ನವದೆಹಲಿ : ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದು, BSNL ನ ಕನಿಷ್ಠ 62,000 ಉದ್ಯೋಗಿಗಳಿಗೆ ‘ಸರ್ಕಾರಿ’ ಧೋರಣೆ ಬಿಟ್ಟು ಸರಿಯಾಗಿ ಕೆಲಸ ಮಾಡುವಂತೆ ವೈಷ್ಣವ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಟೆಲಿಕಾಂ ಸಚಿವರು ನೌಕರರಿಗೆ ಬಲವಂತದ ನಿವೃತ್ತಿ ನೀಡದಿರುವ ಬಗ್ಗೆಯೂ ಮಾತನಾಡಿದ್ದಾರೆ. ಅಶ್ವಿನಿ ವೈಷ್ಣವ್ ಅವ್ರು ಉದ್ಯೋಗಿಗಳಿಗೆ ಚೆನ್ನಾಗಿ ಕೆಲಸ ಮಾಡಿ ಅಥವಾ ನಿವೃತ್ತಿ ತೆಗೆದುಕೊಳ್ಳಿ ಎಂದು ನೇರವಾಗಿ ಹೇಳಿದ್ದಾರೆ.

ವಾಸ್ತವವಾಗಿ, ಬಿಎಸ್ಎನ್ಎಲ್ ಸ್ಥಿತಿಯನ್ನ ಸುಧಾರಿಸಲು ದೂರಸಂಪರ್ಕ ಸಚಿವರು ಗುರುವಾರ ಹಿರಿಯ ಅಧಿಕಾರಿಗಳ ಸಭೆಯನ್ನ ಕರೆದಿದ್ದರು. ಈ ಸಭೆಗೆ ಸಂಬಂಧಿಸಿದ ಆಡಿಯೋ ಲೀಕ್ ಆಗಿದ್ದು, ಇದರಲ್ಲಿ ಸಚಿವರು ಬಿಎಸ್‌ಎನ್‌ಎಲ್ ಉದ್ಯೋಗಿಗಳಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಅಂದ್ಹಾಗೆ, ಕುಸಿಯುತ್ತಿರುವ ಬಿಎಸ್‌ಎನ್‌ಎಲ್ ಕಂಪನಿಯನ್ನ ಮತ್ತೆ ಹಳಿಗೆ ತರಲು ವೈಷ್ಣವ್ ಅವ್ರು ಈ ವಾರ 1.64 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಿಸಿದ್ದರು.

ನೌಕರರು ನಿವೃತ್ತಿ ಹೊಂದುವಂತೆ ಒತ್ತಾಯಿಸಲಾಗುವುದು
ಐದು ನಿಮಿಷಗಳ ಕ್ಲಿಪ್‌ನಲ್ಲಿ ಸಚಿವರು, ‘ನಾನು ಪ್ರತಿ ತಿಂಗಳು ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ. ಕೆಲಸ ಮಾಡಲು ಇಷ್ಟವಿಲ್ಲದವರು ಸ್ವಂತ ಇಚ್ಛೆಯಿಂದ ನಿವೃತ್ತಿ ಪಡೆದು ಮನೆಗೆ ಹೋಗಬಹುದು. ಇದು ನಿಜವಾಗದಿದ್ದರೆ, ಭಾರತೀಯ ರೈಲ್ವೆಯಲ್ಲಿ ಮಾಡಿದಂತೆ ಅಂತಹ ಉದ್ಯೋಗಿಗಳನ್ನ ಬಲವಂತವಾಗಿ ನಿವೃತ್ತಿಗೊಳಿಸಲಾಗುತ್ತದೆ. BSNL ಅನ್ನು ಆರ್ಥಿಕವಾಗಿ ಸದೃಢಗೊಳಿಸುವ ಸಲುವಾಗಿ ಕೇಂದ್ರ ಸಚಿವ ಸಂಪುಟವು ಜುಲೈ 27ರಂದು 1.64 ಲಕ್ಷ ಕೋಟಿ ರೂಪಾಯಿಗಳ ಪುನರುಜ್ಜೀವನ ಪ್ಯಾಕೇಜ್ ಅನುಮೋದಿಸಿತು.

ಉತ್ತಮ ಕಾರ್ಯಕ್ಷಮತೆ ಮಾತ್ರ ಕೆಲಸವನ್ನ ಉಳಿಸುತ್ತೆ
ಇನ್ನು ವೈಷ್ಣವ್, ‘ನಾವು ಮಾಡಬೇಕಾದ್ದನ್ನು ಮಾಡಿದ್ದೇವೆ. ಈಗ ನೀವು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇದು ಇಂದಿನಿಂದ ಹೊಸ ಸಾಮಾನ್ಯವಾಗಲಿದೆ. ಚೆನ್ನಾಗಿ ಕೆಲಸ ಮಾಡಿ ಅಥವಾ ನಿವೃತ್ತಿ ತೆಗೆದುಕೊಳ್ಳಿ. ಈ ಸ್ಪರ್ಧಾತ್ಮಕ ಉದ್ಯಮದಲ್ಲಿ ನಿಮ್ಮ ಕಾರ್ಯಕ್ಷಮತೆ ಮಾತ್ರ ನಿಮ್ಮ ಕೆಲಸವನ್ನ ಉಳಿಸುತ್ತದೆ. ಮುಂದಿನ 24 ತಿಂಗಳುಗಳಲ್ಲಿ ಫಲಿತಾಂಶವನ್ನ ನೋಡಲು ನಾನು ಬಯಸುತ್ತೇನೆ. ನಾನು ಪ್ರತಿ ತಿಂಗಳು ಎಲ್ಲಾ ಉದ್ಯೋಗಿಗಳ ಮಾಸಿಕ ಕಾರ್ಯಕ್ಷಮತೆಯ ವರದಿಯನ್ನ ನೋಡುತ್ತೇನೆ.

ಸಚಿವರು, ‘ಪುನರುಜ್ಜೀವನ ಪ್ಯಾಕೇಜ್ ಮಾಡಿದ ರೀತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಷ್ಟು ದೊಡ್ಡ ಅಪಾಯವನ್ನ ವಿಶ್ವದ ಯಾವುದೇ ಸರ್ಕಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಸಣ್ಣ ಹಂಚಿಕೆಯಾಗಿರಲಿಲ್ಲ. ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (BBNL) ಅನ್ನು ಬಿಎಸ್‌ಎನ್‌ಎಲ್‌ನೊಂದಿಗೆ ವಿಲೀನಗೊಳಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ.

Share.
Exit mobile version