ಕೆಎನ್​ಎನ್​ ಡಿಜಿಡಲ್​ ಡೆಸ್ಕ್​ : ಬಾಳಿವುಡ್​ ನಟ ರಣವೀರ್​ ಸಿಂಗ್​ ಅವರ ನಗ್ನ ಫೋಟೋಶೂಟ್​ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.  ಇದರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೆ ಮಹಿಳೆಯರ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ನಗ್ನವಾಗಿ ಫೋಟೋಶೂಟ್​ ಮಾಡಿಸಿದ್ದು ನಟ ರಣವೀರ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ನಗ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಧಕ್ಕೆತರುವ ಪ್ರಯತ್ನ ಎಂದು ಎಫ್​ಐಆರ್​ ದಾಖಲಿಸುವಂತೆ ಕೋರಿ ಮುಂಬೈ ಪೊಲೀಸರಿಗೆ ಸೋಮವಾರ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಪೂರ್ವ ಮುಂಬೈ ಉಪನಗರದಲ್ಲಿರುವ ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಯೊಬ್ಬರು ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರಿನ ಅರ್ಜಿ ಸಲ್ಲಿಸಿದ್ದಾರೆ. ನಟ ತನ್ನ ಫೋಟೋಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಮತ್ತು ಅವರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಣವೀರ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 509, 292, ಮತ್ತು 294 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನ ವಿರುದ್ಧ ಮಂಗಳವಾರ ಚೆಂಬೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೇಪರ್ ಮ್ಯಾಗಜೀನ್​ಗಾಗಿ ರಣವೀರ್ ಸಿಂಗ್ ನಗ್ನ ಫೋಟ ತೆಗೆಯಲಾಗಿದೆ. ರಣವೀರ್ ಸಿಂಗ್ ಅಮೇರಿಕನ್ ಪಾಪ್ ಸಂಸ್ಕೃತಿಯ ಐಕಾನ್ ಎಂದು ಕರೆಯಲ್ಪಡುವ ಹಿರಿಯ ನಟ ಬರ್ಟ್ ರೆನಾಲ್ಡ್ಸ್ ಅವರಿಗೆ ಗೌರವ ಸಲ್ಲಿಸಿದ್ದರು.

ರಣವೀರ್ ಬೆತ್ತಲೆ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್​ ಮಾಡಿದ್ದಾರೆ. ಅಲ್ಲದೇ, ಈ ಫೋಟೋವನ್ನು ಬಳಸಿಕೊಂಡು ಹಲವಾರು ಟ್ರೋಲ್​ ಹಾಗೂ ಮೀಮ್​ಗಳನ್ನು ಸಹ ಮಾಡಲಾಗಿತ್ತು.

Share.
Exit mobile version