ದೆಹಲಿ: 10 ವರ್ಷದ ಮನೆಯಲ್ಲಿ ಆಟವಾಡುತ್ತಿದ್ದಾಗ ಸ್ಕಿಪ್ಪಿಂಗ್ ಹಗ್ಗವು ಕುತ್ತಿಗೆಗೆ ಸಿಕ್ಕಿಹಾಕಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ
ದೆಹಲಿಯ ಕರ್ತಾರ್ ನಗರದಲ್ಲಿ ನಡೆದಿದೆ.
ಬಾಲಕನು ತನ್ನ ರೂಮ್‌ನಲ್ಲಿ ಆಟವಾಡುತ್ತಿದ್ದಾಗ ಅವನ ತಾಯಿ ಮತ್ತೊಂದು ರೂಮ್‌ನಲ್ಲಿದ್ದರು. ತಂದೇ ಆ ದಿನ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ಘಟನೆ ನಂತರ ಬಾಲಕನನ್ನು ಆಸ್ಪತ್ರಗೆ ದಾಖಲಿಸಲಾಯಿತಾದರೂ, ಆತ ಈಗಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು.
ಪೋಲೀಸರ ಪ್ರಕಾರ, ಬಾಲಕ ದೂರದರ್ಶನದಲ್ಲಿ ಅಥವಾ ಆನ್‌ಲೈನ್‌ನಲ್ಲಿ ನೋಡಿದ ಸಾಹಸವನ್ನು ಅನುಕರಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿರಬಹುದು ಎಂದು ಊಹಿಸಿದ್ದು, ಅಲ್ಲಿ ನಿಖರವಾಗಿ ಏನಾಯಿತು ಎಂದು ನಿರ್ಧರಿಸಲು ತನಿಖೆ ಮುಂದುವರೆಸಿದ್ದಾರೆ.
breaking news: ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿಗೆ ಕ್ಲೀನ್ ಚಿಟ್
NCP ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಜೈಲುಪಾಲಾಗಿದ್ದ ಮರಾಠಿ ನಟಿ ಕೇತಕಿ ಚಿತಾಳೆ ಬಿಡುಗಡೆ