ಬೆಂಗಳೂರು : ರಾಜ್ಯದಲ್ಲಿ ಇದೀಗ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದರ ಬೆನ್ನಲ್ಲೇ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳೊಂದಿಗೆ ಸಭೆ ನಗರದ ಸೂಕ್ಷ್ಮ ಪ್ರದೇಶಗಳು ಮಾತ್ರವಲ್ಲದೆ, ಎಲ್ಲಾ ಮನೆಗಳ ಸರ್ವೆ ನಡೆಸಲು ಬಿಬಿಎಂಪಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳ ಬೆನ್ನಲ್ಲೇ ಇಂದು ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ‘ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದ್ದು, ಇಲ್ಲಿಯವರೆಗೂ ರಾಜ್ಯದಲ್ಲಿ 6187 ಪ್ರಕರಣ ದಾಖಲಾಗಿದೆ. ಇದರ ನಿಯಂತ್ರಣದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಸದಾ ಮಳೆ ಬರುತ್ತಿದ್ದರೆ ಡೆಂಗ್ಯೂ ಹುಳಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಮಳೆ ಬಂದು ನಿಂತ ನೀರಿದ್ದರೆ ಅಲ್ಲಿ ಡೆಂಗ್ಯೂ ಸೊಳ್ಳೆಗಳು ರೋಗವನ್ನು ಹರಡಲು ಆರಂಭಿಸುತ್ತವೆ. ಇಂತಹ ವಾತಾವರಣದಿಂದ ರೋಗ ಹೆಚ್ಚುತ್ತದೆ. ಇನ್ನು ಕೆಪಿಎಂ ಆ್ಯಕ್ಟ್ ಪ್ರಕಾರ ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುವುದು ಕಡ್ಡಾಯವಾಗಿದೆ. ಇಷ್ಟೇ ಅಲ್ಲದೆ ರಾಜ್ಯದಲ್ಲಿ ಮತ್ತಷ್ಟು ಕೇಸ್​ಗಳು ಇರಬಹುದು, ಈ ಕುರಿತು ದಿನ ನಿತ್ಯ ಡೆಂಗ್ಯೂ ಬುಲೆಟಿನ್ ಕೊಡಲಾಗುತ್ತದೆ ಎಂದರು.

ಅಗತ್ಯ ಕ್ರಮ ಮಾಡಿಕೊಂಡ ಆರೋಗ್ಯ ಇಲಾಖೆ

ಇನ್ನು NS1 ಕಿಟ್ ಗಳನ್ನು ಖರೀದಿಸಲಾಗಿದೆ. ಡೆಂಗ್ಯೂಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ, ಪ್ಲೇಟ್ ಲೆಟ್ಸ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಬ್ಲಡ್ ಯೂನಿಟ್ ಜತೆ ಮಾತುಕತೆ ಮಾಡಲಾಗಿದೆ. ಐವಿ ಫ್ಲೂವಿಡ್​ಗಳನ್ನು ಕೊಡಲಾಗುತ್ತದೆ. ಆರಂಭದಲ್ಲಿ ಪ್ಯಾರಸಿಟಮಲ್ ಕೊಟ್ಟರೆ ಸಾಕಾಗುತ್ತದೆ. ಜೊತೆಗೆ ಈ ಕುರಿತು ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಕೇಸ್ ರಿಪೋರ್ಟ್ ಮಾಡುತ್ತಿಲ್ಲ ಅವರಿಗೂ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಹೇಳಿದರು.

Share.
Exit mobile version