ಬೆಂಗಳೂರು: ನಾಡದ್ರೋಹಿ ಸಚಿವ ಉಮೇಶ್ ಕತ್ತಿ ಸಂಪುಟದಲ್ಲಿರಲು ಯಾವ ಅರ್ಹತೆಯೂ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ತಮ್ಮ ಮಾತೃಭಾಷೆ, ಈ ನೆಲದ ಅಸ್ಮಿತೆ, ಏಕೀಕರಣದ ಚಳವಳಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೌರವವಿದ್ದರೆ ಸಚಿವ ಉಮೇಶ್ ಕತ್ತಿಯವರನ್ನು ( Minister Umesh Katti ) ಕೂಡಲೇ ಸಂಪುಟದಿಂದ ವಜಾ ಮಾಡಲಿ. ಇಲ್ಲವೇ ತಾವೂ ನಾಡದ್ರೋಹಿ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂಬುದಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ( Dinesh Gundu Rao ) ಗುಡುಗಿದ್ದಾರೆ.
4
ನಾಡದ್ರೋಹಿ ಸಚಿವ ಉಮೇಶ್ ಕತ್ತಿ ಸಂಪುಟದಲ್ಲಿರಲು ಯಾವ ಅರ್ಹತೆಯೂ ಇಲ್ಲ.@CMofKarnataka ಬೊಮ್ಮಾಯಿಯವರಿಗೆ ತಮ್ಮ ಮಾತೃಭಾಷೆ, ಈ ನೆಲದ ಅಸ್ಮಿತೆ, ಏಕೀಕರಣದ ಚಳವಳಿಯ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಗೌರವವಿದ್ದರೆ ಸಚಿವ ಉಮೇಶ್ ಕತ್ತಿಯವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಲಿ.
ಇಲ್ಲವೇ ತಾವೂ ನಾಡದ್ರೋಹಿ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 23, 2022
ಈ ಬಗ್ಗೆ ಟ್ವಿಟ್ ( Twitter ) ಮಾಡಿರುವ ಅವರು, ರಾಜ್ಯ ಒಡೆಯಲು MES ಪುಂಡರು ತುದಿಗಾಲಲ್ಲಿ ನಿಂತಿದ್ದಾರೆ. ಬೆಳಗಾವಿ MES ಪುಂಡರ ಆಪರೇಟಿಂಗ್ ಸೆಂಟರ್. ಉಮೇಶ್ ಕತ್ತಿ ಇಂತಹ ಸೂಕ್ಷ್ಮ ಪ್ರದೇಶ ಬೆಳಗಾವಿಯಲ್ಲೇ ರಾಜ್ಯ ಒಡೆಯುವ ಮಾತಾನಾಡಿದ್ಯಾಕೆ? ಉಮೇಶ್ ಕತ್ತಿಯವರು MES ನವರ ಜೊತೆ ಗುಪ್ತ ವಿವಾಹ ಮಾಡಿಕೊಂಡಿದ್ದಾರೆಯೇ? MES ಜೊತೆಗಿನ ಅಕ್ರಮ ಸಂಬಂಧವನ್ನು ಸಕ್ರಮಗೊಳಿಸಲು ಈ ಹೇಳಿಕೆಯೆ? ಎಂದು ಪ್ರಶ್ನಿಸಿದ್ದಾರೆ.
3
ರಾಜ್ಯ ಒಡೆಯಲು MES ಪುಂಡರು ತುದಿಗಾಲಲ್ಲಿ ನಿಂತಿದ್ದಾರೆ.
ಬೆಳಗಾವಿ MES ಪುಂಡರ ಆಪರೇಟಿಂಗ್ ಸೆಂಟರ್.
ಉಮೇಶ್ ಕತ್ತಿ ಇಂತಹ ಸೂಕ್ಷ್ಮ ಪ್ರದೇಶ ಬೆಳಗಾವಿಯಲ್ಲೇ ರಾಜ್ಯ ಒಡೆಯುವ ಮಾತಾನಾಡಿದ್ಯಾಕೆ?
ಉಮೇಶ್ ಕತ್ತಿಯವರು MES ನವರ ಜೊತೆ ಗುಪ್ತ ವಿವಾಹ ಮಾಡಿಕೊಂಡಿದ್ದಾರೆಯೇ?
MES ಜೊತೆಗಿನ ಅಕ್ರಮ ಸಂಬಂಧವನ್ನು ಸಕ್ರಮಗೊಳಿಸಲು ಈ ಹೇಳಿಕೆಯೆ?— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 23, 2022
ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ ಮತ್ತೇನು? ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ. ನಮ್ಮಲ್ಲಿ ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ. ತಾಯಿನುಡಿ ಕನ್ನಡ ಮಾತಾಡುವವರೆಲ್ಲಾ ಕನ್ನಡಿಗರೇ, ಇಲ್ಲೇ ಹುಟ್ಟಿ ಬಾಳುವವರೆಲ್ಲಾ ಕನ್ನಡಿಗರೇ ಎಂದಿದ್ದಾರೆ.
1
ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ ಮತ್ತೇನು?
ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ.
ನಮ್ಮಲ್ಲಿ ಉತ್ತರ ಕರ್ನಾಟಕ-ದಕ್ಷಿಣ ಕರ್ನಾಟಕ ಎಂಬ ಬೇಧವಿಲ್ಲ.
ತಾಯಿನುಡಿ ಕನ್ನಡ ಮಾತಾಡುವವರೆಲ್ಲಾ ಕನ್ನಡಿಗರೇ, ಇಲ್ಲೇ ಹುಟ್ಟಿ ಬಾಳುವವರೆಲ್ಲಾ ಕನ್ನಡಿಗರೇ— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 23, 2022
ಉಮೇಶ್ ಕತ್ತಿಯವರು ಪ್ರತ್ಯೇಕ ರಾಜ್ಯದ ಕೂಗು ಹಬ್ಬಿಸುತ್ತಿರುವ ಹಿಂದಿನ ಉದ್ದೇಶವೇನು? ಪ್ರತ್ಯೇಕ ರಾಜ್ಯವಾದರೆ ಹಾಳೂರಿಗೆ ಉಳಿದವನೆ ಗೌಡ ಎಂಬಂತೆ ಗೌಡಿಕೆ ಮೆರೆಯುವ ಹುನ್ನಾರವೇ? ನಿಜವಾದ ಕನ್ನಡಿಗರ‌್ಯಾರು ಕರ್ನಾಟಕ ಇಬ್ಭಾಗವಾಗುವುದನ್ನು ಬಯಸುವುದಿಲ್ಲ. ಕತ್ತಿಯವರು ತಲೆಹರಟೆ ಮಾಡುವುದನ್ನು ಬಿಟ್ಟು ಏಕೀಕರಣದ ಹೋರಾಟದ ಹಿನ್ನೆಲೆ ತಿಳಿಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
2
ಉಮೇಶ್ ಕತ್ತಿಯವರು ಪ್ರತ್ಯೇಕ ರಾಜ್ಯದ ಕೂಗು ಹಬ್ಬಿಸುತ್ತಿರುವ ಹಿಂದಿನ ಉದ್ದೇಶವೇನು?
ಪ್ರತ್ಯೇಕ ರಾಜ್ಯವಾದರೆ ಹಾಳೂರಿಗೆ ಉಳಿದವನೆ ಗೌಡ ಎಂಬಂತೆ ಗೌಡಿಕೆ ಮೆರೆಯುವ ಹುನ್ನಾರವೇ?
ನಿಜವಾದ ಕನ್ನಡಿಗರ‌್ಯಾರು ಕರ್ನಾಟಕ ಇಬ್ಭಾಗವಾಗುವುದನ್ನು ಬಯಸುವುದಿಲ್ಲ. ಕತ್ತಿಯವರು ತಲೆಹರಟೆ ಮಾಡುವುದನ್ನು ಬಿಟ್ಟು ಏಕೀಕರಣದ ಹೋರಾಟದ ಹಿನ್ನೆಲೆ ತಿಳಿಯಲಿ.— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 23, 2022