ನವದೆಹಲಿ: ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ( air pollution ) ನಿಯಂತ್ರಣದಲ್ಲಿಡುವ ಪ್ರಯತ್ನವಾಗಿ, ದೆಹಲಿಯ ಅಧಿಕಾರಿಗಳು ನಿರ್ಮಾಣ ಕಾರ್ಯ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ.

ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ಎಪಿ) ನ ಮೂರನೇ ಹಂತದ ಅಡಿಯಲ್ಲಿ ಈ ಪ್ರದೇಶದಲ್ಲಿ ಎಲ್ಲಾ ಅಗತ್ಯವಲ್ಲದ ನಿರ್ಮಾಣ ಕಾರ್ಯಗಳನ್ನು ನಿಷೇಧಿಸುವಂತೆ ಕೇಂದ್ರದ ವಾಯು ಗುಣಮಟ್ಟ ನಿರ್ವಹಣಾ ಆಯೋಗ (Commission for Air Quality Management – CAQM) ದೆಹಲಿ-ಎನ್ಸಿಆರ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

“ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” ಇದು ಬಿಜೆಪಿಯ ಹೊಸ ದ್ಯೇಯವಾಕ್ಯ – ಟ್ವಿಟ್ ನಲ್ಲಿ ಕಾಂಗ್ರೆಸ್ ವ್ಯಂಗ್ಯ

ದೆಹಲಿಯ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಇಂದು ಸಂಜೆ 4 ಗಂಟೆಗೆ 407 ರಷ್ಟಿತ್ತು. 201 ಮತ್ತು 300 ರ ನಡುವಿನ ಎಕ್ಯೂಐ ಅನ್ನು ‘ಕಳಪೆ’, 301 ಮತ್ತು 400 ‘ತುಂಬಾ ಕಳಪೆ’ ಮತ್ತು 401 ಮತ್ತು 500 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ.

ಎಕ್ಯೂಐ 447 ಆಗಿದ್ದ ನವೆಂಬರ್ 4 ರ ನಂತರ ದೆಹಲಿಯಲ್ಲಿ ಮಾಲಿನ್ಯದ ಮಟ್ಟವು ‘ತೀವ್ರ’ ವರ್ಗವನ್ನು ಪ್ರವೇಶಿಸಿತ್ತು, ಅದರ ನಂತರ, ಅಗತ್ಯ ಯೋಜನೆಗಳನ್ನು ಹೊರತುಪಡಿಸಿ ದೆಹಲಿ-ಎನ್ಸಿಆರ್ನಲ್ಲಿ ಎಲ್ಲಾ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ನಿಷೇಧ ಹೇರುವಂತೆ ಸಿಎಕ್ಯೂಎಂ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಶಿಗ್ಗಾಂವ್ ಗೆ ಪ್ರಗತಿಪರ ಕೃಷಿಯನ್ನು ಪರಿಚಯಿಸಿದವರು ದಿ.ಹನುಮಂತಗೌಡ್ರು – ಸಿಎಂ ಬೊಮ್ಮಾಯಿ

Share.
Exit mobile version