ಬೆಂಗಳೂರು:ನಟ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿಗಳಿಗೆ ಇಂದು ವಿಶೇಷ ದಿನವಾಗಿದೆ.ಅವರಿಗೆ ಗಂಡು ಮಗುವಾಗಿದ್ದು ಮನೆಯಲ್ಲಿ ಸಂಭ್ರಮ ಹೆಚ್ಚಿದೆ.
ಧ್ರುವ ಸರ್ಜಾ ಹಾಗೂ ಪ್ರೇರಣಾ 2019ರಲ್ಲಿ ಮದುವೆ ಆದರು. 1022 ರಲ್ಲಿ ಅಕ್ಟೋಬರ್ 2ರಂದು ಧ್ರುವ ಸರ್ಜಾ ದಂಪತಿಗಳಿಗೆ ಹೆಣ್ಣು ಮಗು ಜನಿಸಿತು. ಈಗ ಅವರು ಮತ್ತೊಮ್ಮೆ ತಂದೆ ಆಗಿದ್ದಾರೆ. ಈ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.ಮಗುವನ್ನು ನೋಡಲು ಧ್ರುವ ಸರ್ಜಾ ಕುಟುಂಬದವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.
ಧ್ರುವ ಸರ್ಜಾ ಸಧ್ಯ ಮಾರ್ಟಿನ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ.ಎಪಿ ಅರ್ಜುನ್ ನಿರ್ದೇಶನದ ಈ ಚಿತ್ರ ಸರ್ಜಾರ ಮೊದಲ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.ಪ್ರೇಮ್ ರವರ ಹೊಸ ಚಿತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ.