Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Facebook Twitter Instagram
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    • STATE
    • KARNATAKA
    • INDIA
    • WORLD
    • SPORTS
      • CRICKET
      • OTHER SPORTS
    • FILM
      • SANDALWOOD
      • BOLLYWOOD
      • OTHER FILM
    • LIFE STYLE
      • BEAUTY TIPS
    • BUSINESS
    • JOBS
    • CORONA VIRUS
    • AUTOMOBILE
      • BIKE-REVIEWS
      • CAR-REVIEWS
    Kannada News Now |  Kannada News | Karnataka News | India News |  Breking News |  Kannada Live News | Live news India | Sports News | Breaking News | Big Breakinge news |news in kannada | Breaking news kananda News |  Kannada News News |  Breaking News  |  Karnataka News  News |  Kannada Breaking News Latest News in Kannada | Cricket news | India | Kannada Breaking News | Breaking News | Big Breaking news | Gold |  Silver
    Home»KARNATAKA»ಈ ಬಿಜೆಪಿ ಸರ್ಕಾರದಲ್ಲಿ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಮಂತ್ರಿ ಸ್ಥಾನ ಕಳೆದುಕೊಂಡವರು – ಡಿಕೆ ಶಿವಕುಮಾರ್
    KARNATAKA

    ಈ ಬಿಜೆಪಿ ಸರ್ಕಾರದಲ್ಲಿ ಲಂಚಕ್ಕೊಬ್ಬ, ಮಂಚಕ್ಕೊಬ್ಬ ಮಂತ್ರಿ ಸ್ಥಾನ ಕಳೆದುಕೊಂಡವರು – ಡಿಕೆ ಶಿವಕುಮಾರ್

    By kannadanewsliveFebruary 06, 8:03 pm

    ಚಿತ್ರದುರ್ಗ: ಈ ಸರ್ಕಾರದಲ್ಲಿ ಪಿಎಸ್ಐ ಸೇರಿದಂತೆ ಎಲ್ಲ ಉದ್ಯೋಗ ನೇಮಕಾತಿಗೂ ಲಂಚ ನೀಡಬೇಕು. ಈ ಸರ್ಕಾರದ ಭ್ರಷ್ಟಾಚಾರಕ್ಕೆ ಗುತ್ತಿಗೆದಾರರು ಸತ್ತರು. ಒಬ್ಬ ಮಂತ್ರಿ ಲಂಚದಿಂದ ಅಧಿಕಾರ ಕಳೆದುಕೊಂಡ, ಮತ್ತೊಬ್ಬ ಮಂಚದಿಂದ ಅಧಿಕಾರ ಕಳೆದುಕೊಂಡ. ಇನ್ನು 40 ದಿನಗಳ ನಂತರ ನಿಮ್ಮ ಸರ್ಕಾರ ಬರಲಿದೆ. ನೀವೆಲ್ಲ ವಿಧಾನಸೌಧದಲ್ಲಿ ಕೂತಿರುತ್ತೀರಿ. ನೀವೆಲ್ಲರೂ ಕಾಂಗ್ರೆಸ್ ಕಟ್ಟಾಳುಗಳು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದಂತ ಅವರು, ಈ ಸಭೆ ದೇವರ ಸನ್ನಿದಿ ಮುಂದೆ ನಡೆಯುತ್ತಿದೆ. ಈ ಸಭೆಯಲ್ಲಿ ಎಲ್ಲ ವರ್ಗದ ರೈತರು ಸೇರಿದ್ದೀರಿ. ರೈತ ಕೊಡುವ ಅನ್ನ, ಗುರು ಕಲಿಸುವ ಅಕ್ಷರ, ತಾಯಿ ಕೊಡುವ ಆಶೀರ್ವಾದ ಜಗತ್ತಿನಲ್ಲಿ ಶ್ರೇಷ್ಠವಾದುದು. ಇವುಗಳ ಜತೆಗೆ ಜನರ ಆಶೀರ್ವಾದ ತಾಯಿ ಆಶೀರ್ವಾದದಷ್ಟೇ ಮುಖ್ಯ. ಇಲ್ಲಿನ ಶಾಸಕರು ಸಮಾಜದ ಋಣ ತೀರಿಸಲು ತಮ್ಮ ಕರ್ತವ್ಯ ಮಾಡಿಕೊಂಡು ಬರುತ್ತಿದ್ದಾರೆ ಎಂದರು.

    ಮಹಾಭಾರತದಲ್ಲಿ ಭೀಷ್ಮ ಧರ್ಮರಾಯನಿಗೆ ಒಂದು ಮಾತು ಹೇಳುತ್ತಾರೆ. ಋಣ ತೀರಿಸುವಾಗ ನಾಲ್ಕು ಋಣ ತೀರಿಸಬೇಕಂತೆ. ತಂದೆ ತಾಯಿ ಋಣ, ಗುರುವಿನ ಋಣ, ದೇವರ ಋಣ ಹಾಗೂ ಸಮಾಜದ ಋಣ. ಈ ಋಣವನ್ನು ಧರ್ಮ ಮಾರ್ಗದಲ್ಲಿ ತೀರಿಸಬೇಕಂತೆ. ಆ ರೀತಿ ಶಾಸಕ ರಘುಮೂರ್ತಿ ಅವರು ಕನಕಪುರ ಕ್ಷೇತ್ರದಲ್ಲಿ ನಾನು ಮಾಡಿರುವುದಕ್ಕಿಂತ ಹೆಚ್ಚು ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.

    ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಸಮಾಜಕ್ಕೆ ಏನು ಮಾಡುತ್ತೇವೆ ಎಂಬುದು ಮುಖ್ಯ. ನಾವೆಲ್ಲ ನಾಯಕರು ಬಸ್ ನಲ್ಲಿ ಬರುವಾಗ ತಾಲೂಕು ಕಚೇರಿ ನೋಡಿಕೊಂಡು ಬಂದೆವು. ನಮ್ಮ ತಾಲೂಕಿನಲ್ಲಿ ಇಂತಹ ಕಟ್ಟಡ ಮಾಡಲು ಆಗಲಿಲ್ಲವಲ್ಲ ಎಂದುಕೊಂಡೆವು ಎಂದರು.

    ರಾಜ್ಯದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿ ಅವಕಾಶ ಕೊಟ್ಟೆವು. ಆದರೆ ಅದನ್ನು ಅವರ ಕೈಯಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ. ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಈ ಸಂದರ್ಭದಲ್ಲಿ ನಾನು ಕೇಳುವುದು ಇಷ್ಟೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರವಿದೆ. ನಿಮ್ಮ ಸಮುದಾಯದ ನಾರಾಯಣಸ್ವಾಮಿ ಅವರು ಕೇಂದ್ರದ ಸಚಿವರಾಗಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ನಾಗಮೋಹನ್ ದಾಸ್ ಅವರ ಸಮಿತಿ ರಚನೆ ಮಾಡಿದೆವು. ಇದನ್ನು ಜಾರಿಗೆ ಮಾಡುವುದಾಗಿ ಹೇಳಿದ್ದ ಬಿಜೆಪಿ ಚುನಾವಣೆ ಹಿನ್ನೆಲೆಯಲ್ಲಿ ಮೀಸಲಾತಿ ನೀಡುವುದಾಗಿ ಘೋಷಣೆ ಮಾದಿದೆ. ಆದರೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಈ ಮೀಸಲಾತಿ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

    ಬೊಮ್ಮಾಯಿ ಅವರೇ ನಿಮ್ಮ ಸರ್ಕಾರದ ನಿಲುವು ಏನು?ತೀರ್ಮಾನವೇನು? ಮೀಸಲಾತಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಸಂಸತ್ ನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು ಈ ವಿಚಾರವನ್ನು 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು. ಇಲ್ಲದಿದ್ದರೆ, ಈ ಸಮಾಜಕ್ಕೆ ದ್ರೋಹ ಬಗೆದಂತಾಗುತ್ತದೆ. ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಪಂಗಡದವರಿಗೆ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಬಜೆಟ್ ನಲ್ಲಿ ಅನುದಾನ ನೀಡಿತ್ತು. ದೇಶದಲ್ಲಿ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದು ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮಾತ್ರ. ನೊಂದವರಿಗೆ, ಹಸಿದವರಿಗೆ ಊಟ ಬಟ್ಟೆ ನೀಡಿ ಅವರ ಬದುಕಿನಲ್ಲಿ ಶಕ್ತಿಯಾಗಿ ನಿಲ್ಲುವುದು ಕಾಂಗ್ರೆಸ್ ಕಾರ್ಯಕ್ರಮ.

    ಭಾರತ ಜೋಡೋ ಯಾತ್ರೆ ಚಿತ್ರದುರ್ಗ ಪ್ರವೇಶ ಮಾಡಿದಾಗ ನೀವು ಕೊಟ್ಟ ಸ್ವಾಗತ, ರಾಜ್ಯಕ್ಕೆ ದೊಡ್ಡ ಶಕ್ತಿ ನೀಡಿದೆ. ನೀವು ಹಾಕಿದ ಹೆಜ್ಜೆ ದೇಶಕ್ಕೆ ಕೊಡುಗೆ. ಈ ಸಂದರ್ಭದಲ್ಲಿ ವಯಸ್ಸಾದ ಮಹಿಳೆ ರಾಹುಲ್ ಗಾಂಧಿ ಅವರಿಗೆ ಸೌತೇಕಾಯಿ ಕೊಡಲು ಬಂದಿದ್ದರು. ನಿಮ್ಮ ಅಜ್ಜಿ ಕೊಟ್ಟ ಭೂಮಿಯಲ್ಲಿ ಈ ಸೌತೇಕಾಯಿ ಬೆಳೆದಿದ್ದೇನೆ ತಗೊಳ್ಳಿ ಎಂದರು. ಬಡವರಿಗೆ ಜಮೀನು, ನಿವೇಶನ, ಪಿಂಚಣಿ, ಅಂಗನವಾಡಿ ಕಾರ್ಯಕರ್ತರು, ಅಕ್ಕಿ, ಬಗರ್ ಹುಕುಂ ಸಾಗುವಳಿ, ಉದ್ಯೋಗ, ಮೀಸಲಾತಿ, ಸಂವಿಧಾನ ಕೊಟ್ಟಿದ್ದು, ಕಾರ್ಖಾನೆ ಕಟ್ಟಿದ್ದು ಕಾಂಗ್ರೆಸ್ ಪಕ್ಷ. ನಾವು ಈ ಯೋಜನೆ ಕೊಟ್ಟಾಗ ಯಾವುದೇ ನಿರ್ದಿಷ್ಟ ಜಾತಿ, ಧರ್ಮದವರಿಗೆ ಮಾತ್ರ ನೀಡಿಲ್ಲ. ಎಲ್ಲ ಧರ್ಮದವರಿಗೆ ನೀಡಿದ್ದೇವೆ.

    ಯಡಿಯೂರಪ್ಪನವರೇ ನೀವು ಮುಖ್ಯಮಂತ್ರಿ ಆಗಿದ್ರಿ. ಬೊಮ್ಮಾಯಿ ಅವರೇ ನೀವೂ ಮುಖ್ಯಮಂತ್ರಿಗಳಾಗಿದ್ದೀರಿ. ನೀವು ನುಡಿದಂತೆ ನಡೆಯಲು ಆಗಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ಹೇಳಿದ್ದರು, ಯಾರಿಗಾದರೂ ಆದಾಯ ಡಬಲ್ ಆಯಿತಾ? ಬೆಂಬಲ ಬೆಲೆ ಸಿಕ್ಕಿತಾ? ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಸತ್ತವರಿಗೆ ಪರಿಹಾರ ಸಿಗಲಿಲ್ಲ. ಬಿಜೆಪಿ ಸರ್ಕಾರ ಬಂದರೆ ನಿಮ್ಮ ಖಾತೆಗೆ ಕಪ್ಪು ಹಣತಂದು 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಯಾರ ಖಾತೆಗಾದರೂ ಹಣ ಬಂತಾ? ಇಲ್ಲ. ಅಚ್ಛೇದಿನ ಕೊಡುತ್ತೇವೆ ಎಂದರು. ಅಚ್ಛೇದಿನ ಬಂತಾ? ಇಲ್ಲ. ನೀವು ಮತ್ತೆ ಜನರ ಬಳಿ ಮತ ಕೇಳುವ ಶಕ್ತಿ ಇದೆಯಾ? ಎಂದು ಪ್ರಶ್ನಿಸಿದರು.

    ಈ ಭ್ರಷ್ಟ ಸರ್ಕಾರ ಕಿತ್ತೊಗೆಯಬೇಕು. ಈ ಸರ್ಕಾರಕ್ಕೆ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿಯನ್ನು ನಾವು ನೀಡಲಿಲ್ಲ. ನಿಮ್ಮ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೇ ನಿಮ್ಮ ಸರ್ಕಾರ ಬೋಗಸ್ ಟೆಂಡರ್ ಕರೆದು 22 ಸಾವಿರ ಕೋಟಿ ನೀರಾವರಿ ಇಲಾಖೆ ಅಕ್ರಮ ಮಾಡಿದೆ ಎಂದು ಹೇಳಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಟೆಂಡರ್ ಗಳನ್ನು ರದ್ದು ಮಾಡುತ್ತೇವೆ. ಚುನಾವಣೆಗೆ ಹಣ ವಸೂಲಿ ಮಾಡಲು ಈ ಟೆಂಡರ್ ಕರೆಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ. ಈ ಸರ್ಕಾರದಲ್ಲಿ 40% ಕಮಿಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಳಿದ್ದಾರೆ. ಬಿಜೆಪಿಯವರಿಗೆ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲ. ನಮಗೆ ಬಹುಮತ ಬಾರದಿದ್ದರೂ ಅಧಿಕಾರ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಹೇಳುತ್ತಾನೆ. ನಾವ್ಯಾರೂ ಕಡಲೇಕಾಯಿ ತಿನ್ನುತ್ತಾ ಕೂತಿಲ್ಲ ಎಂದರು.

    ಕಾಂಗ್ರೆಸ್ ಪಕ್ಷ 165 ಭರವಸೆ ನೀಡಿ ಅದರಲ್ಲಿ 159 ಅನ್ನು ಈಡೇರಿಸಿದೆ. ರಾಜ್ಯದ ಬಡವರು ಹಸಿವಿನಿಂದ ಇರಬಾರದು ಎಂದು ಅನೇಕ ಕಾರ್ಯಕ್ರಮ ನೀಡಿದ್ದೇವೆ. ನರೇಗಾ ಕಾರ್ಯಕ್ರಮದ ಮೂಲಕ ಪ್ರತಿ ಪಂಚಾಯ್ತಿಗೆ 2-3 ಕೋಟಿ ಅನುದಾನ ಸಿಗುವಂತೆ ಮಾಡಿದ್ದು ಕಾಂಗ್ರೆಸ್. ಇಂತಹ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಆಹಾರ ಭದ್ರತೆ ಕಾಯ್ದೆ ಮೂಲಕ ಅಕ್ಕಿ ನೀಡಿತ್ತು. ಸಿದ್ದರಾಮಯ್ಯ ಅವರ ಸರ್ಕಾರ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿತು. ನಂತರ ಇದನ್ನು 7 ಕೆ.ಜಿ.ಗೆ ಏರಿಕೆ ಮಾಡಿದೆವು. ಈ ಸರ್ಕಾರ ಈಗ 7 ರಿಂದ 5 ಕೆ.ಜಿಗೆ ಇಳಿಸಿದೆ. ನಾನು ಹಾಗೂ ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದೆವೆ. ಮುಂದೆ ನಾವು 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ.

    ಈ ಡಬಲ್ ಇಂಜಿನ್ ಸರ್ಕಾರ ನಿಮ್ಮ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಹೇಳಿತ್ತು, ಆದರೆ ಮಾಡಿತಾ? ರಸಗೊಬ್ಬರ ಕಡಿಮೆ ಮಾಡಿ, ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರು. ಅದು ಆಯಿತಾ? ಎಂದರು.

    ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಜನರ ಕಷ್ಟಕ್ಕೆ ಸ್ಪಂದಿಸಲು ಎರಡು ಗ್ಯಾರಂಟಿ ಯೋಜನೆ ಪ್ರಕಟಿಸಿದ್ದೇವೆ. ನಿಮಗೆ 200 ಯುನಿಟ್ ವಿದ್ಯುತ್ ಉಚಿತ, 2000 ರು ಪ್ರತಿ ಕುಟುಂಬದ ಯಜಮಾನಿಗೆ ಖಚಿತ ಅನ್ನೋದು ನಮ್ಮ ಘೋಷಣೆ. ಎರಡೂ ಸೇರಿ ವರ್ಷಕ್ಕೆ 42 ಸಾವಿರ ಪ್ರತಿ ಕುಟುಂಬಕ್ಕೆ ನೆರವು ನೀಡುತ್ತೇವೆ. 5 ವರ್ಷಕ್ಕೆ 2 ಲಕ್ಷ ರೂಪಾಯಿ. ಇದು ನಾನು ಮತ್ತು ಸಿದ್ದರಾಮಯ್ಯ ಇಬ್ಬರು ಸಹಿ ಹಾಕಿರುವ ಗ್ಯಾರಂಟಿ ಯೋಜನೆ ಬಿಜೆಪಿಯವರು ಇಂತಹ ಯಾವುದಾದರೂ ಕಾರ್ಯಕ್ರಮ ಕೊಟ್ಟಿದ್ದಾರಾ? ನಮ್ಮ ಈ ಯೋಜನೆಗಳನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು. ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತದೆ. ಜೂನ್ ತಿಂಗಳಲ್ಲಿ ನಿಮ್ಮ ಮನೆಯೊಡತಿ ಖಾತೆಗೆ 2 ಸಾವಿರ ಹಾಗೂ ನಿಮ್ಮ ಮನೆಗೆ ಉಚಿತ ವಿದ್ಯುತ್ ಬರಲಿದೆ.

    ಶ್ರೀರಾಮುಲು ಅಣ್ಣಾ ದಿನಾ ನೀನು ಟೂರಿಂಗ್ ಟಾಕೀಸ್ ಮಾಡುತ್ತಿದ್ದೀಯಾ. ನಿನಗೆ ನುಡಿದಂತೆ ನಡೆಯಲು ಆಗಲಿಲ್ಲ. ಮುಂದೆ ನಮ್ಮ ನಾಯಕರು ನಿಮ್ಮ (ಜನರ) ಬೆಂಬಲದಿಂದ ವಿಧಾನಸೌಧಕ್ಕೆ ಹೋಗಬೇಕು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನೀವು ನನ್ನನ್ನು ವಿಧಾನಸೌಧದ ಮೆಟ್ಟಿಲಿಗೆ ಹಾಕುವ ಕಲ್ಲಾದರೂ ಮಾಡಿಕೊಳ್ಳಿ, ದೇವಾಲಯದ ಕಂಬವಾದರೂ ಮಾಡಿಕೊಳ್ಳಿ ಪೂಜಿಸುವ ವಿಗ್ರಹವನ್ನಾದರೂ ಮಾಡಿಕೊಳ್ಳಿ. ನಿಮ್ಮ ಸೇವೆಗೆ ನಾನು ಹಾಗೂ ಕಾಂಗ್ರೆಸ್ ಬದ್ಧ ಎಂದು ತಿಳಿಸಿದರು.

    ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಆಹ್ವಾನ

    ಸಿದ್ದರಾಮಯ್ಯ ಸರ್ಕಾರ 165 ಭರವಸೆ ನೀಡಿ, 159 ಈಡೇರಿಸಿತ್ತು, ಈ ಬಿಜೆಪಿ ಸರ್ಕಾರ 600 ನೀಡಿ, 50 ಮಾತ್ರ ಈಡೇರಿಸಿದೆ – ಡಿಕೆಶಿ ಗುಡುಗು

    BIGG NEWS : ಲಂಚ ಪಡೆಯುತ್ತಿದ್ದ ‘ಅಂಬೇಡ್ಕರ್ ಅಭಿವೃದ್ಧಿ ನಿಗಮ’ದ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ


    best web service company
    Share. Facebook Twitter LinkedIn WhatsApp Email

    Related Posts

    siddaramaiah 1

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    April 02, 7:47 am

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am
    Recent News
    siddaramaiah 1

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    April 02, 7:47 am

    BIG NEWS : ಮೆಕ್ಸಿಕೋದಲ್ಲಿ ಪ್ಯಾರಾಚೂಟ್‌ಗೆ ತಗುಲಿದ ಬೆಂಕಿ; ಮೇಲಿಂದ ಜಿಗಿದು ಇಬ್ಬರು ಸಾವು | WATCH VIDEO

    April 02, 7:41 am

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BREAKING NEWS : ಬಿಹಾರದಲ್ಲಿ ಮುಂದುವರೆದ ಹಿಂಸಾಚಾರ: ಬಾಂಬ್ ಸ್ಫೋಟಗೊಂಡು ಐವರಿಗೆ ಗಾಯ | Bomb Blast In Bihar

    April 02, 7:21 am
    State News
    siddaramaiah 1 KARNATAKA

    BIGG NEWS : ಕೋಲಾರದಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ ಕೂಗಿದ ಕಾರ್ಯಕರ್ತರು

    By kannadanewsliveApril 02, 7:47 am0

    ಕೋಲಾರ : ಕೋಲಾರದಲ್ಲಿ ಶನಿವಾರ ನಡೆದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ ಎಂಬ…

    ಮನೆಯಲ್ಲಿ ಪದೇ ಪದೇ ಹಣಕಾಸಿನ ಸಮಸ್ಯೆ ಎದುರಾಗುತ್ತಿದ್ದರೆ ಪವಿತ್ರವಾದ ಸಾಲಿಗ್ರಾಮವನ್ನು ಇಟ್ಟು ಪೂಜೆ ಮಾಡಿ ನೋಡಿ!

    April 02, 7:29 am

    BIGG NEWS : ಬಿಸಿಲಿನ ತಾಪಮಾನ ಹೆಚ್ಚಳ : ಸಾರ್ವಜನಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

    April 02, 7:14 am

    BIGG NEWS : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಫೋಟೋ ಶೂಟ್ ಮಾಡುವಾಗ ಮೂವರು ವಿದ್ಯಾರ್ಥಿಗಳು ನೀರುಪಾಲು

    April 02, 6:54 am

    kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

    Quick Links
    • State
    • Karnataka
    • India
    • World
    • Sports
    • Film
    • Lifestyle
    • Business
    • Jobs
    • Corona Virus
    • Automobile
    contact us

    kannadanewsnow@gmail.com

    FOLLOW US

    breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

    • Home
    • Lifestyle
    • Buy Now
    Copyright © 2023 | All Right Reserved | kannadanewsnow.com
    Digital Partner Blueline Computers

    Type above and press Enter to search. Press Esc to cancel.