ಸುಭಾಷಿತ :

Tuesday, February 18 , 2020 1:51 PM

ಇಷ್ಟಾರ್ಥ, ಮನಃಶಾಂತಿಗಾಗಿ ಹೀಗೆ ಮಾಡಿ..


Thursday, February 13th, 2020 3:15 pm


ಸ್ಪೆಷಲ್‌ಡೆಸ್ಕ್: ಪ್ರತಿಯೊಂದು ಹಬ್ಬ-ಆಚರಣೆಗಳಿಗೂ ಒಂದೊಂದು ಮಹತ್ವ, ಹಿನ್ನೆಲೆ ಇರುತ್ತದೆ. ಹಾಗೆಯೇ ಪ್ರತಿಯೊಂದು ಆಚರಣೆಗಳೂ ಒಂದೊಂದು ದೇವರಿಗೆ ಸಂಬಂಧಪಟ್ಟಿದ್ದಾಗಿದ್ದಾಗಿರುತ್ತದೆ.

ಆ ದೇವರುಗಳನ್ನು ಉಪಾಸನೆ ಮಾಡುವುದರಿಂದ ಜೀವನದಲ್ಲಿ ಮನಃಶಾಂತಿ ಪಡೆಯಬಹುದೆಂಬ ನಂಬಿಕೆ ಇದೆ. ಅಂಥಹದ್ದೇ ಒಂದು ಆಚರಣೆಗಳಲ್ಲಿ ಪ್ರದೋಷ ವ್ರತವೂ ಒಂದು. ಇದು ಅತ್ಯಂತ ವಿಶೇಷ ಮಹತ್ವ ಪಡೆದಿದೆ. ಪ್ರತಿ ತಿಂಗಳಿನಲ್ಲಿ ಬರುವ ಶುಕ್ಲ ಮತ್ತು ಕೃಷ್ಣ ತ್ರಯೋದಶಿಯ ಸೂರ್ಯಾಸ್ತದ ನಂತರದ ಮೂರು ಘಳಿಗೆಗಳ ಕಾಲಕ್ಕೆ ‘ಪ್ರದೋಷ’ ಎಂದು ಹೇಳುತ್ತಾರೆ.

ಪ್ರದೋಷ ವ್ರತಾಚರಣೆ ಶಿವ ಹಾಗೂ ಪಾರ್ವತಿ ದೇವತೆಗಳ ಉಪಾಸನೆಗೆ ಸಂಬಂಧಿಸಿದ್ದಾಗಿದ್ದು, ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರದೋಷ ದಿನದಂದು ಉಪವಾಸವಿದ್ದು, ಶಿವನ ದೇವಾಲಯದಲ್ಲಿ ರುದ್ರಾಭಿಷೇಕ, ಮಹಾಮೃತ್ಯುಂಜಯ ಜಪವನ್ನು 108 ಬಾರು ಜಪಿಸಿದರೆ, ಇಷ್ಟಾರ್ಥಗಳು ನೆರವೇರಿ, ಮನಃಶಾಂತಿ ಪಡೆಯಬಹುದೆಂಬ ನಂಬಿಕೆ ಇದೆ. ಪ್ರದೋಷದ ಮರುದಿನ ಮಹಾ ವಿಷ್ಣುವಿನ ಪೂಜೆ ಮಾಡುವುದು ಉತ್ತಮ ಎಂದು ಹೇಳಲಾಗಿದ್ದು, ಈ ವ್ರತವು ಮೂರರಿಂದ ಹನ್ನೆರಡು ವರ್ಷಗಳ ಅವಧಿಯದ್ದಾಗಿರುತ್ತದೆ. ಕೃಷ್ಣ ಪಕ್ಷದಲ್ಲಿ ಶನಿವಾರದಂದು ಪ್ರದೋಷ ಬಂದರೆ ಅದನ್ನು ವಿಶೇಷ ಎನ್ನಲಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions