ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಪ್ರತಿನಿತ್ಯ ಅನ್ನ ಸಾಂಬಾರ್‌ ತಿಂದ ನಂತರ ಸ್ವಲ್ಪವಾದರೂ ಮೊಸರು ತಿನ್ನದಿದ್ದರೆ ಸಮಾಧಾನ ಎನಿಸುವುದೇ ಇಲ್ಲ. ಕೆಲವರು ಚಳಿ, ಮಳೆಗಾಲದಲ್ಲಿ ಮೊಸರಿನಿಂದ ದೂರ ಇರುತ್ತಾರೆ. ಇನ್ನೂ ಕೆಲವರು ಎಂತಹ ಚಳಿ ಇರಲಿ, ಮಳೆ ಇರಲಿ ಸ್ವಲ್ಪವಾದರೂ ಮೊಸರು ತಿನ್ನಲೇಬೇಕು.

Health tips : ಎಚ್ಚರ..! ಚಳಿಗಾಲದಲ್ಲಿ ಹೃದಯ ಸ್ತಂಭನದ ಅಪಾಯ ಹೆಚ್ಚು, ಇಂದೇ ಈ 4 ಅಭ್ಯಾಸಗಳನ್ನು ರೂಢಿಸಿಕೊಳ್ಳಿ | Winter Alert For Heart

 

ಮೊಸರು ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದೆ. ಅದರ ವಿಶೇಷ ಗುಣಗಳೇ ಇದಕ್ಕೆ ಕಾರಣ. ಪ್ರತಿದಿನ ಮೊಸರು ತಿನ್ನುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ಮೂಳೆಗಳ ಆರೋಗ್ಯವನ್ನು ಬಲಪಡಿಸಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿನ ಆರೋಗ್ಯಕರ ಪ್ರೋಬಯಾಟಿಕ್‌ಗಳಿಂದ ಕರುಳಿನ ಆರೋಗ್ಯ ಕೂಡಾ ಸುಧಾರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸುಧಾರಿಸುತ್ತದೆ, ಉರಿಯೂತ ಹಾಗೂ ಸ್ಥೂಲಕಾಯತೆಯನ್ನು ಕಡಿಮೆ ಮಾಡುತ್ತದೆ. ಆದರೆ ಮೊಸರನ್ನು ಊಟದ ನಂತರ ತಿನ್ನುವುದಕ್ಕಿಂತ, ಊಟದ ಮುನ್ನ ತಿನ್ನುವುದು ಉತ್ತಮ ಎನ್ನಲಾಗಿದೆ. ಊಟಕ್ಕೆ ಮೊದಲು ಮೊಸರು ಸೇವಿಸುವ ಮಹಿಳೆಯರ ಕರುಳಿನ ಉರಿಯೂತದಲ್ಲಿ ಗಮನಾರ್ಹವಾದ ಕಡಿತ ಮತ್ತು ಸುಧಾರಿತ ಚಯಾಪಚಯ ಕ್ರಿಯೆ ಉಂಟಾಗುವ ಸಾಧ್ಯತೆಯು ಅಧ್ಯಯನದಿಂದ ಸಾಬೀತಾಗಿದೆ.

Health tips : ಎಚ್ಚರ..! ಚಳಿಗಾಲದಲ್ಲಿ ಹೃದಯ ಸ್ತಂಭನದ ಅಪಾಯ ಹೆಚ್ಚು, ಇಂದೇ ಈ 4 ಅಭ್ಯಾಸಗಳನ್ನು ರೂಢಿಸಿಕೊಳ್ಳಿ | Winter Alert For Heart

 

ಮೊಸರು, ತಂಪಾಗಿಸುವ ಶಕ್ತಿಯನ್ನು ಹೊಂದಿದೆ. ಬೇಸಿಗೆಯಲ್ಲಾದರೆ ಓಕೆ. ಆದರೆ ಚಳಿಗಾಲದಲ್ಲಿ ಜೇನುತುಪ್ಪ, ಕರಿಮೆಣಸು ಮತ್ತು ಹುರಿದ ಜೀರ್ಗೆ ಪುಡಿಯಂತಹ ಮಸಾಲೆಗಳೊಂದಿಗೆ ಮೊಸರನ್ನು ಸೇವಿಸುವುದು ಉತ್ತಮ ಎನ್ನಲಾಗಿದೆ. ಇದು ಶಕ್ತಿಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಲೋಳೆಯ ರಚನೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಜೀರ್ಣಕ್ರಿಯೆ ಮತ್ತು ಮಲಬದ್ಧತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ಚಳಿ ಅಥವಾ ಮಳೆಗಾಲದಲ್ಲಿ ಮೊಸರನ್ನು ರಾತ್ರಿ ವೇಳೆ ಸೇವಿಸದಿದ್ದರೆ ಒಳ್ಳೆಯದಾಗಿರುತ್ತದೆ.

Share.
Exit mobile version