ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಅಂತಹದ್ದೆ ಘಟನೆಯೊಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸುವ ದೃಶ್ಯ ಸಾಮಾಜಿ ಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
दिल्ली में ऊबर कैब में लड़की को जबरदस्ती धकेलने का वीडियो वायरल। वीडियो में दिख रहे लड़का लड़की एक दूसरे को जानते है।
पुलिस जांच में जुटी। #DelhiPolice pic.twitter.com/duykqRr1Po
— Sonu Kumar (@Sonu_indiatv) March 19, 2023
ಪ್ರಾಥಮಿಕ ತನಿಖೆಯಲ್ಲಿ ಕಾರು ಗುರುಗ್ರಾಮ್‌ನ ರತನ್ ವಿಹಾರ್‌ನಲ್ಲಿ ನೋಂದಾಯಿಸಲಾಗಿದ್ದು, ತನಿಖೆಗಾಗಿ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದೆಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ಕ್ಯಾಬ್ ಮತ್ತು ಚಾಲಕನನ್ನು ಪತ್ತೆಹಚ್ಚಿದ್ದು , ಮೂವರು ಪ್ರಯಾಣಿಕರು ಎಲ್ಲಿಗೆ ತೆರಳಿದ್ದಾರ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆಪ್ ಮೂಲಕ ವಾಹನವನ್ನು ಬುಕ್ ಮಾಡಲಾಗಿತ್ತು. ಮಾರ್ಗಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನನಗೆ 5 ವರ್ಷ ಸ್ವತಂತ್ರ ಸರ್ಕಾರ ನಡೆಸಲು ಸಹಕಾರ ಕೊಡಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ
ಕೋವಿಡ್-19: 129 ದಿನಗಳ ನಂತರ ಭಾರತದಲ್ಲಿ 1000 ಹೊಸ ಪ್ರಕರಣಗಳ ಏಕದಿನ ಏರಿಕೆ
BIGG NEWS : ಐಸಿಸಿ ಬಂಧನ ವಾರಂಟ್ ಬಳಿಕ ರಷ್ಯಾ ಆಕ್ರಮಿತ ಮಾರಿಯುಪೋಲ್, ಕ್ರೈಮಿಯಾಗೆ ‘ಪುಟಿನ್’ ಭೇಟಿ