ಕಣ್ಣೂರು: ದೆಹಲಿಯಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಸೆಪ್ಟೆಂಬರ್ 26 ರಂದು (ಸೋಮವಾರ) ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

135 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದಿದೆ. ತಪಾಸಣೆ ಮತ್ತು ನಿರ್ವಹಣೆಗಾಗಿ ವಿಮಾನವನ್ನು ಕಣ್ಣೂರಿನಲ್ಲಿ ಲ್ಯಾಂಡ್‌ ಆಗಿದೆ. ಪ್ರಯಾಣಿಕರೆಲ್ಲರೂ ಸೇಫ್‌ ಆಗಿದ್ದಾರೆ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನಯಾನ ಸಂಸ್ಥೆಗಳು ವಿದೇಶಕ್ಕೆ ತೆರಳುವ ಪ್ರಯಾಣಿಕರನ್ನು ಇತರ ವಿಮಾನಗಳಲ್ಲಿ ಕಳುಹಿಸಲು ವ್ಯವಸ್ಥೆ ಮಾಡಿತು. ಆದರೆ ದೆಹಲಿಗೆ ಹೋಗುವ ಪ್ರಯಾಣಿಕರನ್ನು ಕಣ್ಣೂರಿನ ಎರಡು ಹೋಟೆಲ್‌ಗಳಲ್ಲಿ ಇರಿಸಲಾಗಿದೆ ಮತ್ತು ಅವರ ಪ್ರಯಾಣದ ವ್ಯವಸ್ಥೆಯನ್ನು ಮಂಗಳವಾರ(ಇಂದು) ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ತನ್ನ ಪತಿಗೆ ಪ್ರೀತಿಯಿಂದ ಹಾಡಿದ ವೃದ್ಧೆ : ಹೃದಯಸ್ಪರ್ಶಿ ʻವಿಡಿಯೋ ವೈರಲ್ ʼ | Watch

ಚಾಮರಾಜನಗರದಲ್ಲಿ ಪಿಎಪ್ಐ ಕಾರ್ಯಕರ್ತರಿಬ್ಬರ ಬಂಧನ

BIG NEWS : ಕೇಂದ್ರ ಸರ್ಕಾರ ಕ್ರಮ ಅಭಿನಂದನಾರ್ಹ, SDPI, PFI ಸಂಘಟನೆ ಬಗ್ಗೆ ವಿಸ್ತಾರವಾಗಿ ತನಿಖೆ ಅಗಲಿ : ಮುತಾಲಿಕ್‌ ಪ್ರತಿಕ್ರಿಯೆ | Sri Ram Sena chief Muthalik

Share.
Exit mobile version