ಬೆಂಗಳೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಿಬ್ಬಂದಿಗಳಿಲ್ಲದೇ, ಜಿಲ್ಲಾಸ್ಪತ್ರೆಗಳಲ್ಲಿ ರಾಜ್ಯಾಧ್ಯಂತ ರೋಗಿಗಳು, ಸಂಬಂಧಿಕರು ಪರದಾಡುತ್ತಿರುವಂತ ಪರಿಸ್ಥಿತಿ ಕಂಡು ಬಂದಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆ ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರು ಹಾಜರಾಗಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಬೇಡಿಕೆ ಈಡೇರಿಸುವಂತೆ ಫ್ರೀಡ ಪಾರ್ಕ್ ನಲ್ಲಿ ಧರಣಿ, ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
BIG NEWS: ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಾಗ, ಅದು ದೇಶದ ತೆರಿಗೆದಾರರಿಗೆ ನೀಡುವ ಗೌರವ – ಪ್ರಧಾನಿ ಮೋದಿ
ಈ ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸಿಗದೇ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಡಯಾಲಿಸಿಸ್ ಮಾಡುವವರು ಇಲ್ಲದೇ ರೋಗಿಗಳು, ಸಂಬಂಧಿಕರು ತೀವ್ರ ಕಷ್ಟ ಎದುರಿಸುವಂತೆ ಆಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಲು ಸಿಬ್ಬಂದಿಗಳು ಇಲ್ಲದೇ, ರೋಗಿಗಳು ಬೆಂಗಳೂರಿನತ್ತ ಆಗಮಿಸುತ್ತಿರೋದು ಕಂಡು ಬಂದಿದೆ.
ಚಿತ್ರದುರ್ಗ: ‘ಕಾರ್ಯನಿರತ ಪತ್ರಕರ್ತ’ರಿಗೆ ನಿವೇಶನಮಂಜೂರು ಮಾಡುವಂತೆ ‘ಜಿಲ್ಲಾಧಿಕಾರಿ’ಗೆ ಮನವಿ ಸಲ್ಲಿಕೆ
ಡಯಾಲಿಸಿಸ್ ಮಾಡಿಸಿಕೊಳ್ಳಲು ಆಗದಂತ ಅನೇಕ ರೋಗಿಗಳು ಜಿಲ್ಲಾಸ್ಪತ್ರೆಗಳ ಮುಂದೆಯೇ ನರಳಾಡುತ್ತಿದ್ದಾರೆ. ಪ್ರತಿಭಟನಾ ನಿರತ ಸಿಬ್ಬಂದಿಗಳ ವಿರುದ್ಧ ಹಿಡಿಶಾಪ ಹಾಕುತ್ತಿರೋದು ಕಂಡು ಬಂದಿದೆ. ಜೊತೆಗೆ ರಾಜ್ಯ ಸರ್ಕಾರ ಆದಷ್ಟು ಬೇಗ ಡಯಾಲಿಸಿಸ್ ಸಿಬ್ಬಂದಿಗಳ ಬೇಡಿಕೆ ಈಡೇರಿಸಿ, ಮತ್ತೆ ಕರ್ತವ್ಯಕ್ಕೆ ಮರಳುವಂತೆ ಮಾಡಲಿ ಎಂಬುದಾಗಿ ಹೇಳಿದ್ದಾರೆ.