ಚನ್ನಪಟ್ಟಣ: ನಾಡ ಕಚೇರಿಯಲ್ಲಿ ಪಿಂಚಣಿ ಮಾಡಿಕೊಡಲು ಹರ್ಷಿತ ಎನ್ನುವ ನೌಕರಳು 50 ಸಾವಿರ ಲಂಚ ಕೇಳುತ್ತಾ ಇದ್ದಾರೆ ಎಂದು ದೊಡ್ಡ ಮಳೂರು ಗ್ರಾಮದ 70 ವರ್ಷದ ಯಶೋಧಮ್ಮ ದೂರು ನೀಡಿದಾಗ ಸಿಟ್ಟಾದ ಡಿಸಿಎಂ ಅವರು ಜಿಲ್ಲಾಧಿಕಾರಿಗಳನ್ನು ಕರೆದು “ಕೂಡಲೇ ಇದರ ಬಗ್ಗೆ ತನಿಖೆ ಮಾಡಬೇಕು. ತಪ್ಪು ಸಾಬೀತಾದರೆ ಈ ಅಧಿಕಾರಿಯನ್ನು ಅಮಾನತು ಮಾಡಬೇಕು. ನನಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಸ್ಥಳದಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ಅಮಾನತಿಗೆ ಸೂಚನೆ ನೀಡಿದರು.

ಇಂದು ಚನ್ನಪಟ್ಟಣದಲ್ಲಿ ಮಾತನಾಡಿದಂತ ಅವರು, ಒಂದೇ ದಿನ ಪಡಿತರ ಕೊಡುತ್ತಿದ್ದಾರೆ ಎಷ್ಟು ಬಾರಿ ಮನವಿ ಮಾಡಿದರು ಕೇಳುತ್ತಿಲ್ಲ. ದೂರದ ಊರುಗಳಿಗೆ ನಡೆದುಕೊಂಡು ಹೋಗಬೇಕು ಎಂದು ಕೋಟಮಾರನಹಳ್ಳಿ ಮಂಜುಳಾ ಅವರು ದೂರು ನೀಡಿದಾಗ “ಎಲ್ಲಾ ಪಡಿತರ ವಾಟ್ಸಪ್ ಗುಂಪು ರಚನೆ ಮಾಡಿ ಮಾಹಿತಿ ನೀಡಿ. ಜನರಿಗೆ ಕಷ್ಟ ಕೊಡುತ್ತಿರುವ ವಿತರಕರ ಲೈಸೆನ್ಸ್ ರದ್ದು ಮಾಡಿ. ತಂತ್ರಜ್ಞಾನ ಮುಂದುವರೆದರು ಬಳಸಿಕೊಳ್ಳಲು ನಿಮಗೆ ಏನು ತೊಂದರೆ. ಜನರ ಕಷ್ಟ ನಿಮಗೆ ಅರ್ಥ ಆಗುವುದಿಲ್ಲವೇ? ” ಎಂದು ಆಹಾರ ಸರಬರಾಜು ಅಧಿಕಾರಿಗೆ ಸೂಚನೆ ನೀಡಿದರು.

11 ವರ್ಷಗಳ ನಂತರ ಷಟಲ್ ಬಸ್ ಪುನರಾರಂಭ

11 ವರ್ಷಗಳ ಹಿಂದೆ ರದ್ದುಗೊಂಡಿದ್ದ ಚನ್ನಪಟ್ಟಣ, ಮದ್ದೂರು ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಕೆಎಸ್ ಆರ್ ಟಿಸಿ ಷಟಲ್ ಬಸ್ ಅನ್ನು ಪುನರಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ಸಾರಿಗೆ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗರೆಡ್ಡಿ ಅವರು ತಿಳಿಸಿದರು.

“ಈ ಮಾರ್ಗದಲ್ಲಿ ಬಸ್ ಸಂಚಾರ ನಿಂತು ಹೋಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ನೌಕರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಇದನ್ನು ಮನಗಂಡು ಮತ್ತೆ ಸೇವೆ ಆರಂಭಿಸಲು ನಿರ್ಧಾರಿಸಲಾಗಿದೆ” ಎಂದರು.

Watch Video: ‘ವಿಪಕ್ಷ ನಾಯಕ ರಾಹುಲ್ ಗಾಂಧಿ’ ಒಬ್ಬ ‘ಚೈಲ್ಡ್’ ಇದ್ದಂತೆ: ಪ್ರಧಾನಿ ಮೋದಿ | PM Modi

Watch Video: ‘ವಿಪಕ್ಷ ನಾಯಕ ರಾಹುಲ್ ಗಾಂಧಿ’ ಒಬ್ಬ ‘ಚೈಲ್ಡ್’ ಇದ್ದಂತೆ: ಪ್ರಧಾನಿ ಮೋದಿ | PM Modi

Share.
Exit mobile version