ಬೆಂಗಳೂರು: ನಟ ದರ್ಶನ್‌ ಅಂಡ್‌ ಗ್ಯಾಂಗ್‌ ಸದ್ಯ ರೇಣುಕಸ್ವಾಮಿ ಕೊಲೆ ಆರೋಪದ ಮೇರೆಗೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಕಂಬಿಗಳ ಹಿಂದೆ ದಿನಗಳನ್ನು ಕಳೆಯುತ್ತಿದ್ದಾರೆ.

ಈ ನಡುವೆ ಹಲವು ಮಂದಿ ಡಿ ಗ್ಯಾಂಗ್‌ಗೆ ಸಂಬಂಧಿಸಿದ ಸಿನಿಮಾ ಟೈಟಲ್‌ಗಳಿಗೆ ಫಿಲ್ಮಂ ಚೇಂಬರ್‌ಗಳಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ ಎನ್ನಲಾಗಿದೆ. ಹಲವು ಮಂದಿ ಡಿ ಗ್ಯಾಂಗ್‌, ಡಿ ಮತ್ತು ಗ್ಯಾಂಗ್‌ ಡಿ ಗ್ಯಾಂಗ್‌ ಮರ್ಡರ್‌ ಮಿಸ್ಟ್ರ್ರಿ ಸೇರಿದಂತೆ ಹಲವು ಹೆಸರುಗಳಲ್ಲಿ ಟೈಟಲ್‌ ರಿಜಿಸ್ಟರ್‌ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸದ್ಯ ಫಿಲ್ಮ್ಂ ಚೇಬರ್‌ ಈ ಹೆಸರುಗಳನ್ನು ನೀಡದೇ ಇರುವುದಕ್ಕೆ ಮುಂದಾಗಿದೆ ಎನ್ನಲಾಗಿದೆ.

Share.
Exit mobile version