ಸುಭಾಷಿತ :

Wednesday, January 22 , 2020 12:10 PM

ಡಿಕೆ ಶಿವಕುಮಾರ್ ಇಡಿ, ಸಿಬಿಐಗಾಗಲಿ ಹೆದರೋ ಮನುಷ್ಯನೇ ಅಲ್ಲ – ಮಾಜಿ ಸಚಿವ ಧ್ರುವನಾರಾಯಣ್


Friday, November 8th, 2019 1:12 pm

ಮೈಸೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಯಾವುದೇ ಅಕ್ರಮ ಹಣ ಅವ್ಯವಹಾರದಲ್ಲಿ ತೊಡಗಿಲ್ಲ. ಅವರು ಕಾನೂನಿನ ಚೌಕಟ್ಟಿನಲ್ಲಿಯೇ ವ್ಯವಹರಿಸಿದ್ದಾರೆ. ಹೀಗಾಗಿ ಅವರು ಇಡಿ, ಸಿಬಿಐಗೆ ಹೆದರುವ ಮಾತೇ ಇಲ್ಲ. ಅಂತವರೂ ಅಲ್ಲ ಎಂದು ಮಾಜಿ ಸಚಿವ ಧ್ರುವನಾರಾಯಣ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಧ್ರುವನಾರಾಯಣ್, ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಅಣ್ಣ-ತಮ್ಮಂದಿರು ಇಬ್ಬರು ಬಂಡೆಗಳಿದ್ದಂತೆ. ಡಿಕೆ ಶಿವಕುಮಾರ್ ರಿಯಲ್ ಎಸ್ಟೇಟ್ ನಲ್ಲಿ ಸಾಕಷ್ಟು ಬೆಳೆದಿದ್ದಾರೆ. ಯಾವುದೇ ಅವ್ಯವಹಾರ ನಡೆಸದೇ ಕಾನೂನಿನ ಅಡಿಯಲ್ಲಿಯೇ ವ್ಯವಹಾರ ನಡೆಸಿದ್ದಾರೆ. ಹೀಗಾಗಿ ಅವರು ಯಾರಿಗೂ ಹೆದರುವ ಮಾತೇ ಇಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರಿಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಬೇಕು ಎಂಬುದು ಹೈಕಮಾಂಡ್ ವಿಚಾರಕ್ಕೆ ಬಿಟ್ಟದ್ದಾಗಿದೆ. ಈಗಾಗಲೇ ಸಾಕಷ್ಟು ಹೊಡ್ಡಮಟ್ಟದಲ್ಲಿ ಡಿಕೆ ಶಿವಕುಮಾರ್ ಅವರು ಬೆಳೆದಿದ್ದಾರೆ. ಇಂತಹ ಡಿಕೆ ಶಿವಕುಮಾರ್ ಅವರಿಗೆ ಯಾವ ಸ್ಥಾವನ್ನು ನೀಡಬೇಕು ಎಂಬುದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಹೇಳಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions