ಸುಭಾಷಿತ :

Monday, February 24 , 2020 1:45 AM

ದೀಪಿಕಾ ‘JNU’ ಎಂಟ್ರಿ ಎಫೆಕ್ಟ್ : ಸಿನಿಮಾ ಬಳಿಕ ‘ಡಿಪ್ಪಿ’ ಜಾಹೀರಾತಿಗೂ ದೊಡ್ಡ ಪೆಟ್ಟು….!


Monday, January 13th, 2020 9:31 pm

ನವದೆಹಲಿ : ಹಿಂಸಾಚಾರ ವಿರೋಧಿಸಿ ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಬೆಂಬಲ ಸೂಚಿಸಿದ್ದರು. ಇದು ದೇಶದಾದ್ಯಂತ ವಿವಿಧ ಸಂಘಟನೆ, ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆ ದೀಪಿಕಾ ಪಡುಕೋಣೆ ಅಭಿನಯದ ಚಫಾಕ್ ಸಿನಿಮಾಗೂ ಎಫೆಕ್ಟ್ ಆಗಿತ್ತು.

ದೀಪಿಕಾ ಜೆಎನ್ ಯು ಭೇಟಿ ಸಿನಿಮಾದ ಬಳಿಕ ಜಾಹೀರಾತಿಗೂ ದೊಡ್ಡ ಪೆಟ್ಟು ಕೊಟ್ಟಿದೆ.  ಹೌದು, ಚಪಾಕ್ ಸಿನಿಮಾದ ಮೇಲೆ ಜೆಎನ್ ಯು ಎಂಟ್ರಿ ಬೀರಿರುವ ಪರಿಣಾಮದ ಎಫೆಕ್ಟ್ ಸದ್ಯ ಅವರು ನಟಿಸುತ್ತಿರುವ ಜಾಹೀರಾತುಗಳ ಮೇಲೂ ಕೂಡ ನೆಗೆಟಿವ್ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.

ಯೆಸ್, ಡಿಪ್ಪಿ ಸದ್ಯ ಬ್ರಿಟಾನಿಯಾ ಗುಡ್ ಡೇ. ಲೋರಿಯಲ್, ತನಿಷ್ಕ್, ವಿಸ್ತಾರಾ ಏರ್ ಲೈನ್ಸ್ ಸೇರಿದಂತೆ ಹಲವು ಜಾಹೀರಾತುಗಳ ಅಂಬಾಸಿಡರ್ ಆಗಿದ್ದಾರೆ, ಆದ್ರೆ ಯಾವಾಗ ಜೆಎನ್ ಯು ಪ್ರವೇಶ ಮಾಡಿದ್ರೋ ಅವಾಗ ಚಪಾಕ್ ಸಿನಿಮಾಗೆ ಭಾರಿ ಪೆಟ್ಟು ಬಿದ್ದಿತು, ಗಲ್ಲಾಪೆಟ್ಟಿಗೆಯಲ್ಲಿ ಛಪಾಕ್ ಸಿನಿಮಾ ಹಿನ್ನೆಡೆ ಗಳಿಸಿತು. ಇದಾದ ಬಳಿಕ ಹಲವು ಕಂಪನಿಗಳು ದೀಪಿಕಾ ಅವರು ಅಭಿನಯಿಸಿದ ಜಾಹೀರಾತು ಬಿಟ್ಟು ಬೇರೆ ಜಾಹೀರಾತುಪ್ರಸಾರ ಮಾಡಲು  ನಿರ್ಧರಿಸಿದೆಯಂತೆ, ದೀಪಿಕಾ ಅವರ ಸಿನಿಮಾವನ್ನು ಜನರು ಧಿಕ್ಕರಿಸಿದ್ದರಿಂದ ತಮ್ಮ ರ್ಬ್ಯಾಂಡ್ ಮಾರ್ಕೆಟ್ ಗಳ ಮೇಲೆ ಹೊಡೆತ ಬೀಳುತ್ತಿದೆ. ಆದ್ದರಿಂದ ದೀಪಿಕಾ ಅವರಿರುವ ಜಾಹೀರಾತು ಪ್ರಸಾರ ಮಾಡದಿರಲು ಆ್ಯಡ್ ಕಂಪನಿಗಳು ನಿರ್ಧರಿಸಿದೆಯಂತೆ.

ಜೆಎನ್ ಯು ಸಬರಮತಿ ಟಿ ಪಾಯಿಂಟ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದರು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions