ಲಾಕ್ ಡೌನ್ ಸಮಯದಲ್ಲಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ ಗೊತ್ತಾ? – Kannada News Now


Lifestyle

ಲಾಕ್ ಡೌನ್ ಸಮಯದಲ್ಲಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ ಗೊತ್ತಾ?

ನ್ಯೂಸ್‌ಡೆಸ್ಕ್: ಲಾಕ್‌ಡೌನ್‌ ಸಮಯದಲ್ಲಿ ಬಹುತೇಕ ಮಂದಿ ವಾಕಿಂಗ್‌, ಜಾಗಿಂಗ್‌ ಸೇರಿದಂತೆ ತಮ್ಮ ದೈನಂದಿನ ಕಸರತ್ತುಗಳಿಂದ ದೂರು ಉಳಿದಿದ್ದಾರೆ. ಇನ್ನೂ ಈ ಸಮಯದಲ್ಲೇ ಹೆಚ್ಚು ಮಂದಿ ಮನೆಯಲ್ಲಿ ಇರುವುದರಿಂದ ಹೆಚ್ಚು ಆಹಾರ ಸೇರಿದಂತೆ, ಬಾಯಿ ರುಚಿಗಾಗಿ ನಾನಾ ಅಡುಗೆ, ತಿಂಡಿ ತಿನಿಸುಗಳನ್ನು ಮಾಡಿಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ದೈನಂದಿನ ಕಸರತ್ತು ಇಲ್ಲದೇ ಮನೆಯಲ್ಲಿ ಹೀಗೆ ರುಚಿ ರುಚಿಯಾದ ಅಡುಗೆಗಳನ್ನು ಮಾಡಿಕೊಂಡು ತಿನ್ನುವುದರಿಂದ ತಮ್ಮ ತೂಕದಲ್ಲಿ ಗಣನೀಯು ಪ್ರಮಾಣದಲ್ಲಿ ಹೆಚ್ಚು ಮಾಡಿಕೊಳ್ಳುತ್ತಿರುವುದನ್ನ ಕೂಡ ನಾವು ಕಾಣಬಹುದಾಗಿದೆ.

ಈ ನಿಟ್ಟಿನಲ್ಲಿ ನಾವು ನಿಮಗೆ ಲಾಕ್ ಡೌನ್ ಸಮಯದಲ್ಲಿ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

 1. ನಿಮ್ಮ ಊಟವನ್ನು ಪ್ಲಾನ್‌ ಮಾಡಿಕೊಳ್ಳಿ
  ಇಡೀ ದಿನ ಎಲ್ಲಾ ಊಟಗಳನ್ನು ಮೊದಲು ಪ್ಲಾನ್‌ ಮಾಡಿಕೊಳ್ಳಿ ಇದರಲ್ಲಿ, ತಿಂಡಿ ಕೂಡ ಒಳಗೊಂಡಿರುತ್ತದೆ. ಹಸಿವು ಉಂಟಾದಾಗ, ಲಭ್ಯವಿರುವ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವನೆ ಮಾಡುವುದಕ್ಕೆ ಒತ್ತು ನೀಡಿದೆ. ಹಸಿವು ಹೆಚ್ಚಾದ ಹಾಗೇ ಹೆಚ್ಚು ತಿನ್ನುವುದು ಕೂಡ ನಮ್ಮಲ್ಲಿ ಹೆಚ್ಚಾಗಿದೆ ಕೂಡ.
 2.  ಮಲಗುವ ಕೋಣೆಯಲ್ಲಿ ಆಹಾರ ಸೇವನೆ ಮಾಡಬೇಡಿ
  ಮಲಗುವ ಕೋಣೆಯಲ್ಲಿ ಆಹಾರ ಸೇವನೆ ಮಾಡಲೇ ಬೇಡಿ. ನೀವು ತಿನ್ನಬೇಕಾದಾಗಲೆಲ್ಲಾ ನಿಮ್ಮ ಹಾಸಿಗೆ ಎದ್ದು ಹೋಗುವುದಕ್ಕೆ ಪ್ರಯತ್ನ ಮಾಡಿ.
 3. ಸಾಕಷ್ಟು ದ್ರವ ಸೇವನೆ ಮಾಡಿ
  ಈ ಹವಾಮಾನದಲ್ಲಿ ಉತ್ತಮ ಆರೋಗ್ಯಕ್ಕಾಗಿ ನಿಮ್ಮ ದೇಹವನ್ನು ಹೈಡ್ರೀಕರಿಸುವುದು ಮುಖ್ಯ, ಮತ್ತು ಇದು ನಿಮ್ಮನ್ನು ಸುಸ್ಥಿತಿಯಲ್ಲಿರಿಸುತ್ತದೆ. ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ ಮತ್ತು ಸಾಧ್ಯವಾದರೆ, ಸಾಕಷ್ಟು ರಸಭರಿತ ಜ್ಯೂಸ್‌ಗಳನ್ನು ಸೇವನೆ ಮಾಡಿ
 4.  ನಿಧಾನವಾಗಿ ತಿನ್ನುವುದನ್ನು ಅಭ್ಯಾಸ ಮಾಡಿ
  ಲಾಕ್‌ಡೌನ್‌ನ ಒಂದು ಪ್ರಯೋಜನವೆಂದರೆ ನಾವು ಹೆಚ್ಚು ಸಮಯವನ್ನು ಹೊಂದಿದ್ದು, ಇದು ಆಹಾರ ಸೇವನೆಯಲ್ಲಿ ಅದರಲ್ಲೂ ಕೈನಲ್ಲಿ ಆಹಾರ ಸೇವನೆ ಮಾಡುವುದಕ್ಕೆ ಅವಶ್ಯಕತೆ ನೀಡುತ್ತದೆ. ಹೀಗಾಗಿ ನೀವು ಆಹಾರವನ್ನು ಶಾಂತಿಯುತವಾಗಿ ಹಾಗೂ ನಿಧಾನವಾಗಿ ತಿನ್ನುವುದಕ್ಕೆ ಸಹಾಯ ಮಾಡುತ್ತದೆ. ಆಹಾರವನ್ನು ಸರಿಯಾಗಿ ಅಗೆದು, ನಿಧಾನವಾಗಿ ತಿನ್ನುವುದನ್ನು ರೂಡಿ ಮಾಡಿಕೊಳ್ಳಿ.
 5. ಕಟ್ಟುನಿಟ್ಟಾದ ವೇಳಾಪಟ್ಟಿಯನ್ನು ಅನುಸರಿಸಿ
  ಮೊದಲಿಗೆ ಇದು ಕಷ್ಟಕರವೆಂದು ನಮಗೆ ತಿಳಿದಿದೆ ಆದರೆ ಒಮ್ಮೆ ನೀವು ಸರಿಯಾದ ಸಮಯದ ಸಮಯದೊಂದಿಗೆ ವೇಳಾಪಟ್ಟಿಯನ್ನು ಹಾಕಿಕೊಂಡು ಅನುಸರಿಸಲು ಪ್ರಾರಂಭಿಸಿದರೆ, ನಿಮ್ಮ ದಿನವು ಹೆಚ್ಚು ಆರಾಮಾಗಿ ಇಡುವುದರಲ್ಲಿ ಸಂದೇಹವಿಲ್ಲ.error: Content is protected !!