ನವದೆಹಲಿ: ಭಾರತ ಸರ್ಕಾರದ ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಪ್ರತಿಭಾನ್ವಿತ, ಅನ್ವೇಷಣಾತ್ಮಕ ಮತ್ತು ಬಹುಮುಖಿ ವ್ಯಕ್ತಿತ್ವದ ಕನ್ಸಲ್ಟೆಂಟ್ನ್ ಅನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದೆ.
ಹುದ್ದೆಗಳ ವಿವರ
- ಯುವ ವೃತ್ತಿಪರರು – 20 ಹುದ್ದೆ
- ಅಸೋಸಿಯೇಟ್ – 12 ಹುದ್ದೆ
- ಕನ್ಸಲ್ಟೆಂಟ್ -21 ಹುದ್ದೆ
- ಹಿರಿಯ ಕನ್ಸಲ್ಟೆಂಟ್ -14
ಒಟ್ಟು 67 ಹುದ್ದೆಗಳಿಗೆ ಅರ್ಥಶಾಸ್ತ್ರ, ಕಾನೂನು, ಸಾರ್ವಜನಿಕ ನೀತಿ, ಡೇಟಾ ವಿಜ್ಞಾನ ಹಾಗೂ ಸಾಮಾನ್ಯ ನಿರ್ವಹಣೆ ವಿಷಯದಲ್ಲಿ ಪರಿಣಿತಿ ಹೊಂದಿರೋರಿಂದ ಅರ್ಜಿಯನ್ನು ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು https://commerce.gov.in/vacancies/ ಜಾಲತಾಣಕ್ಕೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದು. ಅಲ್ಲದೇ ಇದೇ ವೆಬ್ ಸೈಟ್ ನಲ್ಲಿ ಹೆಚ್ಚಿನ ವಿವರವನ್ನು ವೀಕ್ಷಿಸಬಹುದಾಗಿದೆ.
ಅಂದಹಾಗೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸೋದಕ್ಕೆ ಕೊನೆಯ ದಿನ ಇಂದಿನಿಂದ 21 ದಿನವಾಗಿರುತ್ತದೆ. ಅಷ್ಟರೊಳಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಸಲ್ಲಿಸಬೇಕಾಗಿದೆ.
ಪತ್ನಿಯಿಂದ ಕ್ರೌರ್ಯ ಸಾಬೀತಾದ್ರೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸ್ಬೋದು : ಹೈಕೋರ್ಟ್