ಸುಭಾಷಿತ :

Monday, February 24 , 2020 3:00 PM

‘ಮಧುಮೇಹಿ’ಗಳೇ ಈ ಆಹಾರ ಕ್ರಮ ಅನುಸರಿಸಿ, ‘ಡಯಾಬಿಟೀಸ್’ ದೂರ ಓಡಿಸಿ.!


Wednesday, January 22nd, 2020 6:25 pm

ಸ್ಪೆಷಲ್ ಡೆಸ್ಕ್ : ಇಂದು ಮಧುಮೇಹ ವಿಶ್ವದಲ್ಲಿಯೇ ಅನೇಕ ಜನರನ್ನು ಕಾಡುತ್ತಿರುವ ರೋಗವಾಗಿದೆ. ಇಂತಹ ಮಧುಮೇಹ ನಿಯಂತ್ರಣಕ್ಕೆ ಅನೇಕ ಔಷಧಿಗಳು ಬಂದಿದ್ದರೂ ಸಹ, ನೀವು ಅನುಸರಿಸುವ ಆಹಾರ ಕ್ರಮದಿಂದಾಗಿಯೂ ಡಯಾಬಿಟೀಸ್ ಖಾಯಿಲೆಯನ್ನು ತಾವೇ ಸ್ವಯಂ ನಿಯಂತ್ರಿಸಬಹುದಾಗಿದೆ.

ಹೌದು.. ನಾವು ಹೇಳುವ ಈ ಆಹಾರ ಕ್ರಮಗಳನ್ನು ಅನುಸರಿದ್ರೇ, ಖಂಡಿತವಾಗಿಯೂ ಸಕ್ಕರೆ ಖಾಯಿಲೆಯನ್ನು ಓಡಿಸಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಈ ಮೂಲಕ ಮಧುಮೇಹದಿಂದ ದೂರ ಉಳಿಯಬಹುದಾಗಿದೆ. ಹಾಗಿದ್ದರೇ ಈ ಕೆಳಗಿನ ಆಹಾರ ಕ್ರಮ ಅನುಸರಿಸಿ.

ಡಯಾಬಿಟೀಸ್/ಮಧುಮೇಹ/ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ ಆಹಾರ ಪದ್ದತಿ ಅನುಸರಿಸಿ

ಸದಾ ಉಪಯೋಗಿಸಬಹುದಾದ ಪದಾರ್ಥಗಳು

 • ಸೂಪ್ (ತರಕಾರಿ/ಟೋಮ್ಯಾಟೋ/ಸೊಪ್ಪು)
 • ಮಜ್ಜಿಗೆ(ಕೆನೆ ತೆಗೆದಿರಬೇಕು)
 • ಮೊಸರು
 • ಸೊಪ್ಪು ಮತ್ತು ಎಲ್ಲಾ ತರದ ಹಸಿ ತರಕಾರಿಗಳು

ಮಧುಮೇಹಿಗಳು ಮಿತವಾಗಿ ಸೇವಿಸಬಹುದಾದ ಆಹಾರ ಪದಾರ್ಥಗಳು

 • ದವಸ, ಧಾನ್ಯ, ಮೈದಾ, ರವೆ, ಸಜ್ಜೆ, ರಾಗಿ, ನವಣೆ, ಸಾಮಿ ಹೆಚ್ಚು ಬಳಸಬಹುದು
 • ನೇರಳೆ, ಮರಸೇಬು, ಕರಬೂಜ
 • ಬೀಚರೋಟ್, ಗಜ್ಜರಿ, ಸೌತೆಕಾಯಿ, ಹಸಿರು ಬಟಾಣಿ, ಈರುಳ್ಳಿ, ಟೊಮ್ಯಾಟೋ, ಹಸಿರು ತರಕಾರಿ
 • ಅಡುಗೆಗೆ ಸಂಸ್ಕರಿಸಿದ ಎಣ್ಣೆಯನ್ನು ಬಳಸಬೇಕು
 • ಹಾಲು ಹಾಗೂ ಮೊಸರು, ಮಜ್ಜಿಗೆ ದಿನಕ್ಕೆ 350-400 ಎಂ ಎಲ್(ಕೆನೆ ತೆಗೆದಿರಬೇಕು)
 • ಮೀನು ಅಥವಾ ಕೋಳಿ (ಚರ್ಮ ತೆಗೆದಿರಬೇಕು) ವಾರಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಬಹುದು
 • ಸೀಬೆ, ಕಲ್ಲಂಗಡಿ, ಮೋಸಿಂ, ಸೇಬು, ಪಪ್ಪಾಯ ಹಣ್ಣುಗಳಲ್ಲಿ ಯಾವುದಾದರೂ ಒಂದು ಹಣ್ಣು ದಿನಕ್ಕೆ ಸುಮಾರು 40 ಗ್ರಾಂ ಸಿಪ್ಪೆ, ತಿರುಳು ಸಮೇತ ತಿನ್ನಬೇಕು)
 • ಮೊಟ್ಟೆಯ ಬಿಳಿ ಭಾಗವನ್ನು ಸದಾ ಉಪಯೋಗಿಸಬಹುದು. ಆದ್ರೇ ಹಳದಿ ಭಾಗವನ್ನು (ಬಂಢಾರವನ್ನು) ಅಪರೂಪಕ್ಕೆ ಉಪಯೋಗಿಸಬೇಕು

ಈ ಆಹಾರ ಪದಾರ್ಥಗಳನ್ನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಬಿಡಬೇಕು

 • ಅತಿಯಾದ ಉಪ್ಪಿನ ಸೇವನೆ, ಅಡುಗೆಗೆ ಕಡಿಮೆ ಉಪ್ಪ ಬಳಸಬೇಕು
 • ಸಕ್ಕರೆ, ಜೇನು, ಬೆಲ್ಲ, ಜಾಮ್ ಮುಂತಾದವುಗಳು
 • ಸಿಹಿ ಪದಾರ್ಥಗಳ ಐಸ್ ಕ್ರೀಮ್
 • ಬೇಕರಿ ಪದಾರ್ಥಗಳು, ಬ್ರೆಡ್, ಬಿಸ್ಕೆಟ್, ಸಮೋಸಾ
 • ತುಪ್ಪ, ಬೆಣ್ಣೆ, ಕೊಬ್ಬರಿ ಎಣ್ಣೆ ಮತ್ತು ವನಸ್ಪತಿಗಳು, ಕರಿದ ಪದಾರ್ಥ, ಹಪ್ಪಳ, ಉಪ್ಪಿನಕಾಯಿ
 • ಆಲೂಗಡ್ಡೆ, ಸುವರ್ಣಗೆಡ್ಡೆ, ಮರಗೆಣಸು, ಸಿಹಿಗೆಣಸು, ಸಿಹಿ ಕುಂಬಳಕಾಯಿ
 • ಬಾಳೆಹಣ್ಣು, ಮಾವಿನಹಣ್ಣು, ದ್ರಾಕ್ಷಿ, ಸಪೋಟಾ, ಸೀತಾಫಲ, ಅನಾನಸ್, ಬೇಲದ ಹಣ್ಣು, ಹಲಸಿನಹಣ್ಣು
 • ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ, ಖರ್ಬೂಜ, ಕಡಲೇ ಬೀಜ
 • ಕೋಲಾ, ಪೆಪ್ಸಿ, ಹಣ್ಣಿನ ರಸ, ಮಿಲ್ಕ್ ಶೇಕ್
 • ಕೃತಕ ಸಕ್ಕರೆ, ತಂಬಾಕು, ಮದ್ಯಪಾನ
 • ಎಳೆನೀರು
 • ಅಡುಗೆಗೆ ಎಣ್ಣೆಯನ್ನು ಮಿತವಾಗಿ ಬಳಸಬೇಕು

ಮಧುಮೇಹಿಗಳು ನೆನಪಿನಲ್ಲಿಡಬೇಕಾದ ಬಹುಮುಖ್ಯ ವಿಚಾರ

 • ಊಟದ ಜೊತೆಗೆ ತರಕಾರಿ ಹಾಗೂ ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ
 • ಊಟದ ಸಮಯವನ್ನು ಸರಿಯಾಗಿ ಪಾಲಿಸಬೇಕು, ಊಟವನ್ನು ತಪ್ಪಿಸಬಾರದು
 • ಉಪವಾಸ ಮಾಡಬಾರದು
 • ಕೃತಕ ಸಕ್ಕರೆಯನ್ನು ಉಪಯೋಗಿಸಬಾರದು
 • ಪ್ರತಿ ದಿನ 40 ನಿಮಿಷ ಹಗುರವಾದ ವ್ಯಾಯಾಮ ಮಾಡಬೇಕು

ಈ ಕುರಿತಂತೆ ನಿಮ್ಮ ಅನುಮಾನ, ಸಮಸ್ಯೆಗಳಿಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ -+91 75689 69372 ಅಥವಾ +91 98864 56808 ಸಂಖ್ಯೆಗೆ ಸಂಪರ್ಕಿಸಿ.

ವರದಿ : ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions