ಕೆ ಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಸಲುವಾಗಿ ಕೆಲವರು ಯೋಗ ಮಾಡಿದ್ರೆ, ಇನ್ನು ಕೆಲವರು ವಾಕ್ ಮಾಡುತ್ತಾರೆ.
ಇದರಿಂದದೇಹದ ಎಲ್ಲಾ ಭಾಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ದಿನನಿತ್ಯದ ವ್ಯಾಯಾಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ.
ಅದರಲ್ಲಂತೂ ಈಗಿನ ಒತ್ತಡದ ಬದುಕಿಗೆ ಯೋಗ ಹೇಳಿ ಮಾಡಿಸಿದ ಪರಿಹಾರವಾಗಿದೆ. ಆದರೆ ನೆನಪಿಡಿ, ಯೋಗವನ್ನು ಸರಿಯಾಗಿ ತರಬೇತಿ ಪಡೆಯದೆ ಆರಂಭಿಸಿದರೆ ಆಪಾಯಗಳೇ ಹೆಚ್ಚು. ಯೋಗ ಮಾಡುವಾಗ ಮತ್ತು ಯೋಗದ ನಂತರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರಿಯಾದ ಅರಿವಿದ್ದರೆ ಮಾತ್ರ ಯೋಗ ದೇಹಕ್ಕೆ ಯೋಗ್ಯ. ಇಲ್ಲವಾದರೆ ಯೋಗದಿಂದ ಇನ್ನೊಂದು ರೀತಿಯ ಅನಾರೋಗ್ಯದ ಸಮಸ್ಯೆ ಕಾಡಲಿದೆ. ಇದರ ಜೊತೆಗೆ ಎಂತಹ ದೇಹ ಸ್ಥಿತಿಯವರು ಯಾವ ರೀತಿಯ ಯೋಗ ಮಾಡಬೇಕು ಎನ್ನುವುದು ಕೂಡ ತಿಳಿದಿರಲೇಬೇಕಾದ ಅಂಶವಾಗಿದೆ.
ತಲೆಸುತ್ತುವಿಕೆ ಹಲವು ಕಾರಣಗಳಿಗೆ ತಲೆಸುತ್ತುವಿಕೆ ಉಂಟಾಗುತ್ತದೆ. ಕೆಲವರಿಗೆ ಅದು ಯೋಗ ಮಾಡುವಾಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಮೊದಲ ಪ್ರಮುಖ ಕಾರಣವೆಂದರೆ ಹಲವು ದಿನಗಳ ಗ್ಯಾಪ್ ಕೊಟ್ಟು ನಂತರ ಯೋಗಾಭ್ಯಾಸ ಕೈಗೊಳ್ಳುವುದು.
ಚೆನ್ನಾಗಿ ನಿದ್ದೆ ಮಾಡಬೇಕು: ನಿದ್ದೆ ಎಲ್ಲಾ ರೀತಿಯಿಂದಲೂ ದೇಹಕ್ಕೆ ಒಳಿತು. ದಣಿದ ದೇಹಕ್ಕೆ ಹುರುಪು ತುಂಬುವ ನಿದ್ದೆ ದೇಹದ ಸರ್ವತೋಮುಖ ಆರೋಗ್ಯವನ್ನು ಸಮತೋಲನದಲ್ಲಿಡುತ್ತದೆ. ಆದ್ದರಿಂದ ಚೆನ್ನಾಗಿ ನಿದ್ದೆ ಮಾಡಿ. ಯೋಗ ಮಾಡುವಾಗ ಕಾಣಿಸಿಕೊಳ್ಳುವ ತಲೆಸುತ್ತುವಿಕೆ ಕೂಡ ನಿದ್ದೆ ಸರಿಯಾಗಿದ್ದರೆ ಕಡಿಮೆಯಾಗುತ್ತದೆ.
ಯೋಗ ಮಾಡುವ ಸಮಯ: ಯಾವಾಗೆಂದರೆ ಆಗ ಯೋಗ ಮಾಡುವುದು ದೇಹಕ್ಕೆ ಒಳಿತಲ್ಲ. ಇದು ಅನಾರೋಗ್ಯವನ್ನೇ ತಂದೊಡ್ಡುತ್ತದೆ. ಆದ್ದರಿಂದ ಯೋಗಕ್ಕೆ ಒಂದು ಸರಿಯಾದ ಸಮಯವನ್ನು ನಿಗದಿಪಡಿಸಿಕೊಳ್ಳಿ. ಸಂಜೆಯ ಸಮಯ ಅಥವಾ ಬೆಳಗಿನ ಸಮಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯವಾದ ವೇಳೆಯಾಗಿದೆ. ಈಗಂತೂ ಬೇಸಿಗೆ ಆರಂಭವಾಗಿದೆ. ಸೆಖೆ ಕೂಡ ಹೆಚ್ಚು. ಹೀಗಾಗಿ ತಂಪಿನ ವಾತಾವರಣದಲ್ಲಿಯೇ ಯೋಗವನ್ನು ಮಾಡುವುದು ಒಳ್ಳೆಯದು.
ಚೆನ್ನಾಗಿ ನೀರು ಕುಡಿಯಬೇಕು:ಈಗ ಬೇಸಿಗೆಯಾಗಿದ್ದರಿಂದ ದೇಹ ನಿರ್ಜಲೀಕರಣಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಯೋಗ ಮಾಡಿದಾಗ ತಲೆಸುತ್ತುತ್ತದೆ. ಆದ್ದರಿಂದ ಸಾಕಷ್ಟು ನೀರು ಸೇವಿಸಿ. ಪ್ರತಿದಿನ ಕನಿಷ್ಠ 3 ರಿಂದ 4 ಲೀಟರ್ ವರೆಗೆ ನೀರು ಕುಡಿಯಬೇಕು.