ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾನಿಪುರಿ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ಆದ್ರೆ, ಪ್ರತಿದಿನ ತಿನ್ನುವುದರಿಂದ ಸಮಸ್ಯೆಗಳನ್ನ ಎಂಬುದನ್ನ ಮರೆಯಬೇಡಿ.
ಪಾನಿಪುರಿಯನ್ನ ಗೋಲ್ಗಪ್ಪ ಅಂತಾನೇ ಕರೆಯೋದು ರೂಢಿ. ಈ ರಸ್ತೆ ಬದಿಯ ಪಾನಿಪುರಿಗೆ ಭಾರಿ ಬೇಡಿಕೆ ಇದ್ದು, ಪಾನಿಪುರಿ ತಿನ್ನುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂದು ಹಲವರು ಹೇಳುತ್ತಾರೆ. ಇದು ಕೇವಲ ಬಾಯಿಯ ರುಚಿಗೆ ಮಾತ್ರ ಎಂದು ಹಲವರು ಹೇಳುತ್ತಾರೆ.
ಆದ್ರೆ, ಪಾನಿಪುರಿ ತಿನ್ನುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ಹಾಗಂತ, ಪ್ರತಿದಿನ ತಿಂದರೆ ಸಮಸ್ಯೆ ತಪ್ಪಿದ್ದಲ್ಲ.
ಪಾನಿಪುರಿಯನ್ನ ಮಧುಮೇಹಿಗಳು ತಿನ್ನಬಹುದು. ಯಾಕಂದ್ರೆ, ಮಧುಮೇಹಿಳಿಗೆ ಸಕ್ಕರೆಯ ಸಿಹಿತಿಂಡಿಗಳನ್ನ ತ್ಯಜಿಸಲು ಸೂಚಿಸಲಾಗುತ್ತದೆ. ಪಾನಿಪುರಿಯಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಅವ್ರು ಇದನ್ನ ಸೇವಿಸಬಹುದು.
ಸಂಜೆ ಲಘು ಆಹಾರಕ್ಕೆ ಆದ್ಯತೆ ನೀಡಬೇಕು. ಆದ್ರೆ, ಪಿಜ್ಜಾ ಮತ್ತು ಬರ್ಗರ್ನಂತಹ ಆಹಾರಗಳು ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಹೀಗಾಗಿ ಲಘು ಆಹಾರ ಪ್ರಿಯರು ಪಾನಿಪುರಿಯನ್ನ ಆರಿಸಿಕೊಳ್ಳಬಹುದು.
ಪಾನಿಪುರಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್ ಎ, ಬಿ-6, ಬಿ-12, ಸಿ ಮತ್ತು ಡಿ ಇರುವುದ್ರಿಂದ ಪಾನಿಪುರಿಯನ್ನ ಮಿತವಾಗಿ ತಿನ್ನುವುದು ಒಳ್ಳೆಯದು.
ಪಾನಿಪುರಿಯಲ್ಲಿ ಜೀರಿಗೆ, ಜೀರಿಗೆ, ಪುದೀನಾ ಮತ್ತು ಕೊತ್ತಂಬರಿ ಪುಡಿಯನ್ನ ಬಳಸುತ್ತಾರೆ. ಸಂಶೋಧನಾ ವರದಿಯ ಪ್ರಕಾರ, ಈ ಮಿಶ್ರಣವನ್ನ ಕುಡಿಯುವುದರಿಂದ ಬಾಯಿ ಹುಣ್ಣು (ಗುಳ್ಳೆ) ಕಡಿಮೆಯಾಗುತ್ತದೆ.
ಪಾನಿಪುರಿಯಲ್ಲಿ ಹಸಿ ಮಾವಿನ ಹುಳಿ, ಕರಿಮೆಣಸು ಮತ್ತು ಕಪ್ಪು ಉಪ್ಪನ್ನು ಬಳಸುತ್ತಾರೆ. ಈ ಪದಾರ್ಥಗಳು ಅಸಿಡಿಟಿ ಸಮಸ್ಯೆಯನ್ನ ಹೋಗಲಾಡಿಸುತ್ತದೆ.
ಮೊದಲು ನಿಮ್ಮ ಮನೆಯ ಮುಸುರೆ ಸ್ವಚ್ಚ ಮಾಡಿಕೊಳ್ಳಿ – ಸುನೀಲ್ ಕುಮಾರ್ ಕಾರ್ಕಳ ತಿರುಗೇಟು