ಸುಭಾಷಿತ :

Wednesday, January 29 , 2020 9:34 PM

‘ಶೃಂಗೇರಿ ಶಾರದಾಂಬೆ’ ಸನ್ನಿಧಿಯಲ್ಲಿ ದೇವೇಗೌಡ ದಂಪತಿಯಿಂದ ಚಂಡಿಕಾ ಯಾಗ..!


Thursday, January 16th, 2020 8:19 pm

ಶೃಂಗೇರಿ  :  ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ತಮ್ಮ ಪತ್ನಿ ಚನ್ನಮ್ಮ ಅವರೊಂದಿಗೆ ಗುರುವಾರ ಅವರೊಂದಿಗೆ ಶ್ರೀ ಶಾರದಾ ಪೀಠಕ್ಕೆ ಆಗಮಿಸಿದರು.

ಶಾರದಾಂಬೆ ಸನ್ನಿಧಿಯಲ್ಲಿ ನಾಳೆಯಿಂದ ಸಹಸ್ರ ಚಂಡಿಕಾಯಾಗದ ಸಂಕಲ್ಪ ಕೈಗೊಳ್ಳುವರು. ಜ. 17 ರಿಂದ ನಡೆಯುವ ಹೋಮ, ಹವನವು ಜ. 21ರಂದು ಪೂರ್ಣಗೊಳ್ಳಲಿದೆ. ಜ. 21ರಂದು ನಡೆಯುವ ಹೋಮದ ಪೂರ್ಣಾಹುತಿ ಕಾರ್ಯಕ್ರಮಕ್ಕೆ ಅವರ ಕುಟುಂಬದವರು ಆಗಮಿಸಲಿದ್ದಾರೆ. ದೇವೇಗೌಡರು ಮಠದ ವಸತಿಗೃಹದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಂದು  ಮಠಕ್ಕೆ ಆಗಮಿಸಿದ ಮಾಜಿ ಪ್ರಧಾನಿ ದೇವೇಗೌಡರು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನರಸಿಂಹ ವನದಲ್ಲಿರುವ ಗುರುನಿವಾಸಕ್ಕೆ ಗುರುವಾರ ಸಂಜೆ ತೆರಳಿದ ದೇವೇಗೌಡ ದಂಪತಿ, ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ, ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions