವಿರ ಕೋಟಿ ಅನುದಾನ ನೀಡಿ ಯೋಜನೆ ಪೂರ್ಣಗೊಳಿಸುತ್ತೇವೆ.

ಈ ಭಾಗದಲ್ಲಿ 5-7 ದಿನ ನೀರು ಸಿಗುವುದಿಲ್ಲ. ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ 24 ಗಂಟೆಗಳ ನೀರು ಹರಿಸುವ ಭರವಸೆ ಬಿಜೆಪಿ ನೀಡಿದ್ದು, ಆದನ್ನು ಸಾಕಾರಗೊಳಿಸುವ ಪ್ರಯತ್ನ ಮಾಡಿಲ್ಲ. ಇದು ಸಾಧ್ಯವಾಗುವುದಾದರೆ ಅದು ಕಾಂಗ್ರೆಸ್ ಸರ್ಕಾರದಿಂದ ಮಾತ್ರ. ಹುಬ್ಬಳ್ಳಿ ಧಾರವಾಡದಿಂದ ಸರ್ಕಾರ ಬದಲಾವಣೆ ಮಾಡುವ ಸಂಕಲ್ಪ ಮಾಡೋಣ. ಇಂದು ನಾವು ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿರುವ ನಲ್ಲಿಗಳಲ್ಲಿ ಮಹದಾಯಿ ನೀರು ಬಾರದಿದ್ದರೆ ಬಿಜೆಪಿ ಸರ್ಕಾರ ಓಡಿಸಿ, ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿ. ಕುಡಿಯುವ ನೀರು, ವಿದ್ಯುತ್, ಕೃಷಿಗೆ ನೀರು ನೀಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ವಿಪಕ್ಷ ನಾಯಕ ಸಿದ್ಧರಾಮಯ್ಯ ಮಾತನಾಡಿ ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜನಪರ ಹೋರಾಟ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ತ್ವರಿತ ಜಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒತ್ತಾಯ ಮಾಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೆವು ಎಂದು ಹೇಳಿದರು.

ಕಳಸಾ ಬಂಡೂರಿ ನಾಲಾ ಯೋಜನೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಲು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಮಾಡಲು 15 ದಿನಗಳ ಹಿಂದೆ ಕಾಂಗ್ರೆಸ್ ಎಲ್ಲ ನಾಯಕರು ದೆಹಲಿಯಲ್ಲಿ ತೀರ್ಮಾನ ಮಾಡಿದ್ದೆವು. ನಾವು ಇಲ್ಲಿ ಸಮಾವೇಶ ಘೋಷಣೆ ಮಾಡಿದ ನಂತರ ಬಿಜೆಪಿಯವರು ಎಚ್ಛೆತ್ತುಕೊಂಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈಗ ಈ ಯೋಜನೆ ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಿಸಿದ್ದಾರೆ.

ಗೆಜೆಟ್ ನೋಟಿಫಿಕೇಷನ್ ಆಗಿದ್ದು ಯಾವಾಗ? 27-2-2020. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರ ಇದ್ದರೂ 2 ವರ್ಷ 10 ತಿಂಗಳು ಯಾಕೆ ಪ್ರಾರಂಭ ಮಾಡಲಿಲ್ಲ? ಡಿಪಿಆರ್ ಗೆ ಈ ಹಿಂದೆ ಅನುಮೋದನೆ ನೀಡಲಿಲ್ಲ ಯಾಕೆ? ಜೋಷಿ ಅವರು, ಬೊಮ್ಮಾಯಿ ಅವರೇ ನೀವು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ನ್ಯಾಯಾಧೀಕರಣ 14-8-2018ರಲ್ಲಿ ತನ್ನ ತೀರ್ಮಾನ ನೀಡಿತು. ಐದು ವರ್ಷಗಳಲ್ಲಿ ನಾವು ಗೋವಾ ಮಹಾರಾಷ್ಟ್ರದವರು ಮೇಲ್ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಐಎಎಂ ಅರ್ಜಿ ಹಾಕಿದೆವು. ನಮ್ಮ ಅರ್ಜಿಯನ್ನು ಒಪ್ಪಿ ಸುಪ್ರೀಂ ಕೋರ್ಟ್ 27-2-2020ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಯಿತು. ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನಿಮ್ಮದೇ ಸರ್ಕಾರವಿತ್ತು. ಆದರೂ ಈ ವಿಚಾರವಾಗಿ ನಿದ್ದೆ ಮಾಡಿದ್ದು ಯಾಕೆ? ಸುಳ್ಳು ಹೇಳಿ ವಿಜಯೋತ್ಸವ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? 2013ರಲ್ಲಿ ನಾವು ಅದಿಕಾರಕ್ಕೆ ಬಂದಾಗ ನ್ಯಾಯಾಧಿಕರಣದ ಮುಂದೆ ಸಮರ್ಥ ಸಾಕ್ಷ್ಯ ಒದಗಿಸಿ ವಾದ ಮಂಡಿಸಿದ ಪರಿಣಾಮ ನಮಗೆ 13.42 ಟಿಎಂಸಿ ನೀರು ಸಿಕ್ಕಿದೆ. ಗೋವಾದವರಿಗೆ 24 ಟಿಎಂಸಿ, ಮಹಾರಾಷ್ಟ್ರದವರಿಗೆ 1.3 ಟಿಎಂಸಿ ಸಿಕ್ಕಿತು. ಈ ತೀರ್ಪು ಸಮಾಧಾನವಿಲ್ಲದಿದ್ದರೂ ಅದನ್ನು ಒಪ್ಪಿದ್ದೇವೆ.

ನಾನು ಸಿಎಂ ಆಗಿದ್ದಾಗ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿದ್ದೆ. ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಅವರೆಲ್ಲರೂ ಬಂದಿದ್ದರು. ಆ ಯೋಜನೆಗಾಗಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರು ಬಂದಿದ್ದರು. ಸ್ವಾಮೀಜಿಗಳು ಬಂದಿದ್ದರು. ಇವರೆಲ್ಲರ ಸಮ್ಮುಖದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಪ್ರಾರ್ಥನೆ ಮಾಡಿ, ಮೋದಿ ಅವರೇ ಗೋವಾದಲ್ಲಿ, ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಅಧಿಕಾರದಲ್ಲಿದೆ. ನಾನು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದು, ನೀವು ಯಾವುದೇ ತೀರ್ಮಾನ ಕೊಟ್ಟರೂ ನಾವು ಒಪ್ಪಲು ಸಿದ್ಧನಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಿ. ನೀವು ನಿಮ್ಮ ಮುಖ್ಯಮಂತ್ರಿಗಳನ್ನು ಒಪ್ಪಿಸಿ ಇದನ್ನು ಇತ್ಯಾರ್ಥ ಮಾಡಿ ಎಂದು ಪರಿಪರಿಯಾಗಿ ಗೋಗರೆದೆ. ಆದರೂ ಒಪ್ಪಲಿಲ್ಲ. ಆಗ ಬಿಜೆಪಿ ನಾಯಕರು ಒಳಗಡೆ ಹೋಗಿ ಮಾತನಾಡಿ ಬಂದರು. ಸಿದ್ದರಾಮಯ್ಯ ಅವರ ಮನವಿ ಒಪ್ಪಬೇಡಿ ಎಂದು ಮೋದಿ ಅವರಿಗೆ ಹೇಳಿ ಬಂದರು. ಇದಕ್ಕೆ ಸ್ವಾಮೀಜಿಗಳು, ರೈತ ಮುಖಂಡರೇ ಸಾಕ್ಷಿ.

ಅಂದು ನರೇಂದ್ರ ಮೋದಿ ಅವರು ಒಪ್ಪಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಲುಗು ಗಂಗಾ ಯೋಜನೆಗೆ, ಆಂಧ್ರ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿ ಕರೆದು ಇತ್ಯರ್ಥ ಮಾಡಿದ್ದಾರೆ. ಅದೇ ರೀತಿ ನೀವು ಮಾಡಿ ಮೋದಿಯವರೇ ಎಂದು ಗೋಗರೆದಿದ್ದೆ. ಆಗ ಮೋದಿ ಅವರು ನೀವು ಗೋವಾ ಕಾಂಗ್ರೆಸ್ ಒಪ್ಪಿಸಿಕೊಂಡು ಬನ್ನಿ ಆಗ ನಾನು ನೋಡುತ್ತೇನೆ ಎಂದರು. ಇಂದಿರಾ ಗಾಂಧಿ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮ ಕೈಯಲ್ಲಿ ಯಾಕೆ ಸಾಧ್ಯವಾಗಲಿಲ್ಲ? ನೀವು ಪ್ರಯತ್ನವನ್ನೇ ಮಾಡಲಿಲ್ಲ. ಗೋವಾದ ನಿಯೋಗ ಪ್ರಧಾನಿ ಭೇಟಿಗೆ ಹೋಗುತ್ತಿದ್ದಾರೆ. ಒಮ್ಮೆ ವಾಜಪೇಯಿ ಸರ್ಕಾರ ಇದ್ದಾಗ ಅನುಮತಿ ನೀಡಿ ಅದನ್ನು 2 ತಿಂಗಳಲ್ಲಿ ಹಿಂಪಡೆದಿದ್ದರು. 2018ರಲ್ಲಿ ಯಡಿಯೂರಪ್ಪ ಇದೇ ಮೈದಾನದಲ್ಲಿ ಏನು ಹೇಳಿದ್ದರು. ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಯೋಜನೆ ಬಗೆಹರಿಸಿ ಕೆಲಸ ಆರಂಭಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದರು.

ಈ ಡೋಂಗಿತನ ಬಿಟ್ಟು ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಿರಿ. ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ನುಡಿದಂತೆ ನಡೆದಿದ್ದೇವೆ. 2013ರಲ್ಲಿ ನಮ್ಮ ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಹೇಳದ 30 ಕಾರ್ಯಕ್ರಮ ಕೊಟ್ಟಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಕೊಟ್ಟ ಮಾತಿಗೆ ತಪ್ಪಲ್ಲ.

ಕೂಡಲಸಂಗಮದಲ್ಲಿ 5 ವರ್ಷಗಳಲ್ಲಿ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ನಾವು ಅಧಿಕಾರದಲ್ಲಿ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ನೀವು 2018ರಲ್ಲಿ 1.50 ಲಕ್ಷ ಕೋಟಿ ನೀರಾವರಿಗೆ ನೀಡಲಾಗುವುದು ಎಂದು ಹೇಳಿದ್ದೀರಿ. ಇಲ್ಲಿಯವರೆಗೂ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಇನ್ನು 1 ಲಕ್ಷ ಕೋಟಿ ಏನಾಯ್ತು? ಕಳಸಾ ಬಂಡೂರಿ ಜನೆ ಯಾಕೆ ಆರಂಭಿಸಲಿಲ್ಲ. ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದು ಅದಲ್ಲಿ ಶೇ.10ರಷ್ಟು ಜಾರಿ ಮಾಡಲು ಆಗಿಲ್ಲ. ರಾಜ್ಯದ ಜನರಿಗೆ ಸುಳ್ಳು ಹೇಳಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರಾಜ್ದ ಜನರಿಗೆ ದ್ರೋಹ ಮಾಡಿದ್ದೀರಿ.

ನಾವು 2023ರಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಅಲ್ಲ ಬಾಕಿ ನೀರಾವರಿ ಯೋಜನೆಗೆ 5 ವರ್ಷಗಳಲ್ಲಿ ಪೂರೈಸಲು 2 ಲಕ್ಷ ಕೋಟಿ ಅನುದಾನ ನೀಡಲಾಗುವುದು. 93 ಕೋಟಿ ಇದ್ದ ಯೋಜನಾ ವೆಚ್ಚ ಇಂದು 1677 ಕೋಟಿ ಆಗಿದೆ. ಈ ಹಣ ನೀಡುವವರು ಯಾರು? ನಿಮ್ಮ ವಿಳಂಬ ನೀತಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಷ್ಟು ಹೆಚ್ಚಾಗಿದೆ. ಕೇಂದ್ರಸರ್ಕಾರ ಈ ಹಣ ನೀಡುತ್ತದೆಯಾ? ಮೋದಿ, ನಿರ್ಮಲಾ ಸೀತರಾಮನ್ ಅವರು ನೀವು ನೀಡುತ್ತೀರಾ? ನೀವು ನೀಡಬೇಕು ಎಂದು ಒತ್ತಾಯಿಸುತ್ತೇನೆ. ನಾವು 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಿಜೆಪಿ ಎಷ್ಟೇ ಸುಳ್ಳು ಹೇಳಲಿ, ಹಣದ ಹೊಳೆ ಹರಿಸಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಈ ಭಆಗದ ಜನರಿಗೆ ಹೇಳಲು ಬಯಸುತ್ತೇನೆ.

ಇನ್ನೂ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ನಾವು ನಿರೀಕ್ಷೆ ಮಾಡುವಂತಹದ್ದು ಏನೂ ಇಲ್ಲ. ಸುಳ್ಳಿನ ಸರ್ಕಾರ ಬರೀ ಸುಳ್ಳು ಹೇಳುತ್ತಿದೆ. ಅವರು ಹೊರಡಿಸಿರುವ ಡಿಪಿಆರ್ ನಲ್ಲಿ ಎಷ್ಟು ಸತ್ಯಾಂಶವಿದೆ ಎಂದು ಹೆಚ್.ಕೆ ಪಾಟೀಲ್ ಅವರು ಹೇಳಿದ್ದಾರೆ. ಮೋದಿ ಅವರ ಡಿಗ್ರಿ ಸರ್ಟಿಫಿಕೇಟ್ ಎಷ್ಟು ನಕಲಿಯೋ ಅಷ್ಟೇ ಡಿಪಿಆರ್ ಅನುಮತಿ ಪತ್ರವೂ ನಕಲಿಯಾಗಿದೆ. ಪ್ರಧಾನಮಂತ್ರಿಗಳು ಅಧಿಕಾರಕ್ಕೆ ಬಂದು 9 ವರ್ಷ ಆಗಿದೆ. ಡಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಎನ್ನುತ್ತಾರೆ. ಅವರು ಯಾವತ್ತಾದರೂ ಸರ್ವಪಕ್ಷ ಸಭೆ ಮಾಡಿದ್ದಾರಾ? ಪ್ರಧಾನಮಂತ್ರಿಗಳೇ ನೀವು ಕೇವಲ ಬಿಜೆಪಿಗೆ ಮಾತ್ರ ಪ್ರಧಾನಿಯಲ್ಲಿ ದೇಶಕ್ಕೆ ಪ್ರಧಾನಿ. ನೀವು ಸಮಸ್ಯೆ ಬಗೆಹರಿಸಬೇಕು. ನೀವು ಸಮಸ್ಯೆ ಬಗೆಹರಿಸಲು ಸಭೆ ಮಾಡಿಲ್ಲ. ಅವರು ಪಾಳು ಬಿದ್ದಿರುವ ಮಸೀದಿ, ಮಂದಿರ ಮಾತ್ರ ಹುಡುಕುತ್ತಾರೆ. ಜನರಿಗೆ ಸ್ಪಂದಿಸುವ ಕಾರ್ಯಕ್ರಮ ಮಾಡಿಲ್ಲ. ಎವ್ರು ಮನ್ ಕಿ ಬಾತ್ ನಲ್ಲಿ ಎಷ್ಟು ಬಾರಿ ರೈತರು, ಕಾರ್ಮಿಕರು, ಮಹಿಳೆಯರ ಸುರಕ್ಷತೆ, ಮಕ್ಕಳಿಗೆ ಶಿಕ್ಷಣ, ಯುವಕರಿಗೆ ಉದ್ಯೋಗ ನೀಡುವ ವಿಚಾರ ಎಷ್ಟು ಬಾರಿ ಮಾತನಾಡಿದ್ದಾರೆ? ಈ ಹೋರಾಟ ಈ ಭಾಗದ ಜಿಲ್ಲೆಗಳ ಒಣ ಪ್ರದೇಶದಲ್ಲಿ ನೀರಿಗಾಗಿ ಆಹಾಕಾರ ಇದ್ದ ಸಂದರ್ಭದಲ್ಲಿ ಈ ಯೋಜನೆಗೆ ಮುಂದಾಗಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರಬೇಕಾದರೆ ಬಿಜೆಪಿಯನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಮಾತನಾಡಿ, ಈ ಕಾರ್ಯಕ್ರಮ ಚುನಾವಣೆಯಲ್ಲಿ ಮತ ಕೇಳಲು ಅಲ್ಲ. ಈ ಕಾರ್ಯಕ್ರಮ ಮಹದಾಯಿ ನದಿ ನೀರನ್ನು ಮಲಪ್ರಭ ನದಿಗೆ ತಿರುಗಿಸಲು ಹೋರಟಕ್ಕೆ ಕರೆ ನೀಡಲು ಈ ಕರೆ. ಹುಬ್ಬಳ್ಳಿ ಧಾರವಾಡದಲ್ಲಿ 15 ದಿನಕ್ಕೊಮ್ಮೆ ನೀರು ಬರುವಷ್ಟು ಸಮಸ್ಯೆ ತಲೆದೋರಿದ್ದು ಇದನ್ನು ತೀರಿಸಿಕೊಳ್ಳಲು ಹೋರಾಟ ಮಾಡಬೇಕಿದೆ. ರೋಣ, ನರಗುಂದ, ನವಲಗುಂದ, ಬೈಲಹೊಂಗಲ, ರಾಮದುರ್ಗ, ಸವದತ್ತಿ ತಾಲೂಕುಗಳಲ್ಲಿ ರೈತರು ನೀರಿನ ಕೊರತೆಯಿಂದ ಕೃಷಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಬೆಳೆ ಕೈಗೆ ಬರುವ ಹೊತ್ತಲ್ಲಿ ನೀರಿನ ಕೊರತೆಯಿಂದ ನಾಶವಾಗುತ್ತಿದೆ. ಹೀಗಾಗಿ ಮಹದಾಯಿ ನೀರನ್ನು ರೇಣುಕಾಸಾಗರಕ್ಕೆ ತಂದು ಬಿಟ್ಟು ರೈತರ ಕಲ್ಯಾಣ ಮಾಡುವ ಕಳಸಾ ಬಂಡೂರಿ ಕನಸನ್ನು ನನಸು ಮಾಡಲು ಹೋರಾಟ ಮಾಡಬೇಕಿದೆ ಎಂದರು.

ನಿನ್ನೆ ಬಿಜೆಪಿ ಅವರು ಪತ್ರಿಕೆ, ಟಿವಿಗಳಲ್ಲಿ ಪ್ರಚಾರ ನೋಡಿ ಮಹದಾಯಿ ನೀರು ಹರಿದು ಬಂದಿರುವಂತೆ ವಿಜಯೋತ್ಸವ ಆಚರಿಸಿದರು. ಇದರಿಂದ ಯಾರಿಗೆ ಮೋಸ ಮಾಡಲು ಹೊರಟಿದ್ದೀರಿ? ವಿಜಯೋತ್ಸವ ಆಚರಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಇದೇ ಮೈದಾನದೊಳಗೆ ಯಡಿಯೂರಪ್ಪನವರು ಒಂದು ಪತ್ರ ತೋರಿಸಿ, ಗೋವಾ ಮುಖ್ಯಮಂತ್ರಿಗಳಿಂದ ನಿರಾಕ್ಷೇಪಣ ಪತ್ರ ಕೊಟ್ಟಿದ್ದಾರೆ, ನಿಮ್ಮ ಮಹದಾಯಿ ಸಮಸ್ಯೆ ಬಗೆಹರಿಯಿತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಮಹದಾಯಿ ನೀರು ತಂದು ಕೊಡುತ್ತೇವೆ ಎಂದು ಹೇಳಿದ್ದರು.

ಪ್ರಧಾನಿ ಮೋದಿ ಅವರು ಗದಗದಲ್ಲಿ ಒಂದು ಮಾತು ಹೇಳಿದ್ದರು. ನಮ್ಮ ಸರ್ಕಾರ ಬಂದರೆ ಗೋವಾ ಹಾಗೂ ನಿಮ್ಮ ಮುಖ್ಯಮಂತ್ರಿ ಕರೆಸಿ ಮಾತನಾಡಿ ಮಹದಾಯಿ ನೀರು ಯೋಜನೆ ಜಾರಿ ಮಾಡಿಸುತ್ತೇವೆ ಎಂದು ಹೇಳಿದ್ದರು. ಈ ಮಾತನ್ನು ಚುನಾವಣೆ ಹತ್ತಿರವಿದ್ದಾಗ ಹೇಳಿದ್ದರು. ಚುನಾವಣೆ ಬಂದಾಗಲೆಲ್ಲ ಇವರಿಗೆ ಮಹದಾಯಿ ನೆನಪಾಗುತ್ತದೆ. 2018ರ ಅಂತ್ಯದಲ್ಲಿ ಮಹದಾಯಿ ನ್ಯಾಯಾಧಿಕರಣ ತೀರ್ಪು ಬಂದಿತು. 2020ರಲ್ಲಿ ಮಹದಾಯಿ ಗೆಜೆಟ್ ನೋಟಿಫಿಕೇಶನ್ ಆಗಿದೆ. 2020ರಿಂದ 2022 ಅಕ್ಟೋಬರ್ ವರೆಗೆ ಡಿಪಿಆರ್ ನೀಡಲು ಆಗಲಿಲ್ಲ ಯಾಕೆ?

ಯಾವಾಗ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ರಾಜಕೀಯ ಇಚ್ಛಾಶಕ್ತಿಯಿಂದ ಈ ಯೋಜನೆ ವಿಳಂಬ ಮಾಡುತ್ತಿದ್ದಾರೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಹೇಳಿದ ನಂತರ ಇವರು ಡಿಪಿಆರ್ ಸಲ್ಲಿಕೆ ಮಾಡುತ್ತಾರೆ. ಈಗ ಡಿಪಿಆರ್ ಮಂಜೂರಾಗಿದೆ ಎಂದು ಹೇಳಿದ್ದಾರೆ. ಡಿಪಿಆರ್ ಮಂಜೂರಾದರೆ ಯೋಜನೆ ಮಂಜೂರಾದಂತೆಯೇ? ಡಿಪಿಆರ್ ಮಂಜೂರು ಪತ್ರದಲ್ಲಿ ಹಾಕಿರುವ ಷರತ್ತುಗಳೇನಿವೆ ಎಂದು ನೋಡಿದ್ದೀರಾ? ಕಾವೇರಿ ತೀರ್ಪು ಬಂದ ನಂತರ ಅಂದಿನ ನಾಯಕರು ತಕ್ಷಣ ವಿರೋಧ ಪಕ್ಷಗಳನ್ನು ಕರೆದು ಸಭೆ ಮಾಡಿ ಲಾಭ ನಷ್ಟದ ಚರ್ಚೆ ಮಾಡಿ ರಾಜ್ಯದ ನಿಲುವು ಏನು ಎಂದು ಅವಲೋಕಿಸಿದರು. ಆದರೆ ಇವರು ಯಾವುದೇ ಚರ್ಚೆ ಮಾಡದೇ ಗೆದ್ದುಬಿಟ್ಟಿದ್ದೇವೆ ಎಂದು ಹೇಳುತ್ತಿದ್ದೇವೆ. ಮೊನ್ನೆ ಪ್ರಹ್ಲಾದ್ ಜೋಷಿ ಅವರು ತಮ್ಮ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಲ್ಲಿ ದಿನಾಂಕವೇ ಇಲ್ಲ, ಅದನ್ನು ಹೇಗೆ ನಂಬೂಬೇಕು ಎಂದು ಕೇಳಿದೆವು. ಈ ರೀತಿ ಸುಳ್ಳು ಹೇಳಿದರೆ ಹೇಗೆ ಎಂದು ಕೇಳಿದರೆ ಸಿದ್ದರಾಮಯ್ಯ ಹಾಗೂ ಹೆಚ್.ಕೆ ಪಾಟೀಲ್ ಗೆ ಕಣ್ಣು ಕಾಣುವುದಿಲ್ಲ ಎಂದು ಟೀಕೆ ಮಾಡಿದ್ದಾರೆ. ನಮಗೆ ಕಣ್ಣು ಕಾಣುತ್ತಿಲ್ಲವೋ ಅಊವಾ ನಿಮ್ಮ ನೆತ್ತಿ ಮೇಲೆ ನಿಮ್ಮ ಕಣ್ಣು ಬಂದಿವೆಯೋ?

ಜೋಷಿ ಅವರು ನಿನ್ನೆ ಅರಣ್ಯ ಇಲಾಖೆ ಪರವಾನಿಗೆ ಬೇಕಿಲ್ಲ, ಯಾಕೆಂದರೆ ಅದನ್ನು ನಾವೇ ರಾಜ್ಯ ಸರ್ಕಾರ ನೀಡಬಹುದು ಎಂದು ಹೇಳಿದ್ದಾರೆ. ನಿಮ್ಮ ಅರಣ್ಯ ಇಲಾಖೆ ಹೆಚ್ಚುವರಿ ಕಾರ್ಯದರ್ಶಿಗಳು ಬೆಂಗಳೂರಿನ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕಚೇರಿಗೆ ಅರ್ಜಿ ಕೊಟ್ಟಿದ್ದು ಯಾಕೆ? ಅವರ ಪರವಾನಿಗೆ ಬೇಡವಾದರೆ ಅರ್ಜಿ ಕೊಟ್ಟಿದ್ದು ಯಾಕೆ? ಅವರು ಹೇಗೆ ಸುಳ್ಳು ಪೋಣಿಸುತ್ತಾರೆ ಎಂದು ರೈತರು ಅರಿಯಬೇಕು. ಗೋವಾದವರು ತಮ್ಮ ಹಸಿ ಸುಳ್ಳಿನ ಮೂಲಕ 200 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದೆ. ಅದನ್ನು ನಾವು ಬಳಸಿಕೊಳ್ಳಲು ಮುಂದಾದರೆ ಈ ನದಿಯಲ್ಲಿ ಕೇವಲ 60-7- ಟಿಎಂಸಿ ನೀರು ಇದೆ ಎಂದು ಸುಳ್ಳು ಹೇಳಿದ್ದರು. ನಂತರ ನಮ್ಮ ಕಾಂಗ್ರೆಸ್ ಸರ್ಕಾರ ವೈಜ್ಞಾನಿಕ ಅಧ್ಯಯನದ ಮೂಲಕ ಈ ನದಿಯಲ್ಲಿ 200 ಟಿಎಂಸಿ ನೀರು ಇದೆ ಎಂದು ಸಾಬೀತು ಮಾಡಿದೆವು.

ಈ ಬಂಡೂರಿ ನಾಲಾ ಯೋಜನೆ ಹುಟ್ಟು ಹಾಕಿದ್ದು ಯಾರು ಎಂದು ಜಗದೀಶ್ ಶೆಟ್ಟರ್, ಸಿಸಿ ಪಾಟೀಲ್ ಅವರು ಹೇಳಬೇಕು. ಕೃಷ್ಣ ಅವರ ಸರ್ಕಾರದಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಇವರೆಲ್ಲರೂ ಬಂದು ನೀವು ಕಳಸಾ ಯೋಜನೆ ಮಾಡುಲು ಮುಂದಾಗಿದ್ದು, ಅದನ್ನು ಮಾಡಿ. ಅದರ ಜತೆಗೆ ಬಂಡೂರಿ ನಾಲಾ ನೋಡಿದರೆ ಮಹದಾಯಿಗೆ ಹೆಚ್ಚಿನ ನೀರು ತಿರುವು ನೀಡಬಹುದು ಎಂದು ಹೇಳಿದ್ದರು. ನಾವು ಅಲ್ಲಿಗೆ ಹೇಗಿ 3 ತಾಸು ನೋಡಿ ಅಲ್ಲಿ ನಮಗೆ 4 ಟಿಎಂಸಿ ನೀರು ಲಭ್ಯವಾಗುತ್ತದೆ ಎಂದು ಮನವರಿಕೆಯಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಹುಟ್ಟುಹಾಕಿದ್ದು ಕಾಂಗ್ರೆಸ್ ಸರ್ಕಾರ.

ನಾವು ಆರಂಭಿಸಿರುವ ಯೋಜನೆ ಪೂರ್ಣಗೊಳಿಸುವ ರಾಜಕೀಯ ಇಚ್ಛಾಶಕ್ತಿ ನಿಮಗೆ ಇಲ್ಲವಾಗಿದೆ. ಜನ ನಿಮ್ಮ ಸುಳ್ಳಿಂದ ಬೇಸತ್ತಿದ್ದಾರೆ. ನೀವು ಹೇಳಿದ್ದು ನಿಜವಾಗಿದ್ದರೆ ಇಲ್ಲಿ ಹಾಕಿರುವ ಕುರ್ಚಿ, ಕ್ರೀಡಾಂಗಣವೂ ಸಾಲದಂತೆ ಇಷ್ಟು ಜನ ಯಾಕೆ ಬರುತ್ತಿದ್ದರು. ಅವರ ಪ್ರಕಾರ ನಾವು ಅಔಟ್ ಡೇಟೆಡ್ ಆಗಿದ್ದೇವಂತೆ. ಆದರೆ ನಾವು ಔಟ್ ಡೇಟೆಡ್ ಆಗಿಲ್ಲ, ಬದಲಿಗೆ ಬಿಜೆಪಿಯ ಮೇಲಿನ ನಂಬಿಕೆ ಔಟ್ ಡೇಟೆಂಡ್ ಆಗಿದೆ. ಕಾಂಗ್ರೆಸ್ ಹುಟ್ಟು ಹಾಕಿರುವ ಯೋಜನೆ ಪೂರ್ಣಗೊಳಿಸಲು ಕಾಂಗ್ರೆಸ್ ರಾಜಕೀಯ ಇಚ್ಛಾಶಕ್ತಿ ಬೇಕಾಗಿದೆ. ಅದಕ್ಕೆ ನೀವು ಶಕ್ತಿ ತುಂಬಬೇಕು.

2002ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ, ಕಳಸಾ ಬಂಡೂರಿಗೆ ಅನುಮತಿ ಸಿಕ್ಕಿತ್ತು. ನಾನು ಬಹಳ ಖುಷಿಯಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದೆ. ನಂತರ ಆರು ತಿಂಗಳ ನಂತರ ಈ ಅನುಮತಿ ವಾಪಸ್ ಕಿತ್ತುಕೊಂಡು, ನಮ್ಮ ಕೆಲಸಕ್ಕೆ ಕಲ್ಲು ಹಾಕಿದ್ದು ಬಿಜೆಪಿಯವರಲ್ಲವೇ? ಅದರ ಮುಂದುವರಿದ ಭಾಗವಾಗಿ ನ್ಯಾಯಾಧೀಕರಣ ತೀರ್ಪಿನ ಮೇಲೆ ಡಿಪಿಆರ್ ಮಾಡಿ ಅನುಮತಿ ಪಡೆದಿದ್ದೀರಿ. ಇದು ಇನ್ನು ಸಂಪೂರ್ಣವಾಗಿಲ್ಲ ಎಂದು ಜನರಿಗೆ ಹೇಳುವುದನ್ನು ಮರೆಯಬೇಡಿ. ಮುಗ್ಧ ರೈತರಿಗೆ ಸುಳ್ಲು ಹೇಳಿ ಮೋಸ ಮಾಡಬೇಡಿ ಎಂದು ಎಚ್ಚರಿಸಲು ಬಯಸುತ್ತೇನೆ.

Share.
Exit mobile version