ಅಯೋಧ್ಯೆ : ಇಡೀ ದೇಶವೇ ಕುತೂಹಲದಿಂದ ಎದುರು ನೋಡುತ್ತಿರುವ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಶರವೇಗದಲ್ಲಿ ಸಾಗುತ್ತಿದೆ. ಅಯೋಧ್ಯೆಯಲ್ಲಿ ನಾಗರ ಶೈಲಿಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದರ ಎತ್ತರ ಸುಮಾರು 161 ಅಡಿಯಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವ್ರು ದೇವಾಲಯದ ನಿರ್ಮಾಣಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ನಿಯಮಿತವಾಗಿ ಹಂಚಿಕೊಳ್ಳುತ್ತಾರೆ.
ದೇವಸ್ಥಾನದ ಮೊದಲ ಹಂತದ ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿದೆ. ಇದಲ್ಲದೇ, ದೇವಾಲಯದಲ್ಲಿ 167 ಕಂಬಗಳನ್ನ ಪ್ರತಿಷ್ಠಾಪಿಸಲಾಗುವುದು. ಮೇ ಮತ್ತು ಜೂನ್ ತಿಂಗಳಿನಲ್ಲಿ ಛಾವಣಿ ನಿರ್ಮಾಣವೂ ಆರಂಭವಾಗಲಿದೆ. ಸಧ್ಯ ಸರಯೂ ಹರಿಯದಂತೆ ದೇವಸ್ಥಾನದ ಸುತ್ತ ತಡೆಗೋಡೆ ನಿರ್ಮಿಸಲಾಗುತ್ತಿದೆ.
ದೇವಸ್ಥಾನದ ಆವರಣದಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದ್ದು, ಇವುಗಳೊಂದಿಗೆ ಶ್ರೀರಾಮನ ಜೀವನಾಧಾರಿತ ಪ್ರಸಂಗಗಳನ್ನೂ ಪ್ರದರ್ಶಿಸಲಾಗುವುದು. ಇದು ಭಕ್ತರ ಆಕರ್ಷಣೆಯ ಕೇಂದ್ರವಾಗುವುದು ಖಚಿತ. ಇನ್ನೊಂದು ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
2024ರ ಜನವರಿ ಮೂರನೇ ವಾರದಲ್ಲಿ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನ ಪ್ರಧಾನಿ ಉದ್ಘಾಟಿಸುವ ಸಾಧ್ಯತೆಯಿದೆ ಎಂದು ತೋರುತ್ತದೆ.
BREAKING NEWS : ಐಟಿ ದಿಗ್ಗಜ ‘ವಿಪ್ರೋ’ ಉದ್ಯೋಗಿಗಳಿಗೆ ಬಿಗ್ ಶಾಕ್ ; 120 ನೌಕರರು ವಜಾ |Wipro Layoffs
Rain in Karnataka: ಮಾ.24ರಿಂದ ಈ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಅದಾನಿ ಕುರಿತ ನನ್ನ ನಿಲುವು, ‘ದೆಹಲಿ ಪೊಲೀಸ್ ತನಿಖೆ’ ಮೇಲೆ ಪ್ರಭಾವ ಬೀರೋದಿಲ್ಲ ಅಂತಾ ಭಾವಿಸ್ತೇನೆ ; ರಾಹುಲ್ ಗಾಂಧಿ