ಬೆಂಗಳೂರು : ವಿಡಿಯೋ ಮಾಡು ಅಂತ ಪ್ರಜ್ವಲ್ ರೇವಣ್ಣಂಗೆ ಡಿ.ಕೆ. ಶಿವಕುಮಾರ್ ಫೋನ್ ಮಾಡಿ ಹೇಳಿದ್ರಾ..? ಇಲ್ಲ, ನಾವು ಅವನ ರೂಮಲ್ಲಿ ನಿಂತು ವಿಡಿಯೋ ಮಾಡಿದ್ವಾ? ಎಂದು ಶಾಸಕ ಹೆಚ್.‌ ಸಿ. ಬಾಲಕೃಷ್ಣ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ತಾತನಿಗೆ (ದೇವೇಗೌಡ) ತಕ್ಕ ಮೊಮ್ಮಗ ಆಗಲಿಲ್ಲ. ತಂದೆಗೆ ತಕ್ಕ ಮಗ ಆದ. ಎಷ್ಟೇ ಆಗಲಿ ನೂಲಿನಂತೆ ಸೀರೆಯಲ್ಲವೇ..? ಕುಮಾರಸ್ವಾಮಿ ತಲೆ ಕೆಟ್ಟವರಂತೆ ಮಾತಾಡುತ್ತಿದ್ದಾರೆ. ಅವರು ಯಾವಾಗ ತಾನೇ ಸತ್ಯ ಮಾತಾಡಿದ್ದಾರೆ? ಒಂದೇ ಒಂದು ಉದಾಹರಣೆ ಕೊಡಿ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ವಿರುದ್ಧ ಮಾತಾಡುವುದೇ ಅವರ ಕೆಲಸ ಎಂದು ಹೇಳಿದ್ದಾರೆ.

ತಪ್ಪು ಮಾಡಿದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದವನು,ಪೆನ್ ಡ್ರೈವ್ ಹಿಡಿದುಕೊಂಡು ತಿರುಗಾಡಿದವನು, ಹೊರಬಿಟ್ಟವನು ದೇವರಾಜೇಗೌಡ ಬಿಜೆಪಿಯವನು,ಇಬ್ಬರೂ ಸೇರಿ ಗೂಬೆ ಹಿಡಿದು ತಂದು ಕೂರಿಸುತ್ತಿರುವುದು ಕಾಂಗ್ರೆಸ್ ಮೇಲೆ, ಡಿ. ಕೆ ಶಿವಕುಮಾರ್ ಅವರ ಮೇಲೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share.
Exit mobile version