ಕೆಎನ್ ಎನ್ ನ್ಯೂಸ್ ಡೆಸ್ಕ್ : ಈಗಾಗಲೇ ಮಳೆಗಾಲ ಶುರುವಾಗಿದೆ. ಹೀಗಾಗಿ ನವದಂಪತಿಗಳು, ಲವರ್ ಗಳು ಪ್ರವಾಸಿತಾಣಕ್ಕೆ ಹೋಗಲು ಪ್ಲಾನ್ ಮಾಡುತ್ತಿರುತ್ತಾರೆ. ಅಂತವರಿಗೆ ಕೆಲವು ಉತ್ತಮ ಹಾಗೂ ಆಕರ್ಷಣೆಯ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ.
SHOCKING NEWS: ಪನ್ನೀರ್ ಪ್ರಿಯರಿಗೆ ಶಾಕ್; ದಬಾರಿಯಾದ ಪನ್ನೀರ್ ಬೆಲೆ? ಎಷ್ಟಿದೆ ಗೊತ್ತಾ? | Paneer rate hike
ಹೌದು, ಬಿಸಿಲ ಝಳಕ್ಕೆ ಬಸವಳಿದು ಹಣ್ಣಾಗಿ ಉದುರಿದ ಎಲೆಗಳು, ಬಾಡಿದ ಕೊಂಬೆಗಳಿಂದಾಗಿ ಹಚ್ಚ ಹಸಿರಿನ ಸಿರಿಯನ್ನು ಕಳೆದುಕೊಂಡಿದ್ದ ಕಾಡುಗಳೆಲ್ಲಾ ಇದೀಗ ಮಾನ್ಸೂನ್ ಮಳೆಯಿಂದಾಗಿ ಹಸಿರಿನ ಚಿಗುರು ಕಾಣುತ್ತಿವೆ. ಜೊತೆಗೆ ಜಲಪಾತಗಳು ಸಹ ತುಂಬಿ ಹರಿಯುತ್ತಿದೆ. ಹೀಗಾಗಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಹಚ್ಚ ಹಸಿರಿನ ಬೆಟ್ಟಗಳು ಮತ್ತು ಅವುಗಳ ನಡುವೆ ಹರಿಯುವ ಜಲಪಾತಗಳಿಂದ ಹಿಡಿದು ಸಮುದ್ರತೀರದಲ್ಲಿ ಮುತ್ತಿನ ಚಿಪ್ಪಿನವರೆಗೆ ಜೋಡಿಗಳು ಪ್ರೀತಿಯ ಗೀತೆಗಳನ್ನು ಹಾಡಲು ಹಲವು ಸ್ಥಳಗಳಿವೆ.
SHOCKING NEWS: ಪನ್ನೀರ್ ಪ್ರಿಯರಿಗೆ ಶಾಕ್; ದಬಾರಿಯಾದ ಪನ್ನೀರ್ ಬೆಲೆ? ಎಷ್ಟಿದೆ ಗೊತ್ತಾ? | Paneer rate hike
ಶಿಮ್ಲಾ: ಜುಲೈ ತಿಂಗಳಿನಲ್ಲಿ ಶಿಮ್ಲಾಗೆ ಭೇಟಿ ನೀಡಬಹುದು. ಇಲ್ಲಿನ ವಾತಾವರಣ ಸದಾ ಆಹ್ಲಾದಕರವಾಗಿರುತ್ತದೆ. ಸಾಂದರ್ಭಿಕ ತುಂತುರು ಚಳಿಯನ್ನು ಉಂಟುಮಾಡಬಹುದು. ನಿಮ್ಮ ಸಂಗಾತಿಯೊಂದಿಗೆ ಇಲ್ಲಿನ ಮಾಲ್ ರಸ್ತೆಗೆ ಭೇಟಿ ನೀಡುವುದು ವಿಭಿನ್ನ ಅನುಭವವನ್ನು ನೀಡುತ್ತದೆ. ಇಲ್ಲಿ ನೀವು ನಿಮ್ಮ ಸಂಗಾತಿಯ ಭುಜದ ಮೇಲೆ ನಿಮ್ಮ ಕೈಯನ್ನು ಹಾಕಿಕೊಂಡು ನಡೆಯುತ್ತಿದ್ದರೆ ಸಖತ್ ರೋಮ್ಯಾಂಟಿಕ್ ಆಗಿರುತ್ತದೆ.
ಮಹಾಬಲೇಶ್ವರ: ಮಹಾರಾಷ್ಟ್ರದಲ್ಲಿರುವ ಸುಂದರವಾದ ಗಿರಿಧಾಮ ಮಹಾಬಲೇಶ್ವರ. ಜುಲೈನಲ್ಲಿ ನಿಮ್ಮ ಸಂಗಾತಿಯೊಂದಿಗೆ ಪಾದಯಾತ್ರೆ ಮಾಡುವುದು ನಿಮಗೆ ಉತ್ತಮ ಅನುಭವವನ್ನು ನೀಡುತ್ತದೆ. ಮಳೆಗಾಲದಲ್ಲಿ ಇಲ್ಲಿನ ಪ್ರಾಕೃತಿಕ ಸೊಬಗು ಕಣ್ಣಿಗೆ ರಾಚುತ್ತದೆ. ನವ ಜೋಡಿಯ ರೋಮ್ಯಾಂಟಿಕ್ ವಿಹಾರಕ್ಕೆ ಈ ಸ್ಥಳವು ಸೂಕ್ತವಾಗಿದೆ.
SHOCKING NEWS: ಪನ್ನೀರ್ ಪ್ರಿಯರಿಗೆ ಶಾಕ್; ದಬಾರಿಯಾದ ಪನ್ನೀರ್ ಬೆಲೆ? ಎಷ್ಟಿದೆ ಗೊತ್ತಾ? | Paneer rate hike
ನೈನಿತಾಲ್: ಉತ್ತರಾಖಂಡ್ ನಲ್ಲಿ ಅನೇಕ ಅದ್ಭುತ ಪ್ರವಾಸಿ ತಾಣಗಳಿವೆ. ನೈನಿತಾಲ್ ಗಿರಿಧಾಮಕ್ಕೆ ಭೇಟಿ ನೀಡಲು ಈ ಅವಧಿ ಅತ್ಯುತ್ತಮವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಏಕಾಂತವನ್ನು ಇಷ್ಟಪಡುವವರಿಗೆ ನೈನಿತಾಲ್ ಅತ್ಯುತ್ತಮ ಪ್ರವಾಸಿ ತಾಣವಾಗಿದೆ.
ಗೋವಾ: ಮಾನ್ಸೂನ್ ಸಮಯದಲ್ಲಿ ಗೋವಾದ ಕಡಲತೀರಗಳಲ್ಲಿ ನಡೆಯುವುದು ಉತ್ತಮ ಅನುಭವ ಎಂದು ಹಲವರು ಪರಿಗಣಿಸುತ್ತಾರೆ. ತಮ್ಮಲ್ಲಿರುವ ಚಿಂತೆಗಳನ್ನು ಬಿಟ್ಟು ಎಂಜಾಯ್ ಮೂಡನಲ್ಲಿ ಇರುತ್ತಾರೆ.