ಸುಭಾಷಿತ :

Tuesday, January 28 , 2020 2:09 PM

ಶಾಕಿಂಗ್‌ ನ್ಯೂಸ್‌: ಹುಷಾರ್‌‌ ’ಸೆಕ್ಸ್‌’ನಿಂದ ಕೂಡ ಡೆಂಗ್ಯೂ ಹರಡುತ್ತೆ!


Monday, November 11th, 2019 1:43 pm

ಮ್ಯಾಡ್ರಿಡ್: ಇತ್ತೀಚಿನವರೆಗೂ ಸೊಳ್ಳೆಗಳಿಂದ ಮಾತ್ರ ಡೆಂಗ್ಯೂ ಹರಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಈಗ ಲೈಂಗಿಕತೆಯ ಮೂಲಕ ಡೆಂಗ್ಯೂ ಹರಡಿದ ವ್ಯಕ್ತಿಯ ಪ್ರಕರಣವನ್ನು ಸ್ಪ್ಯಾನಿಷ್ ಆರೋಗ್ಯ ಅಧಿಕಾರಿಗಳು ಶುಕ್ರವಾರ ಪತ್ತೆಹಚ್ಚಿದ್ದಾರೆ.

ಮ್ಯಾಡ್ರಿಡ್‍ನ 41 ವರ್ಷದ ವ್ಯಕ್ತಿಯಿಂದ. ಕಳೆದ ಸೆಪ್ಟೆಂಬರ್ ನಲ್ಲಿ ಈ ವ್ಯಕ್ತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿತ್ತು. ಆದರೆ ಈ ವ್ಯಕ್ತಿ ಡೆಂಗ್ಯೂ ಸೊಂಕು ಹರಡಿದ ಪ್ರದೇಶದಲ್ಲಿ ತಂಗಿಲ್ಲ. ಈ ನಡುವೆ ಈತನಿಗೆ ಡೆಂಗ್ಯೂ ಬಂದಿದ್ದು ಹೇಗೆ ಎಂಬುದೇ ವೈದ್ಯರಿಗೆ ಯಕ್ಷ ಪ್ರಶ್ನೆಯಾಗಿ ತಲೆಕೊರಿಯುತ್ತಿತ್ತು. ಆಗ ವೈದ್ಯರ ತಂಡ ಆ ವ್ಯಕ್ತಿಯನ್ನು ಸಂಪೂರ್ಣ ಪರೀಕ್ಷೆ ನಡೆಸಿದಾಗ, ಲೈಂಗಿಕ ಕ್ರಿಯೆ ಮೂಲಕ ಡೆಂಗ್ಯೂ ವೈರಾಣು ಆತನ ದೇಹ ಸೇರಿತು ಎನ್ನುವುದು ಪತ್ತೆಯಾಗಿದೆ.

ಕ್ಯೂಬಾ ದೇಶಕ್ಕೆ ಹೋಗಿದ್ದ ವೇಳೆಯಲ್ಲಿ ಈತ ತನ್ನ ಸಂಗಾತಿಯೊಂದಿಗೆ ಸೆಕ್ಸ್‌ ಮಾಡಿದ್ದಾನೆ, ಈ ವೇಳೆಯಲ್ಲಿ ಸಂಗಾತಿ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಳು ಎನ್ನಲಾಗಿದೆ ಹೀಗಾಗಿ ಸೆಕ್ಸ್‌ನಿಂದ ಕೂಡ ಡೆಂಗ್ಯೂ ವೈರಾಣು ಹರಡಿರುವುದು ಇದೇ ಮೊದಲ ಪ್ರಕರಣ. ಹಿಂದೆ ಈ ಬಗ್ಗೆ ತಿಳಿದಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions