ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ವಿವಿಧ ಆಹಾರ ಪದ್ಧತಿಗಳಿಂದಾಗಿ ಜನರು ತಮಗೆ ಇಷ್ಟವಾದ ಆಹಾರವನ್ನ ಸೇವಿಸುತ್ತಾರೆ. ಅದರ ಭಾಗವಾಗಿ, ಅನೇಕ ಜನರು ತಣ್ಣೀರು ಕುಡಿಯಲು ಇಷ್ಟಪಡುತ್ತಾರೆ. ಇನ್ನು ಕೆಲವರು ಬಿಸಿ ನೀರನ್ನ ಕುಡಿಯಲು ಆಯ್ಕೆ ಮಾಡುತ್ತಾರೆ. ಆದ್ರೆ, ನಿಯಮಿತವಾಗಿ ತಣ್ಣೀರು ಕುಡಿಯುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡುತ್ತದೆ. ತಣ್ಣೀರು ಅನೇಕ ರೋಗಗಳನ್ನು ಆಹ್ವಾನಿಸುತ್ತದೆ. ಹಾಗಾಗಿ ಸಾಮಾನ್ಯ ನೀರು ಕುಡಿಯುವುದು ಉತ್ತಮ ಎನ್ನುತ್ತಾರೆ ವೈದ್ಯರು.
ತಣ್ಣೀರು ಕುಡಿಯಬಾರದು. ಸಾಧ್ಯವಾದರೆ, ಬೆಚ್ಚನೆಯ ನೀರು ತಣ್ಣಗಾದ ನಂತ್ರ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಅನೇಕ ಜನರು ವಿಶೇಷವಾಗಿ ಬೆಳಿಗ್ಗೆ ಚಹಾ, ಕಾಫಿ ಅಥವಾ ತಣ್ಣೀರು ಕುಡಿಯುವ ಅಭ್ಯಾಸವನ್ನ ಹೊಂದಿರುತ್ತಾರೆ. ಇದನ್ನು ತಪ್ಪಿಸುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಚಳಿಗಾಲದಲ್ಲಿ ಮುಂಜಾನೆ ಬಿಸಿನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
ಬೆಳಿಗ್ಗೆ ಎದ್ಮೇಲೆ 2 ಅಥವಾ 3 ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಹಾಗಂತ, ನೀರು ಗಟಗಟ ಅಂತಾ ಕುಡಿಯಬೇಡಿ. ಬಾಯಿಯಲ್ಲಿ ಇಟ್ಟುಕೊಂಡು ಗುಟುಕು ಕುಡಿಯಿರಿ. ಪ್ರತಿದಿನ ಬೆಳಗ್ಗೆ ಎದ್ದಾಗ ಬಿಸಿ ನೀರು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಬಿಸಿನೀರು ನಮ್ಮ ದೇಹವನ್ನ ಕಾಲೋಚಿತ ವೈರಲ್ ಸೋಂಕುಗಳಿಂದ ರಕ್ಷಿಸುತ್ತದೆ. ಅದಲ್ಲದೇ, ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ದಿನವಿಡೀ ಚೈತನ್ಯದಿಂದ ಇರುತ್ತೀರಿ. ಅನೇಕ ಜನರು ತೂಕ ಇಳಿಸಿಕೊಳ್ಳಲು ಬಿಸಿನೀರನ್ನ ಕುಡಿಯುತ್ತಾರೆ. ಆದರೆ ಬೆಳಗ್ಗೆ ಹಾಗೂ ರಾತ್ರಿ ಬಿಸಿ ನೀರು ಕುಡಿದರೆ ಸುಲಭವಾಗಿ ತೂಕ ಕಡಿಮೆಯಾಗುತ್ತದೆ.
ನಿತ್ಯವೂ ಬಿಸಿನೀರಿನ ಸೇವನೆಯಿಂದ ದೇಹದಲ್ಲಿರುವ ಅಧಿಕ ಕೊಬ್ಬನ್ನ ಕರಗಿಸುತ್ತದೆ. ಬೊಜ್ಜು ಮತ್ತು ಕೊಲೆಸ್ಟ್ರಾಲ್ ಸಮಸ್ಯೆ ಇರುವವರಿಗೆ ಬಿಸಿ ನೀರು ಕುಡಿಯುವುದು ತುಂಬಾ ಒಳ್ಳೆಯದು. ಅಲ್ಲದೆ ಬಿಸಿನೀರು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ದೂರವಾಗುವುದಲ್ಲದೇ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಬಿಸಿನೀರು ಆಹಾರವನ್ನ ಜೀರ್ಣಿಸಿಕೊಳ್ಳಲು ಹೊಟ್ಟೆಯಿಂದ ಜೀರ್ಣಕಾರಿ ರಸವನ್ನು ಸ್ರವಿಸುತ್ತದೆ. ಇದರಿಂದ ದೇಹದಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆಗಳು ಕಡಿಮೆಯಾಗಿ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
‘ದುರ್ಭಿನ್ನು ಹಾಕಿ ಹುಡುಕಿದರೂ ಬಜೆಟ್ ನಲ್ಲಿ ಏನು ಸಿಗೋಲ್ಲ’ : ಟ್ವೀಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ |Budget 2023
Health Tips : ಟೀ ಕುಡಿಯುವಾಗ ಮರೆತು ಈ ಪದಾರ್ಥಗಳನ್ನು ಸೇವಿಸಬೇಡಿ, ಆರೋಗ್ಯಕ್ಕೆ ಹಾನಿಕಾರಕ
ಮದುವೆ ಆದ್ಮೇಲೆ ಮಹಿಳೆಯರು ಏಕಾಏಕಿ ‘ದಪ್ಪ’ ಆಗೋದು ಯಾಕೆ.? ಕಾರಣ ಇಲ್ಲಿದೆ.!