ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಸಾರಿಗೆ ಸಚಿವ ಬಿ ಶ್ರೀರಾಮುಲು ಸ್ಪರ್ಧಿಸುವ ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಭಿನ್ನಮತ ಶುರುವಾಗಿದೆ.
ಬಿಜೆಪಿ ಮುಖಂಡರೇ ಶ್ರೀರಾಮುಲು ವಿರುದ್ಧ ತಿರುಗಿಬಿದ್ದಾರೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಬಿಜೆಪಿ ಸೇರ್ಪಡೆ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆಲ ದಿನಗಳ ಹಿಂದೆ ಶ್ರೀರಾಮುಲು ನೇತೃತ್ವದಲ್ಲಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಎಸ್.ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ಎಂದು ಬಿಂಬಿಸಿರುವುದಕ್ಕೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ತಿಪ್ಪೇಸ್ವಾಮಿ ಅಭ್ಯರ್ಥಿ ಎಂಬಂತೆ ಶೋ ಕೊಟ್ಟಿದ್ದಾರೆ. ಜೊತೆಗೆ ಎಸ್.ತಿಪ್ಪೇಸ್ವಾಮಿಗೆ ಟಿಕೆಟ್ ನೀಡದಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕಾಲುವೆಹಳ್ಳಿಯಲ್ಲಿ ನಡೆದ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಜಯಪಾಲಯ್ಯ ಬರ್ತಡೇ ಕಾರ್ಯಕ್ರಮ ವೇಳೆ ಶ್ರೀರಾಮುಲು ವಿರುದ್ಧ ಭಿನ್ನಮತ ಸ್ಫೋಟವಾಗಿದೆ.
ಮತದಾರರನ್ನು ಸೆಳೆಯಲು ಕೆಆರ್ಪಿಪಿ ಪಕ್ಷದಿಂದ ಗಿಫ್ಟ್ ಪಾಲಿಟಿಕ್ಸ್
ಇತ್ತ, ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ಹೀಗಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ , ಜೆಡಿಎಸ್ ಮೂರು ಪಕ್ಷಗಳ ಚುನಾವಣೆ ಪ್ರಚಾರದ ಕಾವು ಹೆಚ್ಚಾಗಿದೆ. ಇದೀಗ ಚುನಾವಣೆ ಹತ್ರ ಬರುತ್ತಿದ್ದಂತೆ ಕೆಲ ಜಿಲ್ಲೆಗಳಲ್ಲಿ ಮತದಾರರನ್ನು ಸೆಳೆಯಲು ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ.ಈಗಾಗಲೇ ಮತದಾರರಿಗೆ ಕುಕ್ಕರ್, ಸೀರೆ, ಹಣವನ್ನು ಗಿಫ್ಟ್ ಆಗಿ ನೀಡಿದಾರೆ. ಇದೀಗಕೆಆರ್ಪಿಪಿ ಪಕ್ಷದಿಂದ ಮಹಿಳೆಯರಿಗೆ ಸೀರೆ, ಆಟೋ ಚಾಲಕರಿಗೆ ವಿಮಾ ಭಾಗ್ಯ ನೀಡುತ್ತಿದ್ದಾರೆ.
ಹೌದು ಬಳ್ಳಾರಿಯಲ್ಲಿ ಮತದಾರರನ್ನು ಓಲೈಸುವ ಸಲುವಾಗಿ ಗಿಫ್ಟ್ ಪಾಲಿಟಿಕ್ಸ್ ಶುರುಮಾಡಿಕೊಂಡಿದ್ದಾರೆ. ಕುಕ್ಕರ್, ಮನೆ ಪಟ್ಟಾ, ಸೀರೆ, ಇನ್ಸೂರೆನ್ಸ್ ಪಾಲಸಿಗಳನ್ನ ವಿತರಣೆ ಮಾಡಿದ್ದಾರೆ.ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿರುವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್ಪಿಪಿ ಪಕ್ಷ ಇದೀಗ ಮತದಾರರನ್ನ ಸೆಳೆಯಲು ಹೊಸ ತಂತ್ರವನ್ನು ರೂಪಿಸಿದ್ದಾರೆ.
BIG NEWS : ದಾವಣಗೆರೆ ಜಿಲ್ಲೆಯ ʼಚನ್ನಗಿರಿ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆʼ : ರೈತರಿಗೆ ಸಂಕಷ್ಟ, ಕಂಗಾಲು